Saturday, 31 January 2015
Thursday, 29 January 2015
Celebration of World Wetland Day 2015
On account of the World
Wetland Day being celebrated world
over, we are conducting a six day Film festival in collaboration with the
Regional Museum of Natural History, Siddartha Nagar Mysore. The
festival will begin on the 2nd February 2015 and four films will be screened in two sessions every day at the Auditorium of the RMNH. The films are based on the water and wetland
conservation themes and highlight the importance of precious water and the
fragile ecosystems they support. The beneficiaries of the film screening would
be school children and visitors to the museum. The content of the films is
ideal for the age group of 12 to 18 years and the screenings are summarized as
follows:
10.15 am to 12.00 noon
|
1.30 pm to 3.30 pm
|
||
02-02-15
onwards
|
a.
One Water 59 min.
Directed by: Ali Habashi and Sanjeev Chaterjee
b.
Point Calimare; Little Kingdom by the Coast 25min.
Dircted by: Sheker Dattatri
|
a.
Hawai: Message in the Waves 48 min.
Narrated by: Lokepa Naeole
b.
Chilika;
Jewl of Odisha 22 min.
Directed by : Sheker Dattatri
|
We request you to make use
of this unique opportunity and send your children for the screenings. The
auditorium would take 120 students per show and the organizers request the
school authorities to intimate in advance for block booking of the seats to 9886383793 or 9902441987.
Entry Free.
Tuesday, 27 January 2015
ವಿಶ್ವ ಜೌಗು ಭೂಮಿ ದಿನ - ವರ್ಲ್ಡ್ ವೆಟ್‌ಲ್ಯಾಂಡ್ ಡೇ
ಕಣ್ಣ ಮುಂದೆಯೇ ಕಳೆದುಹೋಗುತ್ತಿರುವ ಕೆರೆ - ಕಾಲುವೆಗಳ ಪತ್ತೆಗೆ
ಯಾರಿಗೆ ದೂರು ಕೊಡೋಣ? ಕೊಟ್ಟರೂ ಯಾರಾದರೂ ಹುಡುಕಿಕೊಟ್ಟಾರೆಯೇ? ಹುಡುಕಿದರೂ ಅವು ಮೂಲ ಸ್ವರೂಪದಲ್ಲಿ ಸಿಕ್ಕುತ್ತವೆಯೇ?
ಕಳೆದ ಮೂರು ದಶಕಗಳಲ್ಲಿ ಮೈಸೂರಿನ ಎರಡು ಡಜನ್ನಿಗೂ ಹೆಚ್ಚು ಕೆರೆಗಳು ಕಣ್ಮರೆಯಾಗಿವೆ.
ಈಗ ಅಳಿದುಳಿದಿರುವ ಮೂರು ಮತ್ತೊಂದು ಕೆರೆಗಳೂ ಹೇಳಿಕೊಳ್ಳುವಂಥ ಸುಸ್ಥಿತಿಯಲ್ಲಿಲ್ಲ. 8
- 10 ಅಡಿಯ ಆಳದಲ್ಲಿ ನೀರು
ಸಿಗುತ್ತಿದ್ದ ಭಾವಿಗಳೂ ಈಗ ಬರಿದಾಗಿವೆ. ಕೊರೆಸಿ,ಕೊರೆಸಿ ಅಡಿಗಡಿಗೂ ತೆಗೆದ ಕೊಳವೆ ಭಾವಿಗಳಲ್ಲಿ ನೂರಾರು ಅಡಿ ಕೊರೆದರೂ
ನೀರು ಸಿಗುತ್ತಿಲ್ಲ. ಅಂತರ್ಜಲವೂ ಬರಿದಾಗಿದೆ ಎಂದೇ ಇದರ ಅರ್ಥ.
ಭೂಗೋಲದ ಮುಕ್ಕಾಲುವಾಸಿ ನೀರೇ ಇರುವಾಗ ನೀರಿಗೇಕೆ ಈ ಹಾಹಾಕಾರ?
ಜಲಯುದ್ಧ? ಮೂರನೇ ಮಹಾಯುದ್ಧವಾಗುವುದಾದರೆ
ಅದು ನೀರಿಗಾಗಿಯೇ ಅಂತೆ! ಹಾಗಿರುವಾಗ ಸಿಹಿನೀರಿನ ಸೆಲೆಗಳನ್ನು ಉಳಿಸಿಕೊಳ್ಳಬೇಕು ಅಲ್ಲವೇ?
ನೀರಿನ ಸೆಲೆಗಳ
ಸಂರಕ್ಷಣೆ ಹಾಗೂ ವಿವೇಚನಾಯುತ ಸದ್ಬಳಕೆಗಾಗಿ ಪ್ರತಿವರ್ಷವೂ ಫೆಬ್ರವರಿ 2ನೇ ತಾರೀಕಿನಂದು ವಿಶ್ವ ತೇವ ಭೂ
ದಿನ( ವರ್ಲ್ಡ್ ವೆಟ್‌ಲ್ಯಾಂಡ್ ಡೇ) ಎಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಕ್ಯಾಸ್ಪಿಯನ್ ಸಮುದ್ರ ತೀರದಲ್ಲಿರುವ ಇರಾನಿನ ರಾಂಸರ್ಎಂಬಲ್ಲಿ 1971 ರ ಫೆಬ್ರವರಿ 2 ರಂದು ನಡೆದ ಸಮಾವೇಶದಲ್ಲಿ ಜೌಗು
ಪ್ರದೇಶದ( ತೇವ ಪ್ರದೇಶದ) ಸಂರಕ್ಷಣೆ ಹಾಗೂ ಅದರ ವಿವೇಚನಾಯುತ ಉಪಯೋಗಕ್ಕಾಗಿ ಚರ್ಚೆ ನಡೆಯಿತು.
ಅದಕ್ಕಾಗಿ ರೂಪುರೇಷೆಗಳನ್ನು ರಚಿಸಲಾಯಿತು. 1975ರಲ್ಲಿ ಆ ತೀರ್ಮಾನವನ್ನು ರಾಂಸಾರ್‌ನಲ್ಲಿ ಜಾರಿಗೆ ತರಲಾಯಿತು.
ಅಂದಿನಿಂದ ಪ್ರಪಂಚದ ನಾನಾ ಭಾಗಗಳಲ್ಲಿರುವ 99ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಈ ದಿನವನ್ನು
ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತಿದೆ.
"ಸ್ಥಳೀಯ ಮತ್ತು ರಾಷ್ಟ್ರೀಯ
ಕಾರ್ಯ ಚಟುವಟಿಕೆಗಳಿಂದ ಹಾಗೂ ಅಂತರ್ರಾಷ್ಟ್ರೀಯ ಸಹಕಾರದ ಮೂಲಕ ತೇವ ಭೂಪ್ರದೇಶದ ಸಂರಕ್ಷಣೆ
ಮತ್ತು ವಿವೇಚನಾಯುತ ಸದ್ಬಳಕೆಯಿಂದ ಸುಸ್ಥಿರ ಅಭಿವೃದ್ಧಿಯ ಸಾಧನೆಗಾಗಿ ಕೊಡುಗೆ" ಎಂಬುದು
ರಾಂಸಾರ್ ಸಮಾವೇಶದ ಧ್ಯೇಯವಾಕ್ಯ.
ತೇವ ಭೂಪ್ರದೇಶಗಳು( ವೆಟ್‌ಲ್ಯಾಂಡ್)
ಎಂದರೇನು?
ಕೆರೆ, ಸರೋವರ, ತಟಾಕ, ನದಿ, ಅಂತರ್ಜಲ, ಜೌಗು ಪ್ರದೇಶಗಳು, ತೇವಯುಕ್ತ ಹುಲ್ಲುಗಾವಲುಗಳು, ಕೆಸರು ನೆಲ, ಓಯಸಿಸ್ಗಳು, ನದಿ ಮುಖಜ ಭೂಮಿ, ಅಳಿವೆಗಳು, mangrooveಗಳಂತಹ ಕರಾವಳೀ ಪ್ರದೇಶಗಳು, ಹವಳದ ದಿಬ್ಬಗಳು, ಮತ್ತು ಮಾನವ ನಿರ್ಮಿತ ಪ್ರದೇಶಗಳಾದ ಮೀನುಸಾಕಣಾ ಕಟ್ಟೆಗಳು, ಭತ್ತದ ಗದ್ದೆಗಳು, ಜಲಾಶಯಗಳು ಮತ್ತು ಉಪ್ಪಿನ
ಇಂಗುಗುಂಡಿಗಳನ್ನು ಒಳಗೊಂಡಿವೆ.
ತೇವ ಪ್ರದೇಶಗಳನ್ನು ಏಕೆ
ಸಂರಕ್ಷಿಸಬೇಕು?
