Sunday, 3 July 2016

ಸಾಹಿತಿಯ ಕಣ್ಣಲ್ಲಿ ಕಾಡುಬಳ್ಳಿ

-ಡಾ. ನಾ. ಡಿಸೋಜ,
ಕೃಪೆ ಪ್ರಜಾವಾಣಿ  07/03/2016
ಗಣಪೆ ಬಳ್ಳಿ : 
’ಪರಿಸರ ಉಳಿಸಿ’ ಸಂಸ್ಥೆ ಏರ್ಪಡಿಸಿದ ಒಂದು ಸಮಾರಂಭ ಅದು. ಹೆಸರಿಗೆ ತಕ್ಕಂತೆ ಒತ್ತೊತ್ತಾಗಿ ಬೆಳೆದ ಕಾಡಿನ ನಡುವೆ ಒಂದು ವೇದಿಕೆ ಮಾಡಿ, ಅಲ್ಲಿ ಒಂದೆರಡು ಕುರ್ಚಿ ಇರಿಸಿ ಒಂದು ಮೈಕು ಕಟ್ಟಿ, ಕೆಲ ಚಲನಚಿತ್ರ ಗೀತೆಗಳನ್ನು ಕಿರುಚಿಸುವುದರ ಮೂಲಕ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದ್ದರು. ಅವರು ವೇದಿಕೆ ಎಂದು ಮಾಡಿದ ಕಡೆ ಎರಡು ಮೂರು ಮರಗಳು ಇದ್ದವು. ಹಿಂದೆ ಮರ – ಮುಂದೆ ಮರ. ಜನ ಕೂಡ ಮರಗಳ ನಡುವೆಯೇ ನಿಲ್ಲಬೇಕು, ಇಲ್ಲವೇ ಕುಳಿತು ಕೊಳ್ಳಬೇಕು ಅಂತಹಾ ಸ್ಥಿತಿ. ದಟ್ಟವಾದ ಈ ಮರಗಳ ನಡುವೆ ಕುಳಿತ ನಾನು ಒಂದು ಸಂದರ್ಭದಲ್ಲಿ ಅಚಾನಕ್ಕಾಗಿ ತಲೆ ಎತ್ತಿ ನೋಡಿದಾಗ ಈ ಎಲ್ಲ ಮರಗಳ ತುದಿಗಳನ್ನ ಒಂದು ಬಳ್ಳಿ ಆವರಿಸಿಕೊಂಡು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದನ್ನ ಗಮನಿಸಿದೆ. ಮರಗಳ ಮೇಲಿನ ತುದಿ, ಎಲೆ ರೆಂಬೆ ಕೊಂಬೆಗಳೆಲ್ಲವನ್ನ ಈ ಬಳ್ಳಿ ತನ್ನ ವಶಕ್ಕೆ ತೆಗೆದುಕೊಂಡಂತೆ ನನಗೆ ಕಂಡಿತು. ಆ ಬಳ್ಳಿ ಯುವಕನೋರ್ವನ ತೊಡೆಯ ತೋಳಿನಂತೆ ದಷ್ಟಪುಷ್ಟವಾಗಿದ್ದು ಮರಗಳನ್ನು ಹಿಡಿದ ರೀತಿ ಗಾಬರಿ ಹುಟ್ಟಿಸುವಂತಿತ್ತು.

ಮರಗಳ ರೆಂಬೆಕೊಂಬೆಗಳ ಮೂಲಕ ತನ್ನ ಮೈಯನ್ನು ಹೊರಳಿಸಿ ತನ್ನ ಬಿಗಿಯನ್ನ ಸಡಿಲಿಸದ ಹಾಗೆ ಅದು ಮರಗಳನ್ನ ಹಿಡಿದುಕೊಂಡಿತ್ತು. ಈ ಮರವನ್ನ ಹಿಡಿದುಕೊಳ್ಳಲು ಸಹಾಯಕವಾಗಲಿ ಅನ್ನುವ ಹಾಗೆ ಪಕ್ಕದಲ್ಲಿಯ ಇನ್ನೊಂದು ಮರವನ್ನ ಅಪ್ಪಿ ಹಿಡಿದು, ಇದರ ಮೇಲಿನ ಅಪ್ಪುಗೆ ಬಿಗಿಗೊಳಿಸಿತ್ತು. ಇಲ್ಲಿ ನುಗ್ಗಿ, ಅಲ್ಲಿ ಹೊರಳಿ ಇನ್ನೊಂದು ಕಡೆ ಮೈ ಚಾಚಿ, ತನ್ನ ತೋಳು ತೊಡೆಗಳ ಹಿಡಿತವನ್ನ ಬಿಗಿಗೊಳಿಸಿ ಆ ಬಳ್ಳಿ ಒಂದು ಹೆಬ್ಬಾವಿನ ಹಾಗೆ ಮರಗಳನ್ನ ತನ್ನ ವಶದಲ್ಲಿ ಇರಿಸಿಕೊಂಡಿತ್ತು. ಗಾಳಿಗೋ ಮತ್ತೊಂದಕ್ಕೋ ಈ ಮರಗಳು ಬೇರೆ ಆಗದಿರಲಿ ಅನ್ನುವಂತೆ ಈ ಬಳ್ಳಿ ಮರಗಳನ್ನ ಹಿಡಿದು ಕೊಂಡಿದೆಯೇನೋ ಎಂದು ನನಗೆ ಅನ್ನಿಸಿತು.

