Saturday, 21 March 2015

ಮೈಸೂರಿನ ಕೆರೆಗಳ ಇಂದಿನ ಸ್ಥಿತಿ- ಗತಿ

ಭೂಗೋಲದ ಮುಕ್ಕಾಲುವಾಸಿ ನೀರೇ ಇರುವಾಗ ನೀರಿಗೇಕೆ ಈ ಹಾಹಾಕಾರ? ಜಲಯುದ್ಧ? ಮೂರನೇ ಮಹಾಯುದ್ಧವಾಗುವುದಾದರೆ ಅದು ನೀರಿಗಾಗಿಯೇ ಅಂತೆ! ಹಾಗಿರುವಾಗ ಸಿಹಿನೀರಿನ ಸೆಲೆಗಳನ್ನು ಉಳಿಸಿಕೊಳ್ಳಬೇಕು ಅಲ್ಲವೇ? ಮೈಸೂರಿನ ಕೆರೆಗಳ ಇಂದಿನ ಸ್ಥಿತಿ-ಗತಿಗಳನ್ನೊಮ್ಮೆ ಅವಲೋಕಿಸೋಣ. ಮೈಸೂರಿನ ಪ್ರಮುಖ ಕೆರೆಗಳೆಂದರೆ ಕುಕ್ಕರ ಹಳ್ಳಿ ಕೆರೆ, ಲಿಂಗಾಂಬುದಿ ಕೆರೆ, ಕಾರಂಜಿ ಕೆರೆ, ದೇವನೂರು ಕೆರೆ ಮತ್ತು ದಳವಾಯಿ ಕೆರೆ.
ಕುಕ್ಕರಹಳ್ಳಿ ಕೆರೆ
ಈ ಕೆರೆ ಮೈಸೂರಿನ ಹೃದಯಭಾಗದಲ್ಲಿದ್ದು, ಈ ನಗರದ ಶ್ವಾಸಕೋಶವಿದ್ದಂತೆ ಇದೆ. 1864ರಲ್ಲಿ ಸುತ್ತುಮುತ್ತಲಿನ ಹಳ್ಳಿಗಳ ಕೃಷಿ ನೀರಾವರಿಗೆಂದು ಮುಮ್ಮಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ್ದು, ಕ್ರಮೇಣ ನಗರದ ಮನೆಗಳಿಗೆ ಕುಡಿಯುವ ನೀರು ಪೂರೈಕೆಗೆ ಬಳಕೆಯಾಗುತ್ತಿತ್ತು. ನಗರ ಬೆಳೆದಂತೆ, ಅಭಿವೃದ್ಧಿಗೊಂಡಂತೆ ಕೆರೆಗೆ ಚರಂಡಿ ನೀರು, ರಾಸಾಯನಿಕಗಳು ಸೇರಲಾರಂಭಿಸಿದವು. ಇದರಿಂದ ಕೆರೆಯಲ್ಲಿ ಪಾಚಿಸಸ್ಯಗಳು, ಜೊಂಡು, ಇತ್ಯಾದಿ ಕಲೆ ಸಸ್ಯಗಳು ಸಮೃದ್ಧವಾಗಿ ಬೆಳೆಯಲಾರಂಭಿಸಿದವು. ಏಕೆಂದರೆ ಅವುಗಳಿಗೆ ಬೇಕಾದ ಪೋಷಕಾಂಶಗಳು ಹೇರಳವಾಗಿ ಚರಂಡಿ ನೀರಿನಿಂದ ದೊರಕುವುದು. ಈ ರೀತಿಯ ಯೂಟ್ರಾಫಿಕೇಶನ್ ಆಗುವುದರಿಂದ ಕೆರೆಯಲ್ಲಿ ಹೂಳು ತುಂಬುವುದು ಹೆಚ್ಚಾಯಿತು.
ಹಿನಕಲ್, ಬೋಗಾದಿ, ಕುದುರೆಮಾಳ, ಮಾನಸ ಗಂಗೋತ್ರಿ, ಮೂಲಕ ಹಾದುಹೋಗಿದ್ದ ದೀವಾನ್ ಪೂರ್ಣಯ್ಯ ನಾಲೆಕೆರೆಗೆ ನೀರನ್ನು ಹರಿಸಿ ತರುವ ಪ್ರಮುಖ ಮಾರ್ಗ. ಮಳೆನೀರಿನ ಸಂಗ್ರಹಣಾ ಪ್ರದೇಶ (ಕ್ಯಾಚ್‌ಮೆಂಟ್ ಏರಿಯಾ) ಸುಮಾರು 414 ಚ. ಕಿ. ಮೀ. ಹೊಂದಿರುವ ಕುಕ್ಕರಹಳ್ಳಿ ಕೆರೆಗೆ ಈ ಪ್ರದೇಶಗಳಿಂದ ನೀರು ಬರುವುದಕ್ಕೆ ತಡೆಯುಂಟಾಯಿತು. ನಗರ ಬೆಳೆದಂತೆಲ್ಲಾ ನಾಲಾಪ್ರದೇಶವೂ ಒತ್ತುವರಿಗೊಂಡು ಹೇಸನೀರು ಕೆರೆಗೆ ಪ್ರವೇಶಿಸುವುದನ್ನು ತಡೆಹಿಡಿದಂತಾಯಿತು. ಒಂದೆಡೆ ಹೂಳು, ಪಾಚಿ, ಜೊಂಡು; ಮತ್ತೊಂದೆಡೆ ಹೊಸನೀರುಬರುವ ಮಾರ್ಗ ಬಂದಾಗಿರುವುದು; ಹಳೆಯನೀರಿಗೆ ಹೊರಹಾದಿ ಇಲ್ಲದಿರುವುದು; ಇದರಿಂದ ಕೆರೆ ಸಂಪೂರ್ಣ ಅವಸಾನದೆಡೆಗೆ ಸಾಗಿತ್ತು. 