ತೇವ ಪ್ರದೇಶಗಳು ಅತ್ಯಧಿಕ ಜೈವಿಕ ವೈವಿಧ್ಯತೆಯನ್ನು ಹೊಂದಿವೆ. ಈ
ಪರಿಸರ ವ್ಯವಸ್ಥೆಯ ಉತ್ಪಾದನಾ ಸಾಮರ್ಥ್ಯವೂ ಅಧಿಕ. ಅವು ನಮಗೆ ಅವಶ್ಯ ಸೇವೆಗಳನ್ನು
ಒದಗಿಸುವುದರೊಂದಿಗೆ ಅತ್ಯಗತ್ಯವಿರುವ ಸಿಹಿನೀರಷ್ಟನ್ನೂ ಕೊಡುತ್ತವೆ. ಮಾನವನ ಉಳಿವಿಗೆ ಈ ತೇವ
ಪ್ರದೇಶಗಳು ಅತ್ಯವಶ್ಯಕ. ಜೈವಿಕ ವೈವಿಧ್ಯತೆಯ ತೊಟ್ಟಿಲುಗಳಾಗಿದ್ದು ಲೆಕ್ಕವಿಲ್ಲದಷ್ಟು
ಸಸ್ಯ-ಪ್ರಾಣಿ, ಮುಂತಾದ ಜೀವೆಪ್ರಬೇಧಗಳಿಗೆ
ನೀರನ್ನುಣಿಸುತ್ತಿವೇಮಾನವನಿಗೂ ಕೂಡ ಪಾರಿಸರಿಕ ಸೇವೆಗಳೊಡನೆ ನೀರಿನ ಪೂರೈಕೆ, ಆಹಾರ, ಕಟ್ಟಡ ನಿರ್ಮಾಣ ವಸ್ತುಗಳನ್ನು
ಒದಗಿಸುತ್ತವೆ. ಅಷ್ಟೇ ಅಲ್ಲದೆ, ಪ್ರವಾಹವನ್ನು ತಡೆಗಟ್ಟುತ್ತವೆ, ಅಂತರ್ಜಲವನ್ನು ಮರುಪೂರಣ ಮಾಡುತ್ತವೆ. ಹವಾಗುಣ ವೈಪರೀತ್ಯಗಳನ್ನು
ಎದುರಿಸಲು ಸಹಕಾರಿಯಾಗುತ್ತವೆ. ಹೀಗಿದ್ದೂ ಅವುಗಳು ನಶಿಸುತ್ತಿವೆ ಇಲ್ಲವೇ ಬೇರೆ ಉದ್ದೇಶಗಳಿಗೆ
ಬಳಕೆಯಾಗುತ್ತಿವೆ. ತೇವ ಭೂಪ್ರದೇಶಗಳ ಸಂರಕ್ಷಣೆ ಒಂದು ಜಾಗತಿಕ ಸವಾಲು ಕೂಡಾ ಹೌದು.
ಅಂತರಾಷ್ಟ್ರೀಯ ಸಹಕಾರ ಏಕೆ ಬೇಕು?
ಒಂದು ತೇವ ಪ್ರದೇಶವು ಭೌಗೋಳಿಕವಾಗಿಯೋ, ರಾಜಕೀಯವಾಗಿಯೋ ಒಂದಕ್ಕಿಂತ ಹೆಚ್ಚು ಪ್ರದೇಶಗಳಿಗೆ ಸೇರಿದ್ದಲ್ಲಿ, ಅಂತಹ ಪ್ರದೇಶದ ನಿರ್ವಹಣೆಯು ಆ ಎಲ್ಲ ಪ್ರದೇಶಗಳ
ಜವಾಬ್ದಾರಿಯಾಗಿರುತ್ತದೆ. ಅಲ್ಲಿ ದೊರಕುವ ಪ್ರಾಕೃತಿಕ ಸಂಪನ್ಮೂಲಗಳಾದ ನೀರು, ಗಿಡ-ಮರಗಳು,
ಪ್ರಾಣಿ-ಪಕ್ಷಿಗಳೆಲ್ಲವನ್ನೂ
ಸಂರಕ್ಷಿಸುವ ಹೊಣೆ ಆ ಎಲ್ಲ ಪಕ್ಷಗಳಿಗೂ ಸೇರಿರುತ್ತದೆ. ತತ್ಸಂಬಂಧವಾಗಿ ಅಂತರ್ರಾಷ್ಟ್ರೀಯ
ಮಟ್ಟದಲ್ಲಿ ತೇವ ಪ್ರದೇಶಗಳ ಬಗ್ಗೆ ಚರ್ಚಿಸಲು, ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಲು ಅಂತರ್ರಾಷ್ಟ್ರೀಯ ಸಹಕಾರ
ಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ಸೌಹಾರ್ದವನ್ನು, ಸುಸಂಬಂಧವನ್ನು ಹೊಂದಿದ್ದು ಪರಸ್ಪರ ಸಹಯೋಗದೊಂದಿಗೆ ಸೀಮಾರೇಖೆಗಳನ್ನೂ ದಾಟಿ
ಕಾರ್ಯೋನ್ಮುಖರಾಗಲು ಅಂತರ್ರಾಷ್ಟ್ರೀಯ ಸಹಕಾರ ಬಹುಮುಖ್ಯ.
ತೇವ ಭೂಪ್ರದೇಶಗಳ ವಿವೇಚನಾಯುಕ್ತ
ಬಳಕೆಯೆಂದರೇನು?
ತೇವ ಪ್ರದೇಶಗಳ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆ ಮತ್ತು ಜನರಿಗೂ
ಪ್ರಕೃತಿಗೂ ಅವುಗಳಿಂದ ಲಭಿಸುವ ಪಾರಿಸರಿಕ ಸೇವೆಗಳನ್ನು ವಿವೇಚನಾಯುಕ್ತ ಬಳಕೆ ಅಥವಾ
ಸದ್ಬಳಕೆಎನ್ನಬಹುದು. ಈ ರೀತಿ ಪ್ರಯೋಜನಗಳನ್ನುಪಡೆಯುವಾಗ ತೇವ ಪ್ರದೇಶವು ತನ್ನ ಲಕ್ಷಣಗಳನ್ನು
ಹಾಗೆಯೇ ಉಳಿಸಿಕೊಳ್ಳುವಂತೆ ಎಚ್ಚರವಹಿಸಬೇಕು.
ತೇವ ಭೂ ಪ್ರದೇಶಗಳ ಸಂರಕ್ಷಣೆ
ಹೇಗೆ?
ರಾಂಸಾರ್ ಸಮಾವೇಶದ ಆಶಯವನ್ನು ಜಾರಿಗೆ ತರುವಲ್ಲಿ ಈ ಕೆಳಕಂಡ
ನಿರ್ಣಯಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.
·
ತೇವ ಪ್ರದೇಶಗಳ ಸದ್ಬಳಕೆ ಹಾಗೂ ಸಂರಕ್ಷಣೆಗಾಗಿ ಕಾರ್ಯೋನ್ಮುಖರಾಗುವುದು
·
ಸೂಕ್ತ ತೇವ ಪ್ರದೇಶವನ್ನು ಗುರುತಿಸಿ ಅಂತರ್ರಾಷ್ಟ್ರೀಯ ತೇವ ಭೂಪ್ರದೇಶದ ಪರಿಧಿಯೊಳಗೆ ಪರಿಣಾಮಕಾರೀ
ನಿರ್ವಹಣೆಗಾಗಿ ತರುವುದು (" ರಾಂಸರ್ ಪಟ್ಟಿ"ಗೆ ಸೇರ್ಪಡೆ ಮಾಡುವುದು)·
ಗಡಿಯಾಚೆಗಿನ ತೇವ ಪ್ರದೇಶಗಳನ್ನೂ,
ವಿವ್ಧ ದೇಶಗಳ ನಡುವೆ
ಹಂಚಿಕೆಯಾದ ತೇವ ಪ್ರದೇಶಗಳನ್ನೂ ಹಾಗೂ ಜೀವ ಪ್ರಬೇಧಗಳನ್ನೂ ಅಂತರ್ರಾಷ್ಟ್ರೀಯ ಸಹಕಾರದಿಂದ
ಸೌಹಾರ್ದಯುತವಾಗಿ ನಿರ್ವಹಿಸುವುದು.
ಇದಷ್ಟೇ ಅಲ್ಲದೆ, ಹೊಸ ತೇವ ಪ್ರದೇಶ ನಿಯಮಾವಳಿಗಳನ್ನು ಜಾರಿಗೊಳಿಸಿ ರಾಷ್ಟ್ರೀಯ ಪರಿಸರ ಕ್ರಿಯಾ
ಯೋಜನೆಗಳನ್ನುಸಿದ್ಧಪಡಿಸುವುದು, ನೀತಿ- ನಿಯಮಾವಳಿಗಳನ್ನು
ಜಾರಿಗೊಳಿಸಿ ಹಾಗೂ ಸಾರ್ವಜನಿಕ ಶಿಕ್ಷಣದ ಮೂಲಕ ಲೆಲ್ಲರಲ್ಲೂ ಅರಿವು ಮೂಡಿಸುವುದುತಎವ ಪ್ರದೇಶದ
ಅಭಿವೃದ್ಧಿ ಕಾರ್ಯಕ್ರಮದ ಮೂಲಕ ತೇವ ಭೂ ಪ್ರದೇಶದ ಸಂಪನ್ಮೂಲಾಭಿವೃದ್ಧಿ, ಮೇಲ್ವಿಚಾರಣೆ,
ಸಂಶೋಧನೆ, ತರಬೇತಿ, ಶಿಕ್ಷಣ ಮತ್ತು ಸಾರ್ವಜನಿಕ
ಅರಿವು ಸಂರಕ್ಷಣಾ ಕಾರ್ಯದಲ್ಲಿ ಪರಿಣಾಮಕಾರಿಯಾಗಬಲ್ಲವು. ತೇವ ಪ್ರದೇಶಗಳಲ್ಲಿ ಸಮಗ್ರ ನಿರ್ವಹಣಾ
ಯೋಜನೆಯನ್ನು ಅನುಷ್ಟಾನಕ್ಕೆ ತರಬೇಕು.