ಮರಗಳ ಮೇಲಿನ ಈ ಬಳ್ಳಿಯ ಮೇಲೆ ಕಣ್ಣನ್ನು ಕೇಂದ್ರೀಕರಿಸಿಕೊಂಡು ಅದನ್ನೇ ಬೆರಗಾಗಿ ನೋಡುತ್ತಿರುವುದನ್ನು ಗಮನಿಸಿದ ನನ್ನ ಬಳಿ ಕುಳಿತ ಓರ್ವರು– ‘ಅದು ಗಣಪೆ’ ಎಂದರು. ಅವರ ಮಾತು ನನಗೆ ಥಟ್ಟನೆ ಅರ್ಥವಾಗಲಿಲ್ಲ. ‘ಏನಂದ್ರಿ?’ ಎಂದು ಕೇಳಿದೆ. ‘ನೀವು ನೋಡ್ತಾ ಇದೀರಲ್ಲ... ಅದು ಒಂದು ಬಳ್ಳಿ... ಗಣಪೆ ಅಂತ ಅದರ ಹೆಸರು...’ ಎಂದು ಮತ್ತೆ ಅವರು ವಿವರ ನೀಡಿದರು. ಆ ಬಳ್ಳಿಯನ್ನ ನೋಡಿ ಅಚ್ಚರಿಯಾದ ನನಗೆ ಅದರ ಹೆಸರು ಕೇಳಿ ಮತ್ತೂ ಗಾಬರಿಯಾದಂತಾಗಿ, ‘ಗಣಪೆ ಅಂತಾನಾ?’ ಎಂದು ಮತ್ತೆ ಪ್ರಶ್ನಿಸಿದೆ. ‘ಹೌದು, ನಾವು ಇದನ್ನ ಗಣಪೆ ಬಳ್ಳಿ, ಗಣಪೆ ಬಳ್ಳಿ ಅಂತಾನೆ ಕರೆಯೋದು...’ ಎಂದು ಉತ್ಸಾಹದಲ್ಲಿ ಅವರು ಉತ್ತರ ನೀಡಿದರು.

ಹಳ್ಳಿಜನ ತಮ್ಮಲ್ಲಿಯ ವಿಶೇಷತೆಯ ಕುರಿತಂತೆ ಪಟ್ಟಣದವರಿಗೆ ಹೇಳಲು ಸದಾ ಉತ್ಸುಕರಾಗಿ ಇರುತ್ತಾರೆ. ಹೀಗೆ ಯಾರಾದರೂ ಸಿಕ್ಕರಂತೂ ಅವರ ಹುಮ್ಮಸ್ಸು ಅಧಿಕವಾಗುತ್ತದೆ. ಅದರಲ್ಲೂ ಪಟ್ಟಣದವರು, ವಿದ್ಯಾವಂತರು, ಅವರಲ್ಲಿಯ ಯಾವುದೋ ವಿಶೇಷತೆ ಕುರಿತಂತೆ ಆಸಕ್ತಿ ತೋರಿಸಿದರಂತೂ ಅವರ ಉತ್ಸಾಹ ಮೇರೆ ಮೀರುತ್ತದೆ. ಇದು ಸಹಜ ಕೂಡ. ಹೀಗೆಂದೇ ನಾನು ಅವರ ಉತ್ಸಾಹಕ್ಕೆ ಧಕ್ಕೆಯನ್ನುಂಟು ಮಾಡಬಾರದು ಅನ್ನುವ ಉದ್ದೇಶದಿಂದ, ‘ಬಳ್ಳಿ ಅಂತೀರಾ... ಮರ ಇದ್ದ ಹಾಗಿದೆ’ ಎಂದೆ. ಅವರು ರೋಮಾಂಚನಗೊಂಡರು.