1981- 2001ರ ನಡುವೆ ಅನೇಕ ರಾಸಾಯನಿಕ- ಜೈವಿಕ ಪರೀಕ್ಷೆಗಳನ್ನು ವೈಜ್ಞಾನಿಕವಾಗಿ ವಿವಿಧ ವಿಶ್ವ ವಿದ್ಯಾನಿಲಯಗಳಲ್ಲಿ ನಡೆಸಲಾಗಿದ್ದು, ಕೆರೆ ವಿನಾಶದತ್ತ ಸರಿಯುತ್ತಿರುವುದನ್ನು ಸಾರಿ ತಿಳಿಸಿದವು. ಆದ್ರ ಪ್ರಕಾರ, ರಾಸಾಯನಿಕ ಅಂಶಗಳು ಜೈವಿಕ ಘಟಕಗಳಿಗಿಂತಲೂ ಹೆಚ್ಚಿದ್ದವು. ಪಾಚಿ ಸಸ್ಯಗಳ ಅತ್ತೇವೆ ಬೆಳವಣಿಗೆ ( ಆಲ್ಗಲ್ ಬ್ಲೂಮ್) ಯಿಂದಾಗಿ ಹಾಗೂ ಅವಿಗಳ ವಿಘಟನೆಯಿಂದಾಗಿ ಜೀವ ರಾಸಾಯನಿಕ ಅಂಶಗಳ ಸಾಂದ್ರತೆ ಹೆಚ್ಚಿ ವಿದ್ಯುದ್ವಿಚ್ಛೇದ್ಯಗಳ ( ಎಲೆಕ್ಟ್ರೊಲಿಟ್ಸ್) ಹೆಚ್ಚುವಿಕೆ, ಕರಗಿದ ಆಮ್ಲಜನಕದ ಕೊರತೆ, ಸಾರಜನಕ ಹಾಗೂ ಫಾಸ್ಫೇಟ್ಗಳ ಹೆಚ್ಚಳ, ಪಾಚಿ ಸಸ್ಯಗಳ ಹೆಚ್ಚಳದಿಂದಾಗಿ ಮತ್ತಷ್ಟು ಯೂಟ್ರಾಫಿಕೇಶನ್ ಹೆಚ್ಚಾಯಿತು.
ಈ ಎಲ್ಲಾ ಕಾರಣಗಳಿಂದ ಮತ್ತು ಅತೀವ ಮಲಿನ ನೀರಿನ ಸೇರ್ಪಡೆಯಿಂದ ಕುಕ್ಕರಹಳ್ಳಿ ಕೆರೆಯ ನೀರು ಯಾವುದೇ ರೀತಿಯ ಬಳಕೆಗೂ ಯೋಗ್ಯವಲ್ಲದ್ದಾಯಿತು. ಹೈಡ್ರೊಜನ್ ಸಲ್ಫೈಡ್ ಅನಿಲದ ಹೆಚ್ಚಿದ ಪ್ರಮಾಣ ಈ ಮಾಲಿನ್ಯವನ್ನು ಖಚಿತಪಡಿಸುತ್ತದೆ. ಸಾಲ್ಮೊನೆಲ್ಲ, ಪ್ರೋಟಿಯಸ್, ಸಿಟ್ರೋಬಾಕ್ಟೇರ್, ಮತ್ತು ಕ್ಲೆಬ್ಸಿಎಲ್ಲ ಪ್ರಬೇಧಗಳ ಬೆಳೆಯುವಿಕೆಯೂ ಇದೆ ಅಂಶವನ್ನು ಪುಷ್ಟೀಕರಿಸುತ್ತದೆ. ಜೈವಿಕ ಸೂಚಕ ( ಬೈಯೊಲಾಜಿಕಲ್ ಇಂಡಿಕೇಟರ್ಸ್) ಗಳಾದ ಕ್ಲಾರಾಕಾಕಲ್ಸ್, ಡೆಸ್ಮಿಡ್ಗಳು, ಡಯಾಟಂಗಳು, ನೀಲಿ-ಹಸಿರು ಪಾಚಿ, ಯುಗ್ಲಿನಾಯಿಡ್ಗಳು, ನೀರಿನ ಆರೋಗ್ಯವನ್ನು ಎಷ್ಟು ಹದಗೆಟ್ಟಿದೆಯೆಂದು ಸೂಚಿಸುತ್ತವೆ. ಈ ಎಲ್ಲ ಪ್ರಬೇಧಗಳ ಇರುವಿಕೆ, ಜೀವ ರಾಸಾಯನಿಕಗಳ ಹೆಚ್ಚಳದಿಂದಾಗಿ ಕೆರೆಯ ನೀರಿನ ಜೈವಿಕ ಆಮ್ಲಜನಕದ ಬೇಡಿಕೆ( BOD) ಹೆಚ್ಚಾಗಿದೆ. BOD ಹೆಚ್ಚಿದಷ್ಟೂ ಜೀವಿಗಳಿಗೆ ಜೀವಿಸಲು ಬಲು ಕಷ್ಟ, ಅಸಾಧ್ಯ.
ಪಕ್ಷಿಗಳ ಮೇಲಿನ ಪರಿಣಾಮ