ಈ ಘೋಷಣೆಯು ನಮ್ಮೂರಿನ ಕೆರೆಗಳನ್ನು ಉಳಿಸಲು ಸಹಾಯವಾದೀತು ಎಂಬುದೇ
ನಮ್ಮ ಆಶಯ. ಖ್ಯಾತ ಲೇಖಕಿ ಸುನಿತಾ ನಾರಾಯಣ
ಹೇಳುವಂತೆ ಪ್ರಾಚೀನ ಭಾರತೀಯರ ವೈಜ್ಞಾನಿಕ ಕೊಡುಗೆಗಳೆಂದರೆ ಕೇವಲ ಗಣಿತ, ಖಗೋಳ ಭೌತ ವಿಜ್ಞಾನ, ಆಯುರ್ವೇದಗಳಷ್ಟೆ ಅಲ್ಲ, ನೀರಿನ ಸಮರ್ಪಕ ನಿರ್ವಹಣೆಯು
ಅಟಾಯಂತ ವೈಜ್ಞಾನಿಕವಾಗಿತ್ತು. ಪರಿಸರ ವ್ಯವಸ್ಥೆಗೆ ತಕ್ಕಂತೆ ಒಂದೊಂದು ಹನಿ ನೀರನ್ನೂ ಸಮರ್ಪಕ ರೀತಿಯಲ್ಲಿ ಕೊಯ್ಲು
ಮಾಡಲಾಗುತ್ತಿತ್ತು. ಪ್ರಾಚೀನ ಭಾರತೀಯರಿಗೆ ನಿಸರ್ಗದ ಸಂಪನ್ಮೂಲಗಳ ಸರಿಯಾದ ಯೋಜನೆ, ವಾಸ್ತು, ನಿರ್ವಹಣೆ ಮತ್ತು ಆಧಿಪತ್ಯ
ತಿಳಿದಿತ್ತು. ಇತಿಹಾಸದಿಂದ ನಾವು ಕಲಿಯುವುದು ಸಾಕಷ್ಟಿದೆಯಲ್ಲವೇ?
- ಗೀತಾ. ಎಚ್.
ಹಸಿರು ಹೆಜ್ಜೆ.
ಮೈಸೂರು
Friday, 21 November 2014
ಪಶ್ಚಿಮ ಘಟ್ಟಗಳ ಉಳಿವು: ನಮ್ಮ ಪ್ರಯತ್ನ - ಸುಮನಸ್ ಕೌಲಗಿ
£Á£ÀÄ 28/10/2014 jAzÀ
29/10/2014gÀªÀgÉUÉ UÉÆÃªÁzÀ°ègÀĪÀ ªÉÊ®Øgï £É¸ïÖ JA§ ¸ÀܼÀzÀ°è £ÀqÉzÀ ¦Ã¥À¯ï
¥sÁgï ªÉ¸ÀÖ£ïð WÁmïì JA§ ¸À¨sÉAiÀÄ°è ¨sÁUÀªÀ»¹zÉÝ. ¸À¨sÉUÉ ««zsÀ PÉëÃvÀæUÀ¼À°è, ªÀÄÄRåªÁV ¥À²ÑªÀÄWÀlÖUÀ¼À
fêÀªÉÊ«zsÀåvÉ ªÀÄvÀÄÛ ¸ÀA¸ÀÌöÈwUÀ¼À ಕುರಿತು PÉ®¸ÀªÀiÁqÀÄwÛgÀĪÀ ªÀåQÛUÀ¼ÀÄ §A¢zÀÝgÀÄ.
ªÉÆzÀ®Ä ¥À²ÑªÀÄWÀlÖUÀ¼À
¨sÀ«µÀå K£ÀÄ ªÀÄvÀÄÛ ºÉÃUÉ JA§ÄzÀgÀ PÀÄjvÀÄ ZÀað¸ÀĪÀ ªÀÄÆ®PÀ ¸À¨sÉAiÀÄÄ
¥ÁægÀA¨sÀªÁ¬ÄvÀÄ. £ÀAvÀgÀ ¥À²ÑªÀÄWÀlÖUÀ¼ÀÀ°è C©üªÀÈ¢Þಯ ºÉ¸Àj£À°è ಮಾಡಲಾಗುತ್ತಿರುವ UÀtÂUÁjPÉ, QgÀÄ
d®«zÀÄåvï AiÉÆÃd£É, gÀ¸ÉÛ, gÉʯÉé ºÀ½ ªÀÄÄAvÁzÀªÀÅUÀ½AzÀ GAmÁUÀÄwÛgÀĪÀ
zÀĵÀàjuÁªÀÄUÀ¼ÀÄ ºÁUÀÄ CªÀÅUÀ¼À£ÀÄß vÀqÉAiÀÄĪÀ §UÉÎ ªÀiÁvÀÄPÀತೆ £ÀqɬÄvÀÄ. UÁrÎಳ್ ºÁUÀÄ PÀ¸ÀÆÛjgÀAUÀ£ï
ªÀgÀ¢UÀ¼ÀÄ ªÀÄvÀÄÛ CªÀÅUÀ½AzÀ ¥À²ÑªÀÄ WÀlÖUÀ¼ÀªÉÄïÁUÀĪÀ ¥ÀjuÁªÀÄUÀ¼À §UÉÎ ¸ÀÄದೀWÀðªÁzÀ ZÀZÉð£ÀqɬÄvÀÄ.
¥À²ÑªÀÄWÀlÖUÀ½UÉ ¥ÀÇgÀPÀªÁV PÁ£ÀÆ£ÀÄ §zÀ¯ÁªÀuÉUÀ¼À£ÀÄß vÀgÀĪÀÅzÀÄ, PÀįÁAvÀj
¨É¼ÉUÀ¼À «gÀÄzÀÞ ¸ÁªÀÄÆ»PÀ dªÁ¨ÁÝj, ºÀªÁªÀiÁ£À §zÀ¯ÁªÀuÉ, gÉÊvÀgÀ ¨sÀ«µÀå
ªÀÄvÀÄÛ ±ÀQÛ AiÉÆÃd£ÉUÀ¼À PÀÄjvÀÆ ªÀiÁvÀ£ÁqÀ¯Á¬ÄvÀÄ. F PɼÀPÀAqÀ
PÁAiÀÄðPÀæªÀÄUÀ½AzÀ ¥À²ÑªÀÄ WÀlÖUÀ¼À£ÀÄß G½¸À§ºÀÄzÉA§ ¤zsÁðgÀPÉÌ §gÀ¯Á¬ÄvÀÄ
·
¥À²ÑªÀÄWÀlÖUÀ¼À°è AiÀiÁªÀ AiÀiÁªÀ eÁUÀUÀ¼À°è AiÀiÁªÀ
AiÀiÁªÀ jÃwAiÀÄ fêÀªÉÊ«zsÀåvÉUÀ½ªÉ JµÉÖµÀÄÖ ¥ÀæªÀiÁtUÀ¼À°èªÉ JAzÀÄ
zÁR°¸ÀĪÀÅzÀÄ
·
¸ÀܽÃAiÀÄ d£ÀgÀÄ / UÀÄA¥ÀÅ / ¸ÀªÀÄÄzÁAiÀÄUÀ¼À£ÀÄß
¥À²ÑªÀÄWÀlÖUÀ¼À°è vÀ¯É JvÀÄÛwÛgÀĪÀ
¸ÀjAiÀÄ®èzÀ C©üªÀÈ¢ÞAiÉÆÃd£ÉUÀ¼À «gÀÄzÀÞ MUÀÆÎr¸ÀĪÀÅzÀÄ
·
ಜ£ÀgÀ£ÀÄß ¸ÀAWÀn¹ §ÈºÀvï ¥Àæw¨sÀl£ÉUÀ¼À£ÀÄß
ªÀiÁqÀĪÀÅzÀÄ
·
¥À²ÑªÀÄWÀlÖUÀ¼À ªÉÄÃ¯É ºÉÆgÀ §gÀĪÀ ºÉƸÀ
ªÀgÀ¢UÀ¼À£ÀÄß ¸ÀܽÃAiÀÄ ¨sÁµÉUÉ vÀdÄðªÉÄUÉÆ½¹ ¸ÀܽÃAiÀÄ d£ÀjUÉ CxÀðªÁUÀĪÀAvÉ
ªÀiÁqÀĪÀÅzÀÄ
·
PÁ£ÀÆ£ÀħzÀÞªÁV ¥À²ÑªÀÄWÀlÖUÀ¼À G½«UÁV
ºÉÆÃgÁqÀĪÀÅzÀÄ
·
¸ÁªÀiÁfPÀ eÁ®vÁtUÀ¼À ªÀÄÆ®PÀ d£ÀgÀ°è ¥À²ÑªÀÄWÀlÖUÀ¼À
§UÉÎ CjªÀ£ÀÄß ªÀÄÆr¸ÀĪÀÅzÀÄ
·
¨sÀÆ »qÀĪÀ½zÁgÀgÀÄ ¸ÀܽÃAiÀÄ
fêÀªÉÊ«zsÀåvÉAiÀÄAiÀÄ£ÀÄß vÀªÀÄä »qÀĪÀ½UÀ¼À°è G½¹ ¨É¼É¹PÉÆAqÀÄºÉÆÃUÀĪÀAvÉ
ºÀÄjzÀÄA©¸ÀĪÀÅzÀÄ
·
¥À²ÑªÀÄWÀlÖUÀ½UÉ ¸ÀA§A¢ü¹zÀAvÉ ¨sÁµÀt ºÁUÀÄ
PÁAiÀÄðUÁgÀUÀ¼À ªÀÄÆ®PÀ AiÀÄĪÀd£ÀgÀ£ÀÄß ¥À²ÑªÀÄWÀlÖUÀ¼À G½¸ÀĪÀ PÁAiÀÄðPÉÌ
¸ÉÃj¹PÉÆ¼ÀÄîªÀÅzÀÄ.