‘ಇದು ಬೆಳೆಯೋದು ಮರವಾಗಿ, ಆದರೆ ಹಬ್ಬೋದು ಬಳ್ಳಿಯಾಗಿ’ ಎಂದರು. ಅವರು ಮಾತನ್ನ ಮುಂದುವರೆಸುತ್ತಿದ್ದರೇನೋ... ಕಾರ್ಯಕ್ರಮ ಪ್ರಾರಂಭವಾಗಿ ನನ್ನನ್ನ ವೇದಿಕೆಗೆ ಕರೆದಾಯಿತು. ನಾನು ಬರುವುದಾಗಿ ಅವರಿಗೆ ಹೇಳಿ ಎದ್ದೆ. ಎಂದಿನಂತೆ ಸ್ವಾಗತ ಇತ್ಯಾದಿ ನಡೆದು ಕಾರ್ಯಕ್ರಮ ಮುಗಿದಾಗ ಬಹಳ ಹೊತ್ತಾಗಿತ್ತು. ನಾನು ಅಲ್ಲಿಂದ ಹೊರಟಾಗ ನನ್ನ ಬಳಿ ಕುಳಿತು ಮಾತಿಗೆತೊಡಗಿದ ವ್ಯಕ್ತಿ ಎದುರಾದರು. ನಾನೇ, ‘ನಿಮ್ಮನ್ನ ಒಂದು ಸಾರಿ ಭೇಟಿ ಆಗಿ ಮಾತನಾಡಬೇಕು’ ಎಂದೆ. ‘ಅದೇ ಗಣಪೆ ಬಳ್ಳಿ ಬಗ್ಗೆ ಅಲ್ವಾ?’ ಎಂದು ಕೇಳಿದರು. ‘ಹೌದು’ ಎಂದೆ ನಾನು. ಅವರು ಉತ್ಸುಕತೆಯಿಂದ, ‘ಬನ್ನಿ, ನನಗೂ ಅದರ ಬಗ್ಗೆ ಮಾತನಾಡುವುದು ಇಷ್ಟ’ ಎಂದರು. ಆದರೆ ಇದಕ್ಕೆ ಅವಕಾಶ ದೊರೆತದ್ದು ಮಾತ್ರ ಕೆಲವು ತಿಂಗಳುಗಳ ನಂತರ. ಬೇರೆ ಯಾವುದೋ ಕೆಲಸಕ್ಕೆಂದು ಅದೇ ಹಳ್ಳಿಗೆ ಹೋದಾಗ ಆವತ್ತು ಸಿಕ್ಕ ಅವರ ಮನೆಗೇನೆ ಹೋಗಿ ಇಳಿದೆ. ಅವರು ಮನೆ ಬಾಗಿಲಲ್ಲಿ ನಿಂತವರು, ‘ಓ ಬನ್ನಿ’ ಎಂದರು.
ಅವರ ಮನೆ ಜಗಲಿ ಏರಿ ಮರದ ಅಡ್ಡ ಬೆಂಚಿನ ಮೇಲೆ ಕುಳಿತು, ‘ನಾನೊಂದು ಸಾರಿ ಆ ಬಳ್ಳಿಯನ್ನ ನೋಡಬೇಕಿತ್ತು’ ಅಂದೆ.
‘ಗಣಪೆ ಬಳ್ಳಿ ಅಲ್ಲ?’ ಂದು ಕೇಳಿದರು.
‘ಹೌದು’.
‘ಸರಿ ನೋಡುವ’.

ಅವರು ಈ ಕೆಲಸ ಮಾಡಲೆಂದೇ ಕಾದುಕುಳಿತ ಹಾಗೆ ಎದ್ದರು. ಸಟಸಟ ಒಳಹೋಗಿ ಒಂದು ಕೊಬ್ಬರಿ ಎಣ್ಣೆ ಬಾಟಲಿ ಹಿಡಿದು ಬಂದರು.‘ಗಣಪೆ ನೋಡಲಿಕ್ಕೆ ಅಂತ ಬಂದ ನಿಮಗೆ ಇಂಬಳದ ಕೈಲಿ ಕಡಿಸೋದಿಲ್ಲ ನಾನು. ಈ ಎಣ್ಣೇನ ಎರಡೂ ಕಾಲಿನ ಮೊಣಕಾಲ ಕೆಳಗಿನವರೆಗೆ ದಪ್ಪಗೆ ಸವರಿಕೊಳ್ಳಿ. ನಾವು ಹೋಗೋ ದಾರೀಲಿ ಸದಾ ತಂಪು. ಅಲ್ಲಿ ಇಂಬಳ ಹೆಚ್ಚು. ಎಣ್ಣೆ ಹಚ್ಚಿಕೊಂಡರೆ ಇಂಬಳ ಹತ್ತೋದಿಲ್ಲ’ ಎಂದರು. ನಾನು ತರಗತಿಯಲ್ಲಿ ಪಾಠ ಹೇಳುವ ಶಿಕ್ಷಕರ ಮಾತು ಕೇಳುವ ವಿದ್ಯಾರ್ಥಿಯಂತೆ ಕೈಗೆ ಎಣ್ಣೆ ಸವರಿಕೊಂಡು, ಪಂಚೆ ಎತ್ತಿ ಕಾಲಿಗೆಲ್ಲ ಬಳಿದುಕೊಂಡೆ. ಹಸಿಹಸಿ ಎಣ್ಣೆ ಕಾಲಿನಿಂದ ಇಳಿಯುವಾಗ ನನಗೆ ಒಂದು ಬಗೆ ಕಸಿವಿಸಿ ಆಯಿತು. ಆ ಅನುಭವ ನನಗೆ ಇರಲಿಲ್ಲ. ಜಿಡ್ಡುಜಿಡ್ಡಾದ ಆ ದ್ರವ ಕಾಲ ಮೇಲಿನಿಂದ ಇಳಿದಾಗ ಮತ್ತೂ ಗೊಂದಲದಲ್ಲಿ ಬಿದ್ದೆ. ಅವರು ಅಂಗಳಕ್ಕೆ ಇಳಿದು ‘ಹೋಗುವ’ ಅಂದರು. ನಾನು ಅವರ ಹಿಂದೆ ಹೊರಟೆ.