ಒಂದು ಕಾಲದಲ್ಲಿ ಸುಮಾರು 176 ಪ್ರಬೇಧಗಳಿಗೆ ಸೇರಿದ ( ವಲಸೆ ಪಕ್ಷಿಗಳೂ ಸೇರಿ) 10 ರಿಂದ 15 ಸಾವಿರ ಪಕ್ಷಿಗಳು ಚಳಿಗಾಲದಲ್ಲಿ ವಿಶ್ರಮಿಸಲು ಬರುತ್ತಿದ್ದವು. ಮ್ಯಾನ್( MAN) ಸಂಸ್ಥೆಯು ಪ್ರತಿವರ್ಷವೂ ವ್ಯವಸ್ಥಿತವಾಗಿ ಪಕ್ಷಿವೀಕ್ಷಣೆಯನ್ನು ಈ ಕೆರೆಯಲ್ಲಿ ಏರ್ಪಡಿಸುತ್ತಿತ್ತು. ಕಳೆದ ಒಂದು ದಶಕದಲ್ಲಿ ಕೆರೆಯ ಯುಟ್ರೋಫಿಕ್ ಮಟ್ಟ ಹೆಚ್ಚಾದಂತೆಯೂ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ, ಪಕ್ಷಿದ್ವೀಪದಲ್ಲಿ ಇಂದು ನಾವು ಸುಮಾರು 2 ಸಾವಿರ ಪಕ್ಷಿಗಳನ್ನಷ್ಟೆ ಕಾಣಬಹುದು. ಹೆಜ್ಜಾರ್ಲೆ,ನೀರುಕಾಗೆ, ಬಣ್ಣದ ಕೊಕ್ಕರೆ, ಬಾಯ್ಕಳಕ, ರಾತ್ರಿ ಬಕ, ಚಮಚದ ಕೊಕ್ಕು ಹಕ್ಕಿ, ಹಾವಕ್ಕಿ ಇವುಗಳು ಪ್ರಮುಖವಾದವು.
ಬರ್ಡ್ ಲೈಫ್ ಇಂಟರ್‌ನ್ಯಾಶನಲ್ ಸಂಸ್ಥೆಯು ಈ ಕೆರೆಯನ್ನು ಕರ್ನಾಟಕದ 38 ಪ್ರಮುಖ ಪಕ್ಷಿತಾಣಗಳಲ್ಲಿ ( ಇಂಪಾರ್ಟೆಂಟ್ ಬರ್ಡ್ ಏರಿಯಾ- IBA)   ಎಂದು ದಾಖಲಿಸಿದೆ. IBA ಕೋಡ್ IN-KA-20 ಹೊಂದಿದೆ. ಇಂದು ಕಾಣುವ ಪ್ರಬೇಧಗಳಲ್ಲಿ ಬಹುಪಾಲು ಅಳಿವಿನಂಚಿನಲ್ಲಿವೆಯೆಂದು ಇಂಡೋ- ಮಲೇಯನ್ ಜೀವಾವಾಸದ 12 ಪಕ್ಷಿ ಪ್ರಬೇಧಗಳ ಪೈಕಿ 5 ಮಾತ್ರ ಉಳಿದಿವೆಯೆಂದೂ, ಇದು ಪಕ್ಷಿ ಸಂರಕ್ಷಿತ ವಲಯವೆಂದೂ ಘೋಷಿಸಲಾಗಿದೆ.
ಒಂದು ಜೀವಂತ, ಆರೋಗ್ಯಕರ ಕೆರೆಗೆ ಬಂದೊದಗಿರುವ  ಆಪತ್ತು ಇದು. ಸಾಲದೆಂಬಂತೆ ಕೆರೆಯ ಒಡೆತನವನ್ನು ಹೊಂದಿರುವ ಮೈಸೂರು ವಿಶ್ವ ವಿದ್ಯಾನಿಲಯವು ಜೀವ ಸಂರಕ್ಷಣಾ ಕಾರ್ಯಗಳಿಗೆ ಬದಲಾಗಿ, ಜನಪ್ರಿಯ ಪ್ರವಾಸಿ ತನ್ನವನ್ನಾಗಿ ಈ ಕೆರೆಯನ್ನು ಪರಿವರ್ತಿಸಲು ಹೊರಟಿದೆ. ಇದರಿಂದ ಕೆರೆ ಮತ್ತಷ್ಟು ಹಾಳಾಗುವುದೇ ಹೊರತು ಖಂಡಿತ ಜೀವ ಸಂಕುಲಗಳ ಆವಾಸವಾಗಲಾರದು.
ಲಿಂಗಾಂಬುದಿ ಕೆರೆ
1828ರಲ್ಲಿ ಗ್ರಾಮೀಣ ಕೆರೆಯಾಗಿ ಇದನ್ನು ನೀರಾವರಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮುಮ್ಮಡಿ ಕೃಷ್ಣರಾಜ ಒಡೆಯರ್- ಲಿಂಗರಾಜಮ್ಮಣ್ಣಿ ದಂಪತಿಗಳು ಕಟ್ಟಿಸಿದರು. ನಂತರದ ದಿನಗಳಲ್ಲಿ ಮೀನುಗಾರಿಕೆಗೆ, ರಾಸು ತೊಳೆಯಲು, ಬಟ್ಟೆ ಒಗೆಯಲು, ಹೀಗೆ ಬೇರೆಯ ಉದ್ದೇಶಗಳಿಗೆ ಬಳಕೆಯಾಗಲು ಪ್ರಾರಂಭವಾಯಿತು.