¸À¨sÉUÉ §A¢zÀÝ ¥ÀæwAiÉÆ§âgÀÆ
vÀªÀÄä£ÀÄß vÁªÀÅ ºÉÃUÉ ¥À²ÑªÀÄWÀlÖUÀ¼À£ÀÄß G½¸ÀĪÀ°è vÉÆqÀV¹PÉÆ¼ÀÀÄzÉAzÀÄ ºÉýPÉ
¤ÃrzÀgÀÄ. ªÀÄÄA¢£À PÁAiÀÄðvÀAvÀæªÀ£ÀÄß ¥sɧæªÀj ªÀiÁºÉAiÀÄ°è £ÀqÉAiÀÄĪÀ
¸À¨sÉAiÀİè ರೂಪಿಸುವುದಾಗಿ wêÀiÁð£À vÉUÉzÀÄPÉÆ¼Àî¯Á¬ÄvÀÄ.
Thursday, 20 November 2014
Kitchen garden and Nature Club Greens the School
The article is about a yearlong effort of our school in bringing
awareness about organic farming among children. Being one of the senior
teachers in Life Science department, I was directly involved in the Nature Club
activities since last five years. My earliest experiences with the Nature Club were
exciting and the response of the students too was overwhelming. They thought Nature
Club was all about outings but the aim and vision of Nature Club was much broader!
That was when I was deputed to a workshop aimed at building capacity of Life
Science teachers and promoting Nature Club activities in schools at the
Regional Museum of Natural History conducted by Mysore Amateur Naturalists. The
fun filled workshop was in fact more serious in its approach and suggested a
lot of activities to be carried back home. The timely association with NGOs rejuvenated
my confidence in teaching profession.
I would like to share this experience of the task of keeping our School Nature
club active and a hub of learning and recreation. Over the past three years my
association with Hasiru Hejje team
has enabled me to shape up our annual Science expos’ in a thought provoking
way. Choosing a common theme for the event and pooling in all possible view
points of other subject teachers were done on highest priority. A number of
projects were thought of in each subject. The students were brainstormed about
the topics and given a choice to select a study project based on their
interest.
In the year 2012 the School chose to name the expo as ‘Vignanamayam’ and I worked a few extra
nights to intensify Natural Science themes in the fair. Keeping Man and Nature
as the central theme, Man Animal Conflict, Land use Pattern Change, Depletion
of Lakes, History of Green Revolution, Natural Farming and Water Foot Print
were chosen as sub themes. With about five projects per theme we were able to
dominate the entire expo. With the involvement of the right resource persons and
agencies we were able to bring in every day issues and present it in a
convincing way. With a main concern to make the exhibition eventful and
appealing to younger class and visiting parents, model making was given all the
push. Clay, cotton rags, papier-mâché and card board were the raw materials.
Plastics and thermocol were consciously not brought onto the work table.
Clay models of snake to help
identification, leopard animal conflict, do’s and don’ts on seeing a wild elephant
in the city limits, statistics about unnatural elephant deaths, effects of using
chemicals in agriculture, collection of native paddy varieties, organic soil
and organic pest control were all the highlights among the sixty projects under a dozen sub themes. The parents and the
public comprehended the efforts and whole heartedly appreciated the efforts of
the Nature Club and it’s in charge. Of course the support from the management
was beyond any honor to an enthusiastic teacher like me.
The students and the school took a long time to come out of the reminiscence
of the success. The event had a slow and percolating effect upon the behavior
of the students. Some students who were shy had opened up a bit, those who were
less attentive to lessons showed better involvement in the class room; the
rouge and bully types became easy to handle even by the non-class teachers and
so on.
The following year the management realized the real outcome of the science
expo and was ready to dedicate more time and money. To me it was not just a
matter of joy but added responsibility. We decided to work upon the theme
statement of the year’s World Environment Day. We named it ‘Aharamrutham’ and started the work much
in advance. Every aspect of food was
considered- the agro-climatic, socio cultural, and techno-economic dimensions.
History of Agriculture, Collection of native varieties of Ragi and minor
millets, Concepts of Permaculture, Poster Exhibition, Farm Visits, field to market, food preservation and adulteration,
nutrients in food, food, food processing, food recycling, food economics were
all envisaged in the fair. Once the students picked up their topics attempts
were made to give them huge amount of inputs and prompted with many possible
ways of expressing their views. Many field visits were arranged for them to
gather information in their respective pursuits. A team went about meeting
vegetable growers around Mysore to learn about their economic endeavors while another
team visited the Defense Food Research Laboratory to know the science behind
making Food for a Space traveller. Another
team visited a pioneering NGO working to promote Organic Farming at Marthalli,
in the foot hills of Male Mahadeshwara hills. The visit to ANISHA- helped our
students pick up ideas and concepts of Permaculture, Growing vegetables on
raised bed platforms, Local varieties of Seeds and their preservation, natural
pesticides and a number of time-tested practices blending with modern Sciences.
Their research plots and the seed bank won the imagination of every student.
This year’s exhibition was in
fact more powerful than the previous year. The students stood proudly in front
of their projects. A model Farm of Anisha and an enormous collection of native
seeds and vegetables attracted one and all. The collection of 56 local
varieties of Ragi including those from Orissa and Nepal were on display.
As though to complete the square
a “Desi food mela”, a Ragi Milk parlor
and a Film festival on issues related to Food and Agriculture were also
arranged during the exhibition. There was a wide coverage in the press and the
School management was impressed by the efforts and intentions of the Science
club. The half a dozen native cows reared by the school and the already green
mind set of the Principal Br. Virijamritha Chaitanya now started thinking real big.
She took a policy decision to utilize every possible space in the school
to develop a kitchen garden. She set afoot at trying out vertical gardening
that is becoming popular in the west. Her home work landed at a Japanese
concept of ‘Curtain Gardening’. The combined effort of the students and the
teachers over a couple of weekends enabled to prepare soil with a copious proportion
of compost to be lifted up to all the four floors in polythene sacs. Seeds of
vegetable and creeper were sown in the bags, early June. By the teacher’s day
on September 5th, miracles had happened.
The school space had not only got greener, cooler and dust free but had
become aesthetically appealing to the students. We could develop a green walk
through about a kilometer long where such space simply didn’t exist. The
students had an opportunity to observe and appreciate the growth of plants and
the insect visitors’ right next to their class rooms. While some students pinch
to taste the buds of certain vegetables they had no taste for while others
police the produce with authority!
Now the school Nature Club, the management and the two NGOs are all
feeling content. They have all teamed
up to keep up their good intended efforts on and ticking. While ANISHA working
in the forest fringes was striving to drive their organic concepts into schools
and younger generation, our school in the city was looking for ideas. The
mediation of ‘Hasiru Hejje’ which works with both the distant agencies is
trying to help the ideas materialize for them.
This year the partnerships are indicating much better yields for the Nature
Club. Our Principal has made personal visit to ANISHA and met up with Rajan and
Valli who run the center. She speaks of all the things she saw there first
hand. Permaculture, low input agriculture and sustainable lifestyles are the
catch words in the campus vocabulary. Now
the responsibility of the Nature Club is the fourth floor to experiment with
the concept of cultivating in raised bed platforms with permaculture
techniques. All the sacks in along the corridors have now been connected with
drip irrigation and needs very little care.
Never did I think with Biology teaching, I would learn so many things in
life. It is probably the time spent with children outside the classroom and the
text books; time spent in meeting people and knowing things to tell my
students. During the parents meeting, some are taking the stairs to the upper
floors off to appreciate the green curtain. Some even make enquiry for
vegetable seeds. ‘Yes the bug is
catching up!’ Exclaims our Principal ‘the school is getting greener and it must
radiate across’.
PGT in Biology
Amrita Vidyalayam, Mysore
Sunday, 26 October 2014
Rejuvenating children in Nature is their priority to teaching
![]() |
| Exploring on the green hills |
Taking the class out doors is a
tedious task these days. With rampant urbanization and commercialization of the
country side a teacher finds it hard to hit upon a suitable location to expose
their children to the joys of the out doors. Teachers who have found the worthiness
of it upon the young minds must strive to take the kids on excursions against many
odds. If the rising cost of transport or the entry fees to the park is a bother
of some schools, keeping discipline and safety of the children are a fear of
others. Some schools have even expressed their stand upon the unwanted risk of
taking the teenagers out on a trip. ‘You
don’t know what is in store. We cannot control their socialization within our
own campuses. How could the teacher manage them in the woods! Many teachers even in big cities express
their anguish. If these factors are not an issue then the priority of the school
are for religious circuits. The idea gets a better chance of acceptance from the
parents and would have cheaper accommodation and free food at the temples.
![]() |
| Kids develop a 'lending hand ' in the outdoors |
We find very few teachers who succeed
in persistently pushing their interest of exposing their class to the outdoors.
They face the wrath of their head masters and colleagues if not timely advice
upon the nonexistent ‘imminent benefits’ for all the unwanted trouble she takes.
Quoting the media about the increasing atrocities and abuses upon children they
prove that the venture of taking children to the forests is suicidal in every
sense.
![]() |
| Getting up the gully |
![]() |
| Timmapur with his students |
![]() |
| Ms. Suma standing tall with her students |
Suma G teaches Science at Srikantha Girl’s High
School, and is a dedicated Nature enthusiast who has shown tremendous
perseverance in the Eco club Movement. She was inducted in 2002, when she first
represented Mahaveer Education Society for our Capacity building Program for
Teachers Running a Nature Club, with the support of WWF-India. The two year
follow up package of the program in thirty schools in the District of Mysore
witnessed her excellent performance and she won laurels to her institution and
our society as well. Ever since, she has kept up her good spirit of learning
and communicating with young minds. She attends every possible event related to
Nature in town to keep herself updated with current issues and do justice to
her profession of teaching Science and her passion of running the School Nature
Club.
The Salu
Marada Timakka Eco Club she runs at Srikantha Girl’s High School is kept
thoroughly active with numerous guest lectures, field visits and excursions.
She is being a source of Inspiration for many children to perceive Natural
sciences for a carrier.
![]() |
| Gundappa on his favorite turf |
Mr. Gundappa is another teacher beyond
compare. Apart from many accolades and honors he ha won the hearts of many
students through his constant nudging them into natural history. Working at a
small village called Nagavalli near Tumkur, his School Nature Club was
recognized by the IISc., for their work on preparing a Biodiversity register of
the village. His work with the students in protecting Slender Lories in the
village locality has got him state wide recognition. He recalls that day in his
pre teacher training course when a lecture by TVN Murthy, the founder of
Wildlife Aware Nature Club (WANC) inspired to do something for Nature. Ever since he worked with the club and in a decade’s
time takes up the responsibility of the president ship of the same.
![]() |
| Ms. Triveni with her class on the rocks |
Mrs. Triveni is one other motherly figure which
the children of DMS, in Mysore are endowed with. Though she appeared a little
late on our radar her dedication could be felt with her professionalism and the
intimacy she has with her teenage students. Cutting across subject barriers she
ceases every opportunity to correct grammar, language, attitudes and beliefs of
the students. History, sociology, politics and current affairs are all her
sidekicks in teaching science. She like Gundappa, Suma and Thimmapur and many
others feel that taking children to the out doors will certainly charge them up
for the rest of the year. Such wonderful teachers are rare to get.
Thursday, 25 September 2014
‘ಮೇಕ್- ಇನ್- ಇಂಡಿಯಾ’ದ ಆಜೂಬಾಜು : ನಾಗೇಶ್ ಹೆಗಡೆ
ಕೃಪೆ: ಪ್ರಜಾವಾಣಿ > ಅಂಕಣಗಳು › ವಿಜ್ಙಾನ ವಿಶೇಷ | ನಾಗೇಶ್ ಹೆಗಡೆ
Thu, 09/25/2014
ಮಂಗಳನ ಕಕ್ಷೆಗೆ ಇದೀಗ ಎರಡೆರಡು ಶೋಧನೌಕೆಗಳು ಒಟ್ಟೊಟ್ಟಿಗೆ ಪ್ರವೇಶ ಮಾಡಿವೆ. ತುಸು ಮುಂದೆ ಮುಂದೆ ಅಮೆರಿಕದ ‘ಮೇವೆನ್’; ಅದರ ಹಿಂದೆ ಹಿಂದೆ ಭಾರತದ ‘ಮಂಗಳಯಾನ’. ಈ ಎರಡರ ಯಶಸ್ಸಿನ ಹಿಂದೆಯೂ ಭಾರತೀಯ ಎಂಜಿನಿಯರ್ಗಳ ಪಾತ್ರವೇ ಮಹತ್ವದ್ದಿತ್ತೆಂದು ಹೇಳಬಹುದು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲೂ ಶೇಕಡ ೩೬ರಷ್ಟು ಭಾರತೀಯರೇ ಇದ್ದಾರೆಂದು 8 ವರ್ಷಗಳ ಹಿಂದೆಯೇ ನಮ್ಮ ಸಂಸತ್ತಿನಲ್ಲಿ ಘೋಷಿಸಲಾಗಿತ್ತು. ಈಗಂತೂ ಶೇಕಡವಾರು ಇನ್ನೂ ಹೆಚ್ಚಿಗೆ ಇರಲೇಬೇಕು. ಮೇಲಾಗಿ, ಬಾಹ್ಯಾಕಾಶ ನೌಕೆಗೆ ಎಂಜಿನ್‌ಗಳು, ರಾಕೆಟ್‌ಗಳು, ಟೆಲಿಕಾಂ ಸಲಕರಣೆಗಳು ಎಷ್ಟು ಮುಖ್ಯವೋ ಅವಕ್ಕೆಲ್ಲ ಚಾಲನೆ ಕೊಡಬಲ್ಲ ಸಾಫ್ಟ್‌ವೇರ್‌ಗಳೂ ಅಷ್ಟೇ ಮುಖ್ಯವಾಗಿರುತ್ತವೆ. ಆ ಕ್ಷೇತ್ರದಲ್ಲಂತೂ ಅಮೆರಿಕದಲ್ಲೂ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ.
ಹಾಗಾಗಿ ಈ ಎರಡೂ ನೌಕೆಗಳನ್ನು ಮಂಗಳನ ಸುತ್ತ ಸುತ್ತಿಸು ವಲ್ಲಿ ಭಾರತೀಯ ಹಸ್ತಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಹೇಳುತ್ತ, ನಮ್ಮ ಹೆಮ್ಮೆಯನ್ನು ಪ್ರಧಾನಿ ಹೇಳಿದ ಹಾಗೆ ಕ್ರಿಕೆಟ್‌ಗೆ ಹೋಲಿಸಿ ಬರೀ ನೂರು ಪಟ್ಟಲ್ಲ, ಇನ್ನೂರು ಪಟ್ಟು ಹಿಗ್ಗಿಸಿಕೊಳ್ಳಲು ಅಡ್ಡಿಯಿಲ್ಲ.
ಎರಡೂ ನೌಕೆಗಳ ಉದ್ದೇಶಗಳು ಮಾತ್ರ ಭಿನ್ನವಾಗಿವೆ. ನಾಸಾದ ಮೇವೆನ್ (ಮಾರ್ಸ್ ಅಟ್ಮಾಸ್ಫಿಯರ್ ವೊಲೆಟೈಲ್ ಇವೊಲ್ಯೂಶನ್) ನೌಕೆ ಮಂಗಳನ ವಾಯುಮಂಡಲದ ಕೂಲಂಕಷ ಅಧ್ಯಯನವನ್ನು ಆರಂಭಿಸುತ್ತಿದೆ. ಅದೊಂದೇ ಅದರ ಉದ್ದೇಶ.
ಆ ಗ್ರಹದಲ್ಲಿ ಭೂಮಿಯ ಹಾಗೆ ದಟ್ಟ ವಾಯುಮಂಡಲವಿಲ್ಲ. ಓಝೋನ್ ವಲಯವೂ ಇಲ್ಲ. ಮಂಗಳನ ಸುಡುಗೆಂಪು ನೆಲಕ್ಕೆ ನಿರಂತರವಾಗಿ ಅತಿನೇರಳೆ ಮತ್ತು ಸೌರಕಿರಣಗಳ ದಾಳಿ ನಡೆಯುತ್ತಿರುತ್ತದೆ. ಆ ಕೆಂಪು ನೆಲದಲ್ಲಿ ಕೆಲವೆಡೆ ಘೋರ ಶೀತ, ಇನ್ನು ಕೆಲವೆಡೆ ಉರಿಸೆಕೆ ಇರುವುದರಿಂದ ಆಗಾಗ ಪ್ರಚಂಡ ಗಾಳಿ ಬೀಸುತ್ತ, ಕೆಂದೂಳನ್ನು ಆಕಾಶಕ್ಕೆ ತೂರುತ್ತಿರುತ್ತದೆ. ಅಲ್ಲಿನ ಆಕಾಶವೆಂದರೆ ದಟ್ಟ ಸೌರಕಣ ಮತ್ತು ತೆಳುವಾದ ದೂಳುಕಣಗಳ ಚಾದರ.