ಅರಣ್ಯ ಇಲಾಖೆಗೆ ಸೇರಿದ ಈ ಕೆರೆಯ IBA ಕೋಡ್ IN-KA-22 ಆಗಿದೆ. ಅಳಿವಿನಂಚಿನಲ್ಲಿರುವ ಈ ಕೆರೆಯ ವಾಸಿಗಳಾದ ಪಕ್ಷಿ ಗೆಳೆಯರೆಂದರೆ ಹೆಜ್ಜಾರ್ಲೆ, ದೊಡ್ಡ ಮಚ್ಚೆಯುಳ್ಳ ಹದ್ದು, ಪೂರ್ವ ಸಾಮ್ರಾಜ್ಯದ ಹದ್ದು ಮತ್ತು ಇತರ ಕೆದಕಿ ಮೇಯುವ ಹಕ್ಕಿಗಳು.
MAN ಸಂಸ್ಥೆಯ ಸತತ ಪ್ರಯತ್ನದಿಂದಾಗಿ 2001ರಲ್ಲಿ ಲಿಂಗಾಂಬುದಿ ಪಕ್ಷಿ ತಾಣವೆಂದು, 2003ರಲ್ಲಿ  ಸಂರಕ್ಷಿತ ಪ್ರದೇಶವೆಂದು ಈ ಕೆರೆಯು ಘೋಷಿತವಾಯಿತು. ಇಟ್ಟಿಗೆ ಕಾರ್ಖಾನೆಗಳಂತಹ ಕಲುಷಿತಗೊಳಿಸಬಲ್ಲ 20ಕ್ಕೂ ಹೆಚ್ಚು ಉದ್ಯಮಗಳು ಮೊದಲು ಇಲ್ಲಿದ್ದವು. ಪ್ರಜ್ಞಾವಂತರ ಸಕಾಲಿಕ ಕ್ರಮಗಳಿಂದಾಗಿ ಇಂದು ಒಂದೂ ಇಲ್ಲ.
ಕಾರಂಜಿ ಕೆರೆ
ಮೈಸೂರು ಮೃಗಾಲಯದ ಸ್ವಾಮ್ಯದಲ್ಲಿರುವ ಈ ಕೆರೆ 55 ಹೆಕ್ಟೇರ್ ವೈಶಾಲ್ಯವನ್ನು ಹೊಂದಿದೆ. ಕುರುಬರಹಳ್ಳಿ, ಸಿದ್ಧಾರ್ಥನಗರಗಳಂತಹ ಸುತ್ತುಮುತ್ತಲಿನ ಬಡಾವಣೆಗಳಿಂದ ಚರಂಡಿ ನೀರು ಒಳಹರಿದು ಮಲಿನಗೊಂಡಿದ್ದರೂ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸತತ ಪ್ರಯತ್ನದಿಂದ ಕೆರೆ ನವೀಕರಣವಾಗಿದ್ದಲ್ಲದೆ, ಅತ್ಯುತ್ತಮ ಪಕ್ಷಿಮನೆ ( ಏವಿಯರೀ), ಚಿಟ್ಟೆ ವನಗಳನ್ನು ಹೊಂದಿದೆ. ನೈಸರ್ಗಿಕವಾಗಿ ಇಲ್ಲಿಗೆ ಬರುವ ವಲಸೆ ಪಕ್ಷಿಗಳೆಂದರೆ ಹೆರೋನ್ ಮತ್ತು ಎಗ್ರೆಟ್ಗಳಂತಹವು.
ರಾಜೀವನಗರದ ಬಳಿಯ ದೇವನೂರು ಕೆರೆ ಸದ್ಯಕ್ಕೆ ಜೀವಂತವಿದ್ದರೂ, ಯೂಟ್ರಾಫಿಕೇಶನ್ ಭಯದ ನೆರಳಲ್ಲೇ ಇದೆ. N.R. ಮೊಹಲ್ಲ ಮುಂತಾದ ಸುತ್ತುಮುತ್ತಲಿನ ಪ್ರದೇಶಗಳಿಂದ ಹರಿದುಬರುತ್ತಿರುವ ಕೊಳಚೆ, ಚರಂಡಿ ನೀರು ಕೆರೆಯ ಆರೋಗ್ಯವನ್ನು ಹದಗೆಡಿಸುತ್ತಿವೆ.
ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆಯು ಇದೆ ಸ್ಥಿತಿಯಲ್ಲಿದೆ. ಅಲ್ಲಿಗೆ ಹರಿದು ಬರುತ್ತಿರುವ ಒಳಚರಂಡಿ ನೀರು ಅಧಿಕ ಪ್ರಮಾಣದಲ್ಲಿದೆ.
ಮೈಸೂರಿನ ಪ್ರಮುಖ ನೀರಿನ ವಲಯಗಳಾದ ಈ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣಾ ಕಾರ್ಯಗಳು ಇಂದಿನ ತುರ್ತು. ವಿಶ್ವ ಜೌಗುಭೂಮಿದಿನ - 2015ರ ಘೋಷವಾಕ್ಯದಂತೆ  - " ನಮ್ಮ ಭವಿಷ್ಯಕ್ಕಾಗಿ ತೇವ ಭೂ ಪ್ರದೇಶಗಳು"  ಎಂಬಂತೆ, ನಮ್ಮೂರಿನ ಕೆರೆಗಳನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ.