ಅದನ್ನು ವಿಶ್ಲೇಷಣೆ ಮಾಡಿದರೆ ಮಂಗಳದ ದುರಂತ ಚರಿತ್ರೆ ಗೊತ್ತಾದೀತು. ನಮ್ಮ ಭೂಮಿಯ ಹಾಗೆ ೪೫೦ ಕೋಟಿ ವರ್ಷಗಳ ಹಿಂದೆ ಅಲ್ಲೂ ವಾಯುಮಂಡಲ ಇತ್ತು. ಅಲ್ಲಿನ ಆಕಾಶದಲ್ಲಿ ಆಮ್ಲಜನಕ, ಸಾರಜನಕ ಅನಿಲಗಳೂ ದಟ್ಟಣಿಸಿದ್ದುವೇನೊ. ಆದರೆ ಹಠಾತ್ತಾಗಿ ಅಥವಾ ನಿಧಾನವಾಗಿ ಇಡೀ ವಾಯುಕವಚವೇ ಸಡಿಲಗೊಂಡು ಮಾಯವಾಗಿದ್ದು ಹೇಗೆ? ಜೀವಿಗಳ ವಿಕಾಸದ ನಂತರ ವಾಯುಕವಚ ಮಾಯವಾಯಿತೆ? ನಮ್ಮ ಭೂಮಿಯ ಮೇಲಾದರೆ ಇಲ್ಲಿ ವಿಕಾಸವಾದ ಜೀವಿಗಳೇ ಇಲ್ಲಿನ ವಾಯುಮಂಡಲವನ್ನು ಭದ್ರವಾಗಿ ಕಚ್ಚಿಹಿಡಿದಿದ್ದವು ಅಷ್ಟೇ ಅಲ್ಲ, ತಮಗೆ ಬೇಕೆಂದಂತೆ ಅದನ್ನು ಬದಲಾಯಿಸಿಕೊಂಡವು.
ಆದರೆ ಅಲ್ಲಿ ಮಂಗಳನ ಜೀವಿಗಳಿಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಮೆರಿಕದ ನಾಸಾ ನೌಕೆಯ ಉದ್ದೇಶ. ಈಗ ಅಲ್ಲಿರುವ ತೆಳುವಾತಾವರಣದಲ್ಲಿ ಯಾವ ಯಾವ ಅನಿಲ ಎಷ್ಟು ಪ್ರಮಾಣದಲ್ಲಿ ಇದೆಯೆಂಬುದು ಗೊತ್ತಾದರೆ ಮುಂದೆ ೨೦೩೦ರ ವೇಳೆಗೆ ಮನುಷ್ಯರು ಅಲ್ಲಿ ಸೂಕ್ತ ಸಿದ್ಧತೆಯೊಂದಿಗೆ ಇಳಿಯಬಹುದು. ಇದು ಎರಡನೆಯ ಉದ್ದೇಶ.
ಭಾರತದ ನೌಕೆಗೂ ಎರಡು ಉದ್ದೇಶಗಳಿವೆ: ನಮ್ಮ ಪ್ರಜೆಗಳ ಎದೆ ಹೆಮ್ಮೆಯಿಂದ ಉಬ್ಬುವಂತೆ ಮಾಡುವ ಮೊದಲ ಉದ್ದೇಶ ನಿನ್ನೆ ಬೆಳಿಗ್ಗೆಯೇ ಈಡೇರಿದೆ. ಎರಡನೆಯ ಉದ್ದೇಶ ಏನೆಂದರೆ ಬಾಹ್ಯಾಕಾಶ ರಂಗದಲ್ಲಿ ನಾವು ದಿಟವಾಗಿ, ದಿಟ್ಟ ಹೆಜ್ಜೆ ಇಟ್ಟಿದ್ದೇವೆಂದು ಜಗತ್ತಿಗೆ ತೋರಿಸುವುದು. ಬೇರೆ ದೇಶಗಳ ಉಪಗ್ರಹಗಳನ್ನು ಕಡಿಮೆ ಶುಲ್ಕದಲ್ಲಿ ಮೇಲೇರಿಸುತ್ತೇವೆಂದು ಜಾಹೀರು ಮಾಡುವುದು. ಬಾಹ್ಯಾಕಾಶ ‘ಉದ್ಯಮ’ದ ನಾನಾ ಬಗೆಯ ತಾಂತ್ರಿಕ ಅಗತ್ಯಗಳಿಗೆ ನಮ್ಮ ಯುವ ಜನತೆಯನ್ನು ಆಕರ್ಷಿಸುವುದು.
ಐದು ವರ್ಷಗಳ ಹಿಂದೆ ರೂಪುಗೊಂಡ ಈ ಯೋಜನೆ ಈಗ ಫಲ ಕೊಟ್ಟಿದೆ. ಈಗಿನ ಸರಕಾರದ ‘ಮೇಕ್ ಇನ್ ಇಂಡಿಯಾ’ ಘೋಷಣೆಗೆ ಸೂಕ್ತ ನೂಕುಬಲವನ್ನು ಕೊಟ್ಟಿದೆ. ಮಂಗಳನೆಂಬ ಬರಡು ಜಗತ್ತನ್ನು ರೌಂಡ್ ಹೊಡೆಯುತ್ತಿರುವ ಅವೆರಡು ನೌಕೆಗಳನ್ನು ವಿಜ್ಞಾನಿಗಳ ಪಾಲಿಗೆ ಬಿಟ್ಟು ನಮ್ಮ ನೆಲದ ಹಕೀಕತ್ತು ಏನೆಂಬುದನ್ನು ನೋಡಬೇಕಲ್ಲ? ಮೊನ್ನೆ ಭಾನುವಾರ ಪೃಥ್ವಿಯ ಆಕ್ರಂದನ ಜಗತ್ತಿನಾದ್ಯಂತ ಕೇಳಿಬಂತು.
ಭೂಮಿಯ ತಾಪಮಾನ ನಿರಂತರ ಏರುತ್ತಿದ್ದು, ಈ ಏರಿಕೆಗೆ ಬ್ರೇಕ್ ಹಾಕೋಣವೆಂದು ಇಡೀ ಮನುಕುಲವೇ ಹಕ್ಕೊತ್ತಾಯ ಮಾಡಿದ ಹಾಗೆ, 150 ದೇಶಗಳ ಸುಮಾರು ೨,೫೦೦ ತಾಣಗಳಲ್ಲಿ ಜನರು ಮಡುಗಟ್ಟಿದರು. ನ್ಯೂಯಾರ್ಕಿನಲ್ಲಿ ಅಂದಾಜು ಮೂರುವರೆ ಲಕ್ಷ ಜನರ ಭಾರೀ ಫೇರಿಯನ್ನು ಹೊರಡಿಸಲಾಗಿತ್ತು. ಅದು, ಇದುವರೆಗಿನ ಅತಿ ದೊಡ್ಡ ಜನ ಸಮಾವೇಶ ಎಂದು ಮಾಧ್ಯಮಗಳು ವರ್ಣಿಸಿದವು. ಅಲ್ಲಿ ಅಂದು ಅಮೆರಿಕದ ಸಾಹಿತ್ಯ, ಕ್ರೀಡೆ, ರಾಜಕಾರಣ, ಮನರಂಜನೆ, ವಿಜ್ಞಾನ ಹೀಗೆ ಎಲ್ಲ ರಂಗಗಳ ನಾಯಕರೂ ರಸ್ತೆಗಿಳಿದಿದ್ದರು.
ನ್ಯೂಯಾರ್ಕ್ ಮೇಯರ್, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್‌ಕಿ ಮೂನ್, ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್‌ಗೋರ್, ಸಿನಿಮಾ ನಟ ಡಿಕಾಪ್ರಿಯೊ, ವನ್ಯಜೀವತಜ್ಞೆ ಜೇನ್ ಗೂಡಾಲ್, ನಮ್ಮ ವಂದನಾ ಶಿವ ಎಲ್ಲರೂ ಅಲ್ಲಿದ್ದರು. ಅದೇ ಹೊತ್ತಿಗೆ ಕೆನಡಾ ಮತ್ತು ಅಮೆರಿಕದ ಗಡಿಗುಂಟ ಸಹಸ್ರಾರು ಜನರು ಕೈಗೆ ಕೈ ಹಿಡಿದು ಸಾಲಾಗಿ ನಿಂತರು. ಬಿಸಿಭೂಮಿ ಸಮಸ್ಯೆಗೆ ಗಡಿಮಿತಿ ಇಲ್ಲ ಎಂದು ತೋರಿಸಿಕೊಟ್ಟರು. ಬರ್ಲಿನ್, ಬೊಗೊಟಾ, ರಿಯೊ, ಕೊಲಂಬಿಯಾ, ಪ್ಯಾರಿಸ್, ಲಾಗೋಸ್, ಮೆಲ್ಬರ್ನ್, ಪಾಪುವಾ ನ್ಯೂಗಿನಿ ಮತ್ತು ಶಾಂತಸಾಗರದ ಅನೇಕ ದ್ವೀಪರಾಷ್ಟ್ರಗಳಲ್ಲಿ ‘ಪೀಪಲ್ಸ್ ಕ್ಲೈಮೇಟ್ ಮಾರ್ಚ್’ ಹೆಸರಿನಲ್ಲಿ ಜನರು ಭೂಮಿಯಾತ್ರೆ ನಡೆಸಿದರು.
ಈ ಜಾಗತಿಕ ಹಕ್ಕೊತ್ತಾಯ ಮೇಳವನ್ನು ಈಗಲೇ ನಡೆಸುವ ಉದ್ದೇಶ ಏನಿತ್ತೆಂದರೆ ಎರಡು ದಿನಗಳ ನಂತರ ಸೆಪ್ಟೆಂಬರ್ ೨೩ರಂದು ವಿಶ್ವಸಂಸ್ಥೆಯ ಆಶ್ರಯದಲ್ಲಿ ‘ಹವಾಗುಣ ಶೃಂಗಸಭೆ’ ಆಯೋಜಿತವಾಗಿತ್ತು. ಹಿಂದೆ ೨೦೦೯ರಲ್ಲಿ ಕೊಪೆನ್ಹೇಗನ್ನಲ್ಲಿ ಎಲ್ಲ ರಾಷ್ಟ್ರಗಳೂ ಸಭೆ ಸೇರಿ, ಭೂಜ್ವರಕ್ಕೆ ಔಷಧವನ್ನು ನಿರ್ಧರಿಸಲು ವಿಫಲವಾಗಿದ್ದವು. ಈ ಐದು ವರ್ಷಗಳಲ್ಲಿ ಜ್ವರ ಇನ್ನೂ ಜಾಸ್ತಿಯಾಗಿದೆ. ಹವಾಗುಣ ಏರುಪೇರು ತೀವ್ರವಾಗುತ್ತಿದೆ. ಬಿಸಿಲ ಬೇಗೆ, ಮಹಾಪೂರ, ಸುಂಟರಗಾಳಿ, ಮಹಾಬರಗಳಿಂದ ಜನರು ಹೈರಾಣಾಗುತ್ತಿದ್ದಾರೆ, ಜೀವಕೋಟಿ ತತ್ತರಿಸುತ್ತಿದೆ.
ಕಳೆದ ವರ್ಷವಂತೂ ಭೂಮಿಯ ಒಟ್ಟಾರೆ ಕಾರ್ಬನ್ ಉತ್ಪನ್ನ ಹಿಂದಿನ ಎಲ್ಲ ವರ್ಷಗಳಿಗಿಂತ ಹೆಚ್ಚಾಗಿದೆ. ‘ನಿಂನಿಮ್ಮಲ್ಲಿ ಕಚ್ಚಾಡಬೇಡಿ, ದಿಟ್ಟ ನಿಲುವು ತಗೊಳ್ಳಿ’ ಎಂದು ಎಲ್ಲ ರಾಷ್ಟ್ರಗಳ ಮುಖ್ಯಸ್ಥರನ್ನು ಒತ್ತಾಯಿಸಲೆಂದೇ ಅಷ್ಟೊಂದು ಮೇಳಗಳು ನಡೆದವು. ಸಾವಿರಾರು ವಿಜ್ಞಾನಿಗಳೂ ಫಲಕ ಹಿಡಿದು ರಸ್ತೆಗೆ ಇಳಿದಿದ್ದು ಈ ಬಾರಿಯ ವಿಶೇಷವಾಗಿತ್ತು. ‘ಭೂಮಿಯ ಉಷ್ಣತೆ ಏರುತ್ತಿರುವ ಕುರಿತು ಕಳೆದ ೪೫ ವರ್ಷಗಳಿಂದ ಸಂಶೋಧನಾ ವರದಿಗಳ ಮೂಲಕ ಎಚ್ಚರಿಸಿದ್ದೆಲ್ಲ ವಿಫಲವಾಗಿದೆ.
ನಾವೂ ಬೀದಿಗಿಳಿಯಲೇಬೇಕಾಗಿದೆ’ ಎನ್ನುತ್ತ ದಕ್ಷಿಣ ಕ್ಯಾಲಿಫೋರ್ನಿಯಾ ವಿ.ವಿ.ಯ ಭೂವಿಜ್ಞಾನಿ ಜೇಮ್ಸ್ ಪೊವೆಲ್ ತನ್ನಂಥ ಅನೇಕ ವಿಜ್ಞಾನಿಗಳನ್ನು ಸಂಘಟಿಸಿ ಜಾಥಾ ಪ್ರವೇಶ ಮಾಡಿದ್ದಾರೆ. ‘ಚುನಾಯಿತ ಧುರೀಣರು ಮತ್ತು ಧನಿಕ ವ್ಯಕ್ತಿಗಳು ವೈಜ್ಞಾನಿಕ ಪ್ರವೃತ್ತಿಯ ಮೇಲೆ ದಾಳಿ ನಡೆಸಿದ್ದಾರೆ. ನಮ್ಮನ್ನು ಉಗ್ರವಾದಿಗಳೆಂದು ಹಣೆಪಟ್ಟಿ ಕಟ್ಟಿ ಏನೆಲ್ಲ ನಿರ್ಬಂಧ ಹಾಕಲಾಗುತ್ತಿದೆ’ ಎಂದಿದ್ದಾರೆ.
ನ್ಯೂಯಾರ್ಕ್ ವಿಜ್ಞಾನ ಅಕಾಡೆಮಿ ಮತ್ತು ಅಮೆರಿಕನ್ ಭೂಭೌತವಿಜ್ಞಾನ ಸಂಘಗಳೆರಡೂ ತಮ್ಮೆಲ್ಲ ಸದಸ್ಯರನ್ನು ಜಾಥಾಕ್ಕೆ ಹೊರಡಿಸಿದ್ದವು. ‘ಸತ್ಯವನ್ನು ಅರಿಯುವ ಹಕ್ಕನ್ನು ಅನುಭವಿಸುವವರು ಕ್ರಿಯಾಶೀಲರಾಗಲೇಬೇಕಾದ ಕರ್ತವ್ಯವನ್ನೂ ನಿಭಾಯಿಸಬೇಕಾಗುತ್ತದೆ’ ಎಂದ ಐನ್ಸ್ಟೀನ್ ಮಾತನ್ನು ಪುನರುಚ್ಚರಿಸಿ ನೋತ್ರೆದಾಮ್ ವಿ.ವಿ.ಯ ವಿಜ್ಞಾನಿಗಳು, ಎಮ್‌ಐಟಿ, ಕಾಲ್ಟೆಕ್, ಹಾರ್ವರ್ಡ್ ಮತ್ತು ಇತರ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳ ತಜ್ಞರೂ ಮೇಳವಿಸಿದ್ದರು.
ವಿಪರ್ಯಾಸ ಏನೆಂದರೆ ಭಾರತ ಮತ್ತು ಚೀನಾ ದೇಶಗಳ ನಾಯಕರು ಸೆ. ೨೩ರ ಶೃಂಗಸಭೆಯಲ್ಲಿ ಭಾಗವಹಿಸಲಿಲ್ಲ. ಅಲ್ಲಿಗೆ ಹೋಗಿರೆಂದು ಭಾರತದ ಪ್ರಧಾನಿಯನ್ನು ಒತ್ತಾಯಿಸಲೆಂದೇ ದಿಲ್ಲಿಯಲ್ಲಿ ಕಳೆದ ಶನಿವಾರ ಎರಡು ಸಾವಿರ ಜನರ ಪ್ರತಿಭಟನಾ ಮೆರವಣಿಗೆ ನಡೆದಿತ್ತು. ಚೀನಾ, ಅಮೆರಿಕ, ಭಾರತ, ರಷ್ಯಾ ಮತ್ತು ಜಪಾನ್ ಈ ಐದು ದೇಶಗಳು ಕ್ರಮವಾಗಿ ಅತಿ ಹೆಚ್ಚು ಕಾರ್ಬನ್ ಉತ್ಪಾದಿಸುವ ಮೊದಲ ಐದು ಸ್ಥಾನಗಳಲ್ಲಿವೆ.