 - ಗೀತಾ. ಏಚ್


Monday, 2 February 2015

Film Festival on Wetland Issues kick started


The six day’s Film Festival on Wetlands organized by Hasiru Hejje and Regional Museum of Natural History to mark the World Wetland Day-2015 was inaugurated by renowned artist and Social activist Badal Nanjunda Swamy at the Auditorium of the Regional Museum of Natural History.


In a gathering of a hundred college students, most of them from the JSS Law college Mrs. Mujeba Khanum, Educational staff of the Museum welcomed the gathering and Mr. Manu K  gave an introduction to the significance of the day . This day in 1972, on the shores of Caspian Sea at a fishing village called Ramsar, over 50 heads of Nations met to discuss the plight of Wetlands and their inhabitants, he said. Ever since, there has been a constant increase in the membership of Nations more and more wetland sites are identified for conservation. The call of the year is Join Us in conservation of Wetlands.  He mentioned the legacy of lake conservation movement in Mysore and how in spite of its success the pressure on them remains same. While there are external threats of encroachment upon many wetlands the internal mis-management and land use change in the disguise of development are also a serious threat to the wetland species.

Inaugurating the festival Mr. Badal expressed happiness about the enthusiasm of the participants and explained to them how the lure of development mutes common man against the loss of parks and lakes. He made special mention to Kukkarahalli his home village where the custodians are the University of Mysore. In spite of all the professor and technical know how in them, no body raises their voice against an atrocity against Nature. While the management heads for an all out effort to spin money through human centric projects, the academicians turn a blind eye… what role would they be to their students he asked.


Mrs. Mujeba Khanum who thanked the guests and the gathering also mentioned special thanks to the Press for their coverage which led to the booking of all the shows even before the inaugural. 

Thursday, 29 January 2015

Celebration of World Wetland Day 2015


On account of the World Wetland Day being celebrated world over, we are conducting a six day Film festival in collaboration with the Regional Museum of Natural History, Siddartha Nagar Mysore.  The festival will begin on the 2nd February 2015 and four films will be screened in two sessions every day at the Auditorium of the RMNH.  The films are based on the water and wetland conservation themes and highlight the importance of precious water and the fragile ecosystems they support. The beneficiaries of the film screening would be school children and visitors to the museum. The content of the films is ideal for the age group of 12 to 18 years and the screenings are summarized as follows:


10.15 am  to 12.00 noon

1.30 pm to 3.30 pm
02-02-15
onwards
a.   One Water        59 min.
Directed by: Ali Habashi and Sanjeev Chaterjee
b.   Point Calimare; Little Kingdom by the Coast       25min.
Dircted by: Sheker Dattatri

a.     Hawai: Message in the Waves  48 min.
Narrated by: Lokepa Naeole
b.    Chilika; Jewl of Odisha             22 min.
Directed by : Sheker Dattatri



   We request you to make use of this unique opportunity and send your children for the screenings. The auditorium would take 120 students per show and the organizers request the school authorities to intimate in advance for block booking of the seats to 9886383793 or 9902441987.

Entry Free.

Tuesday, 27 January 2015

ವಿಶ್ವ ಜೌಗು ಭೂಮಿ ದಿನ - ವರ್ಲ್ಡ್ ವೆಟ್‌ಲ್ಯಾಂಡ್ ಡೇ



ಕಣ್ಣ ಮುಂದೆಯೇ ಕಳೆದುಹೋಗುತ್ತಿರುವ ಕೆರೆ - ಕಾಲುವೆಗಳ ಪತ್ತೆಗೆ ಯಾರಿಗೆ ದೂರು ಕೊಡೋಣ? ಕೊಟ್ಟರೂ ಯಾರಾದರೂ ಹುಡುಕಿಕೊಟ್ಟಾರೆಯೇ? ಹುಡುಕಿದರೂ ಅವು ಮೂಲ ಸ್ವರೂಪದಲ್ಲಿ ಸಿಕ್ಕುತ್ತವೆಯೇ?
ಕಳೆದ ಮೂರು ದಶಕಗಳಲ್ಲಿ ಮೈಸೂರಿನ ಎರಡು ಡಜನ್ನಿಗೂ ಹೆಚ್ಚು ಕೆರೆಗಳು ಕಣ್ಮರೆಯಾಗಿವೆ. ಈಗ ಅಳಿದುಳಿದಿರುವ ಮೂರು ಮತ್ತೊಂದು ಕೆರೆಗಳೂ ಹೇಳಿಕೊಳ್ಳುವಂಥ ಸುಸ್ಥಿತಿಯಲ್ಲಿಲ್ಲ. 8 - 10 ಅಡಿಯ ಆಳದಲ್ಲಿ ನೀರು ಸಿಗುತ್ತಿದ್ದ ಭಾವಿಗಳೂ ಈಗ ಬರಿದಾಗಿವೆ. ಕೊರೆಸಿ,ಕೊರೆಸಿ ಅಡಿಗಡಿಗೂ ತೆಗೆದ ಕೊಳವೆ ಭಾವಿಗಳಲ್ಲಿ ನೂರಾರು ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಅಂತರ್ಜಲವೂ ಬರಿದಾಗಿದೆ ಎಂದೇ ಇದರ ಅರ್ಥ.
ಭೂಗೋಲದ ಮುಕ್ಕಾಲುವಾಸಿ ನೀರೇ ಇರುವಾಗ ನೀರಿಗೇಕೆ ಈ ಹಾಹಾಕಾರ? ಜಲಯುದ್ಧ? ಮೂರನೇ ಮಹಾಯುದ್ಧವಾಗುವುದಾದರೆ ಅದು ನೀರಿಗಾಗಿಯೇ ಅಂತೆ! ಹಾಗಿರುವಾಗ ಸಿಹಿನೀರಿನ ಸೆಲೆಗಳನ್ನು ಉಳಿಸಿಕೊಳ್ಳಬೇಕು ಅಲ್ಲವೇ? ನೀರಿನ ಸೆಲೆಗಳ ಸಂರಕ್ಷಣೆ ಹಾಗೂ ವಿವೇಚನಾಯುತ ಸದ್ಬಳಕೆಗಾಗಿ ಪ್ರತಿವರ್ಷವೂ ಫೆಬ್ರವರಿ 2ನೇ ತಾರೀಕಿನಂದು ವಿಶ್ವ ತೇವ ಭೂ ದಿನ( ವರ್ಲ್ಡ್ ವೆಟ್‌ಲ್ಯಾಂಡ್ ಡೇ) ಎಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಕ್ಯಾಸ್ಪಿಯನ್ ಸಮುದ್ರ ತೀರದಲ್ಲಿರುವ ಇರಾನಿನ ರಾಂಸರ್ಎಂಬಲ್ಲಿ 1971 ರ ಫೆಬ್ರವರಿ 2 ರಂದು ನಡೆದ ಸಮಾವೇಶದಲ್ಲಿ ಜೌಗು ಪ್ರದೇಶದ( ತೇವ ಪ್ರದೇಶದ) ಸಂರಕ್ಷಣೆ ಹಾಗೂ ಅದರ ವಿವೇಚನಾಯುತ ಉಪಯೋಗಕ್ಕಾಗಿ ಚರ್ಚೆ ನಡೆಯಿತು. ಅದಕ್ಕಾಗಿ ರೂಪುರೇಷೆಗಳನ್ನು ರಚಿಸಲಾಯಿತು. 1975ರಲ್ಲಿ ಆ ತೀರ್ಮಾನವನ್ನು ರಾಂಸಾರ್‌ನಲ್ಲಿ ಜಾರಿಗೆ ತರಲಾಯಿತು. ಅಂದಿನಿಂದ ಪ್ರಪಂಚದ ನಾನಾ ಭಾಗಗಳಲ್ಲಿರುವ 99ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಈ ದಿನವನ್ನು ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತಿದೆ.
"ಸ್ಥಳೀಯ ಮತ್ತು ರಾಷ್ಟ್ರೀಯ ಕಾರ್ಯ ಚಟುವಟಿಕೆಗಳಿಂದ ಹಾಗೂ ಅಂತರ್ರಾಷ್ಟ್ರೀಯ ಸಹಕಾರದ ಮೂಲಕ ತೇವ ಭೂಪ್ರದೇಶದ ಸಂರಕ್ಷಣೆ ಮತ್ತು ವಿವೇಚನಾಯುತ ಸದ್ಬಳಕೆಯಿಂದ ಸುಸ್ಥಿರ ಅಭಿವೃದ್ಧಿಯ ಸಾಧನೆಗಾಗಿ ಕೊಡುಗೆ" ಎಂಬುದು ರಾಂಸಾರ್ ಸಮಾವೇಶದ ಧ್ಯೇಯವಾಕ್ಯ.

ತೇವ ಭೂಪ್ರದೇಶಗಳು( ವೆಟ್‌ಲ್ಯಾಂಡ್) ಎಂದರೇನು?
ಕೆರೆ, ಸರೋವರ, ತಟಾಕ, ನದಿ, ಅಂತರ್ಜಲ, ಜೌಗು ಪ್ರದೇಶಗಳು, ತೇವಯುಕ್ತ ಹುಲ್ಲುಗಾವಲುಗಳು, ಕೆಸರು ನೆಲ, ಓಯಸಿಸ್ಗಳು, ನದಿ ಮುಖಜ ಭೂಮಿ, ಅಳಿವೆಗಳು, mangrooveಗಳಂತಹ ಕರಾವಳೀ ಪ್ರದೇಶಗಳು, ಹವಳದ ದಿಬ್ಬಗಳು, ಮತ್ತು ಮಾನವ ನಿರ್ಮಿತ ಪ್ರದೇಶಗಳಾದ ಮೀನುಸಾಕಣಾ ಕಟ್ಟೆಗಳು, ಭತ್ತದ ಗದ್ದೆಗಳು, ಜಲಾಶಯಗಳು ಮತ್ತು ಉಪ್ಪಿನ ಇಂಗುಗುಂಡಿಗಳನ್ನು ಒಳಗೊಂಡಿವೆ.