ನಮ್ಮ ಪ್ರಧಾನಿ ಇಲ್ಲಿ ಬೆಂಗಳೂರಿನಲ್ಲಿ ‘ಸ್ವಚ್ಛ ಭಾರತ ಅಭಿಯಾನ’ವನ್ನು ಘೋಷಿಸುವ ಸಂದರ್ಭಕ್ಕೆ ಸರಿಯಾಗಿ ಅಲ್ಲಿ ನ್ಯೂಯಾರ್ಕಿನಲ್ಲಿ ಹವಾಗುಣ ಶೃಂಗಸಭೆ ಆರಂಭವಾಗಿತ್ತು. ಇಡೀ ಭೂಗ್ರಹವನ್ನು ಸ್ವಚ್ಛ ಮಾಡುವ ಆ ಅಧಿವೇಶನದಲ್ಲಿ ಭಾರತದ ಪ್ರಧಾನ ಪ್ರತಿನಿಧಿಯೇ ಇರಲಿಲ್ಲ. ನರೇಂದ್ರ ಮೋದಿ ನಾಡಿದ್ದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಾಜರಿರುತ್ತಾರೆ. ಈಗೇಕೆ ಹೋಗಲಿಲ್ಲ? ಕಳೆದ ವಾರ ಚೀನೀ ಅಧ್ಯಕ್ಷರ ಜೊತೆಗೆ ಅಷ್ಟೆಲ್ಲ ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದಾಗ, ಭೂಗ್ರಹವನ್ನು ತಂಪುಗೊಳಿಸಬಲ್ಲ ಬದಲೀ ತಂತ್ರಜ್ಞಾನ ಬಗ್ಗೆ ಅಥವಾ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಏಕೆ ಚಕಾರ ಎತ್ತಲಿಲ್ಲ? -ಈ ಪ್ರಶ್ನೆಗಳು ನಮ್ಮ ಮಾಧ್ಯಮಗಳಲ್ಲಿ ಚರ್ಚೆಯಾಗಲೇ ಇಲ್ಲ.
ಹವಾಗುಣ ಶೃಂಗಸಭೆಗೆ ೧೧೮ ರಾಷ್ಟ್ರಗಳ ಮುಖ್ಯಸ್ಥರು ಹಾಜರಾಗಿರುವಾಗ ನಮ್ಮ ಪ್ರಧಾನಿಯೇಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಹೀಗಿರಬಹುದು: ಈಗಿನ ಸಭೆಯ ಉದ್ದೇಶ ಏನೆಂದರೆ ಮುಂಬರುವ ಇನ್ನೂ ಮಹತ್ವದ ಚರ್ಚೆಗಳಿಗೆ ಚಾಲನೆ ನೀಡುವುದು. ಡಿಸೆಂಬರ್ನಲ್ಲಿ ಪೆರು ದೇಶದ ರಾಜಧಾನಿ ಲಿಮಾದಲ್ಲಿ ರಾಷ್ಟ್ರನಾಯಕರ ಮತ್ತೊಂದು ಸಭೆ ನಡೆಯಲಿದೆ. ಭೂತಾಪ ನಿಯಂತ್ರಣದ ವಿವಿಧ ಒಡಂಬಡಿಕೆಗಳು ಅಲ್ಲಿ ರೂಪುಗೊಳ್ಳುತ್ತವೆ.
ಆ ಬಳಿಕ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ೨೦೧೫ರಲ್ಲಿ ಉತ್ತುಂಗ ಶೃಂಗಸಭೆ ನಡೆಯಲಿದ್ದು ಅಲ್ಲಿ ಎಲ್ಲ ರಾಷ್ಟ್ರಗಳೂ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಈಗ ಪ್ರಧಾನಿ ಹೋಗಲೇಬೇಕೆಂಬ ತುರ್ತೇನಿಲ್ಲ; ಇಷ್ಟಕ್ಕೂ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅಲ್ಲಿ ಈಗ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಕಾರ್ಬನ್ ಹೊರೆಯನ್ನು ತಗ್ಗಿಸುವಲ್ಲಿ ತಮ್ಮ ಹೊಸ ಸರ್ಕಾರ ಏನೇನು ಕ್ರಮ ಕೈಗೊಳ್ಳುತ್ತಿದೆ ಎಂದು ವಿವರಣೆ ನೀಡುತ್ತಿದ್ದಾರೆ. ಕಲ್ಲಿದ್ದಲ ಗಣಿಗಾರಿಕೆಗೆ ಇಮ್ಮಡಿ ಮೇಲುತೆರಿಗೆ ಹಾಕಿ ೬೦೦ ಕೋಟಿ ಡಾಲರ್ ಹಣ ಸಂಗ್ರಹಿಸಿ ಅರಣ್ಯ ಬೆಳೆಸುತ್ತೇವೆಂದೂ ನೀರಾವರಿ ಕಾಲುವೆಗಳುದ್ದಕ್ಕೂ ಸೌರ ಫಲಕ ಹಾಕುತ್ತೇವೆಂದೂ ಹೇಳಿದ್ದಾರೆ.
ಆದರೂ ದೊಡ್ಡ ಉದ್ಯಮಗಳಿಗೆ ಮೂಗುದಾಣ ಹಾಕುವ ಬದಲು ಇನ್ನಷ್ಟು ಗೋಗ್ರಾಸ ನೀಡಬೇಕೆಂಬ ಹುಮ್ಮಸ್ಸೇ ಎಲ್ಲ ಕಡೆ ಕಾಣುತ್ತಿದೆ. ಪರಿಸರ ಖಾತೆಯ ಮಹತ್ವವನ್ನು ಕಡಿಮೆ ಮಾಡುತ್ತ, ದೊಡ್ಡ ಯೋಜನೆಗಳಿಗೆ ಅಸ್ತುಪತ್ರ ಪಡೆಯುವ ಮುನ್ನ ಪಾಲಿಸಬೇಕಿದ್ದ ಪರಿಸರ ನಿರ್ಬಂಧಗಳನ್ನು ಸಡಿಲಗೊಳಿಸುತ್ತ, ಅಭಿವೃದ್ಧಿಯ ರಥಕ್ಕೆ ಚೀನಾ ಅಮೆರಿಕಗಳ ಹೊಸ ಎಂಜಿನ್ ಜೋಡಿಸುವ ಈ ಉತ್ಸಾಹ ಹಸುರುವಾದಿಗಳನ್ನು ಕಂಗಾಲು ಮಾಡಿದೆ.
ಮಂಗಳಲೋಕದಲ್ಲಿ ಮೀಥೇನ್ ಇದೆಯೇ ಎಂದು ಶೋಧಿಸಹೊರಟ ನಾವು ನಮ್ಮದೇ ಭೂಖಂಡಲ್ಲಿ ಮೀಥೇನನ್ನು, ಕಾರ್ಬನ್ ಡೈಆಕ್ಸೈಡನ್ನು ಹೆಚ್ಚಿಸುವ ಧಾವಂತದಲ್ಲಿದ್ದೇವೆಂಬ ಆತಂಕ ಕಾಡತೊಡಗಿದೆ. ಮಂಗಳಯಾನದ ಯಶಸ್ಸಿನಿಂದಾಗಿ ಭಾರತದ ಖ್ಯಾತಿ ಅಂತರಿಕ್ಷಕ್ಕೇರಿದೆಯಾದರೂ ಪರಿಸರ -ಜೀವಜಾಲ ಸಂರಕ್ಷಣೆಯ ವಿಷಯದಲ್ಲಿ ಅದು ನೆಲಕಚ್ಚಿದೆ. ಅದನ್ನು ಮೇಲಕ್ಕೆತ್ತುವ ಹೊಣೆಯನ್ನು ಬರೀ ವಿಜ್ಞಾನಿಗಳ ಅಥವಾ ಕ್ರೀಡಾಳುಗಳ ಹೆಗಲ ಮೇಲಿಡಲಾದೀತೆ?
‘ನನ್ನಂಥ ಬಾಲಕರ ಕನಸು ಏನೆಂದರೆ ಇನ್ನು ೩೦ ವರ್ಷಗಳಲ್ಲಿ ಮಂಗಳಲೋಕದಲ್ಲಿ ಭಾರತೀಯರು ಮನೆ ಕಟ್ಟಬೇಕು’ ಎಂದು ನಿನ್ನೆ ಖುಷಿಯಲ್ಲಿ ಯಾವುದೋ ಸುದ್ದಿವಾಹಿನಿಗೆ ವಿದ್ಯಾರ್ಥಿಯೊಬ್ಬ ಹೇಳುತ್ತಿದ್ದ. ಆ ಬಾಲಕನ ಅಂಥ ಅಮಂಗಳ ಮಾತುಗಳನ್ನು ಕ್ಷಮಿಸೋಣ. ನಮ್ಮ ಈ ಸುಂದರ ಭೂಮಿಯನ್ನು ಬಿಸಿಗೋಲವನ್ನಾಗಿ ಮಾಡಿ, ಮಂಗಳನ ರುಗ್ಣಭೂಮಿಯಲ್ಲಿ ಮನೆ ಕಟ್ಟಬೇಕಾದ ದುರ್ಗತಿ ಮನುಕುಲಕ್ಕೆ ಎಂದೂ ಬಾರದಿರಲೆಂದು ಆಶಿಸೋಣ.
Subscribe to:
Posts (Atom)


