ತೇವ ಪ್ರದೇಶಗಳನ್ನು ಏಕೆ ಸಂರಕ್ಷಿಸಬೇಕು?
ತೇವ ಪ್ರದೇಶಗಳು ಅತ್ಯಧಿಕ ಜೈವಿಕ ವೈವಿಧ್ಯತೆಯನ್ನು ಹೊಂದಿವೆ. ಈ ಪರಿಸರ ವ್ಯವಸ್ಥೆಯ ಉತ್ಪಾದನಾ ಸಾಮರ್ಥ್ಯವೂ ಅಧಿಕ. ಅವು ನಮಗೆ ಅವಶ್ಯ ಸೇವೆಗಳನ್ನು ಒದಗಿಸುವುದರೊಂದಿಗೆ ಅತ್ಯಗತ್ಯವಿರುವ ಸಿಹಿನೀರಷ್ಟನ್ನೂ ಕೊಡುತ್ತವೆ. ಮಾನವನ ಉಳಿವಿಗೆ ಈ ತೇವ ಪ್ರದೇಶಗಳು ಅತ್ಯವಶ್ಯಕ. ಜೈವಿಕ ವೈವಿಧ್ಯತೆಯ ತೊಟ್ಟಿಲುಗಳಾಗಿದ್ದು ಲೆಕ್ಕವಿಲ್ಲದಷ್ಟು ಸಸ್ಯ-ಪ್ರಾಣಿ, ಮುಂತಾದ ಜೀವೆಪ್ರಬೇಧಗಳಿಗೆ ನೀರನ್ನುಣಿಸುತ್ತಿವೇಮಾನವನಿಗೂ ಕೂಡ ಪಾರಿಸರಿಕ ಸೇವೆಗಳೊಡನೆ ನೀರಿನ ಪೂರೈಕೆ, ಆಹಾರ, ಕಟ್ಟಡ ನಿರ್ಮಾಣ ವಸ್ತುಗಳನ್ನು ಒದಗಿಸುತ್ತವೆ. ಅಷ್ಟೇ ಅಲ್ಲದೆ, ಪ್ರವಾಹವನ್ನು ತಡೆಗಟ್ಟುತ್ತವೆ, ಅಂತರ್ಜಲವನ್ನು ಮರುಪೂರಣ ಮಾಡುತ್ತವೆ. ಹವಾಗುಣ ವೈಪರೀತ್ಯಗಳನ್ನು ಎದುರಿಸಲು ಸಹಕಾರಿಯಾಗುತ್ತವೆ. ಹೀಗಿದ್ದೂ ಅವುಗಳು ನಶಿಸುತ್ತಿವೆ ಇಲ್ಲವೇ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ತೇವ ಭೂಪ್ರದೇಶಗಳ ಸಂರಕ್ಷಣೆ ಒಂದು ಜಾಗತಿಕ ಸವಾಲು ಕೂಡಾ ಹೌದು.

ಅಂತರಾಷ್ಟ್ರೀಯ ಸಹಕಾರ ಏಕೆ ಬೇಕು?
ಒಂದು ತೇವ ಪ್ರದೇಶವು ಭೌಗೋಳಿಕವಾಗಿಯೋ, ರಾಜಕೀಯವಾಗಿಯೋ ಒಂದಕ್ಕಿಂತ ಹೆಚ್ಚು ಪ್ರದೇಶಗಳಿಗೆ ಸೇರಿದ್ದಲ್ಲಿ, ಅಂತಹ ಪ್ರದೇಶದ ನಿರ್ವಹಣೆಯು ಆ ಎಲ್ಲ ಪ್ರದೇಶಗಳ ಜವಾಬ್ದಾರಿಯಾಗಿರುತ್ತದೆ. ಅಲ್ಲಿ ದೊರಕುವ ಪ್ರಾಕೃತಿಕ ಸಂಪನ್ಮೂಲಗಳಾದ ನೀರು, ಗಿಡ-ಮರಗಳು, ಪ್ರಾಣಿ-ಪಕ್ಷಿಗಳೆಲ್ಲವನ್ನೂ ಸಂರಕ್ಷಿಸುವ ಹೊಣೆ ಆ ಎಲ್ಲ ಪಕ್ಷಗಳಿಗೂ ಸೇರಿರುತ್ತದೆ. ತತ್ಸಂಬಂಧವಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತೇವ ಪ್ರದೇಶಗಳ ಬಗ್ಗೆ ಚರ್ಚಿಸಲು, ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಲು ಅಂತರ್ರಾಷ್ಟ್ರೀಯ ಸಹಕಾರ ಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ಸೌಹಾರ್ದವನ್ನು, ಸುಸಂಬಂಧವನ್ನು ಹೊಂದಿದ್ದು ಪರಸ್ಪರ ಸಹಯೋಗದೊಂದಿಗೆ ಸೀಮಾರೇಖೆಗಳನ್ನೂ ದಾಟಿ ಕಾರ್ಯೋನ್ಮುಖರಾಗಲು ಅಂತರ್ರಾಷ್ಟ್ರೀಯ ಸಹಕಾರ ಬಹುಮುಖ್ಯ.
ತೇವ ಭೂಪ್ರದೇಶಗಳ ವಿವೇಚನಾಯುಕ್ತ ಬಳಕೆಯೆಂದರೇನು?
ತೇವ ಪ್ರದೇಶಗಳ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆ ಮತ್ತು ಜನರಿಗೂ ಪ್ರಕೃತಿಗೂ ಅವುಗಳಿಂದ ಲಭಿಸುವ ಪಾರಿಸರಿಕ ಸೇವೆಗಳನ್ನು ವಿವೇಚನಾಯುಕ್ತ ಬಳಕೆ ಅಥವಾ ಸದ್ಬಳಕೆಎನ್ನಬಹುದು. ಈ ರೀತಿ ಪ್ರಯೋಜನಗಳನ್ನುಪಡೆಯುವಾಗ ತೇವ ಪ್ರದೇಶವು ತನ್ನ ಲಕ್ಷಣಗಳನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಎಚ್ಚರವಹಿಸಬೇಕು.

ತೇವ ಭೂ ಪ್ರದೇಶಗಳ ಸಂರಕ್ಷಣೆ ಹೇಗೆ?
ರಾಂಸಾರ್ ಸಮಾವೇಶದ ಆಶಯವನ್ನು ಜಾರಿಗೆ ತರುವಲ್ಲಿ ಈ ಕೆಳಕಂಡ ನಿರ್ಣಯಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.
·         ತೇವ ಪ್ರದೇಶಗಳ ಸದ್ಬಳಕೆ ಹಾಗೂ ಸಂರಕ್ಷಣೆಗಾಗಿ ಕಾರ್ಯೋನ್ಮುಖರಾಗುವುದು
·         ಸೂಕ್ತ ತೇವ ಪ್ರದೇಶವನ್ನು ಗುರುತಿಸಿ ಅಂತರ್ರಾಷ್ಟ್ರೀಯ  ತೇವ ಭೂಪ್ರದೇಶದ ಪರಿಧಿಯೊಳಗೆ ಪರಿಣಾಮಕಾರೀ ನಿರ್ವಹಣೆಗಾಗಿ ತರುವುದು (" ರಾಂಸರ್ ಪಟ್ಟಿ"ಗೆ ಸೇರ್ಪಡೆ ಮಾಡುವುದು)·         ಗಡಿಯಾಚೆಗಿನ ತೇವ ಪ್ರದೇಶಗಳನ್ನೂ, ವಿವ್ಧ ದೇಶಗಳ ನಡುವೆ ಹಂಚಿಕೆಯಾದ ತೇವ ಪ್ರದೇಶಗಳನ್ನೂ ಹಾಗೂ ಜೀವ ಪ್ರಬೇಧಗಳನ್ನೂ ಅಂತರ್ರಾಷ್ಟ್ರೀಯ ಸಹಕಾರದಿಂದ ಸೌಹಾರ್ದಯುತವಾಗಿ ನಿರ್ವಹಿಸುವುದು.
ಇದಷ್ಟೇ ಅಲ್ಲದೆ, ಹೊಸ ತೇವ ಪ್ರದೇಶ ನಿಯಮಾವಳಿಗಳನ್ನು ಜಾರಿಗೊಳಿಸಿ ರಾಷ್ಟ್ರೀಯ ಪರಿಸರ ಕ್ರಿಯಾ ಯೋಜನೆಗಳನ್ನುಸಿದ್ಧಪಡಿಸುವುದು, ನೀತಿ- ನಿಯಮಾವಳಿಗಳನ್ನು ಜಾರಿಗೊಳಿಸಿ ಹಾಗೂ ಸಾರ್ವಜನಿಕ ಶಿಕ್ಷಣದ ಮೂಲಕ ಲೆಲ್ಲರಲ್ಲೂ ಅರಿವು ಮೂಡಿಸುವುದುತಎವ ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ತೇವ ಭೂ ಪ್ರದೇಶದ ಸಂಪನ್ಮೂಲಾಭಿವೃದ್ಧಿ, ಮೇಲ್ವಿಚಾರಣೆ, ಸಂಶೋಧನೆ, ತರಬೇತಿ, ಶಿಕ್ಷಣ ಮತ್ತು ಸಾರ್ವಜನಿಕ ಅರಿವು ಸಂರಕ್ಷಣಾ ಕಾರ್ಯದಲ್ಲಿ ಪರಿಣಾಮಕಾರಿಯಾಗಬಲ್ಲವು. ತೇವ ಪ್ರದೇಶಗಳಲ್ಲಿ ಸಮಗ್ರ ನಿರ್ವಹಣಾ ಯೋಜನೆಯನ್ನು ಅನುಷ್ಟಾನಕ್ಕೆ ತರಬೇಕು.

ವಿಶ್ವ ಜೌಗು ಭೂಮಿ ದಿನ-2015 ರ ಘೋಷವಾಕ್ಯ - " ನಮ್ಮ ಭವಿಷ್ಯಕ್ಕಾಗಿ ತೇವ ಭೂಪ್ರದೇಶಗಳು".



ಈ ಘೋಷಣೆಯು ನಮ್ಮೂರಿನ ಕೆರೆಗಳನ್ನು ಉಳಿಸಲು ಸಹಾಯವಾದೀತು ಎಂಬುದೇ ನಮ್ಮ ಆಶಯ. ಖ್ಯಾತ ಲೇಖಕಿ ಸುನಿತಾ ನಾರಾಯಣ ಹೇಳುವಂತೆ ಪ್ರಾಚೀನ ಭಾರತೀಯರ ವೈಜ್ಞಾನಿಕ ಕೊಡುಗೆಗಳೆಂದರೆ ಕೇವಲ ಗಣಿತ, ಖಗೋಳ ಭೌತ ವಿಜ್ಞಾನ, ಆಯುರ್ವೇದಗಳಷ್ಟೆ ಅಲ್ಲ, ನೀರಿನ ಸಮರ್ಪಕ ನಿರ್ವಹಣೆಯು ಅಟಾಯಂತ ವೈಜ್ಞಾನಿಕವಾಗಿತ್ತು. ಪರಿಸರ ವ್ಯವಸ್ಥೆಗೆ ತಕ್ಕಂತೆ ಒಂದೊಂದು ಹನಿ ನೀರನ್ನೂ ಸಮರ್ಪಕ ರೀತಿಯಲ್ಲಿ ಕೊಯ್ಲು ಮಾಡಲಾಗುತ್ತಿತ್ತು. ಪ್ರಾಚೀನ ಭಾರತೀಯರಿಗೆ ನಿಸರ್ಗದ ಸಂಪನ್ಮೂಲಗಳ ಸರಿಯಾದ ಯೋಜನೆ, ವಾಸ್ತು, ನಿರ್ವಹಣೆ ಮತ್ತು ಆಧಿಪತ್ಯ ತಿಳಿದಿತ್ತು. ಇತಿಹಾಸದಿಂದ ನಾವು ಕಲಿಯುವುದು ಸಾಕಷ್ಟಿದೆಯಲ್ಲವೇ?

-  ಗೀತಾ. ಎಚ್.
   ಹಸಿರು ಹೆಜ್ಜೆ.
ಮೈಸೂರು