ತುಸು ದೂರ ಕಾಲುದಾರಿಯಲ್ಲಿ ನಡೆದು ನಂತರ ಕಾಡು ಹೊಕ್ಕೆವು. ಅಲ್ಲಿ ಸಿದ್ಧ ದಾರಿ ಇರಲಿಲ್ಲ. ನಾವು ನಡೆದದ್ದೇ ದಾರಿ, ತುಳಿದದ್ದೇ ಹಾದಿ. ಹೆಜ್ಜೆ ಹೆಜ್ಜೆಗೆ ಮುಖಕ್ಕೆ ಬಡಿಯುವ ಗಿಡ ಪೊದೆ ಕೊಂಬೆ–ರೆಂಬೆ. ದಾರಿಗೆ ಅಡ್ಡ ನಿಲ್ಲುವ ಮರ ಬಳ್ಳಿ. ಮರದ ಕೊಂಬೆ ಸರಿದಾಗ ಬೀಳುವ ಬೆಳಕು. ಒಣಗಿ ಬಿದ್ದ ಎಲೆಯ ಮೇಲೆ ಅದೇನೋ ಸರಿದ ಸದ್ದು. ಮೇಲೆ ಮರದ ರೆಂಬೆಯಲ್ಲಿ ಕುಳಿತು ‘ಕೂ’ ಹಾಕುವ ವಿವಿಧ ಪ್ರಾಣಿ ಪಕ್ಷಿಗಳು. ರೆಂಬೆಗೆ ರೆಂಬೆ ಮೈಯುಜ್ಜಿ ಹೊರಡಿಸುವ ವಿಚಿತ್ರ ಸದ್ದು. ಗಿಡ ಅಲುಗಾಡಿ ಮಾಡುವ ಧ್ವನಿ. ಗಾಳಿಗೆ ಬಾಗಿ ಹೆದರಿಸುವ ಮರ. ನಾವು ಮುಂದೆ ನಡೆದೆವು.

‘ನಿಮ್ಮ ಆಸಕ್ತಿ ಹೇಳಿ ಮಾರಾಯರೇ’ ಎಂದು ಆ ವ್ಯಕ್ತಿ ನನ್ನ ಜೊತೆಗೆ ಸಲುಗೆಯ ಮಾತಿಗೆ ಇಳಿದು ತಮಗೂ ಗಣಪೆಗೂ ಇರುವ ಸಂಬಂಧದ ಬಗ್ಗೆ ಹೇಳತೊಡಗಿದರು.
‘ನಾನೂ ಈ ಗಣಪೆ ಹುಚ್ಚು ಹತ್ತಿಸಿಕೊಂಡು ಕಾಡು ಅಲೆದಿದ್ದೇನೆ. ಅದರ ಗಾತ್ರ, ಅದು ಹಬ್ಬುವ ರೀತಿ, ಇಡೀ ಕಾಡನ್ನ ಆವರಿಸಿಕೊಳ್ಳುವ ವಿಧಾನ, ಕಾಡೇ ನನ್ನದು ಅನ್ನುವ ಹಾಗೆ ಅದು ವ್ಯಾಪಿಸಿಕೊಳ್ಳೋದು ನನಗೆ ಅಚ್ಚರಿ ತಂದಿದೆ. ಈ ಬಳ್ಳೀನ ನೋಡಿದಾಗ ಇದರಲ್ಲಿ ಏನೋ ವಿಶೇಷತೆ ಇದೆ ಅಂತ ನನಗೆ ಅನಿಸಿದೆ...’ ಎಂದರು ಅವರು.
‘ನನಗೂ ಹಾಗೆಯೇ ಅನಿಸುತ್ತೆ... ಈಗ ನಾನು ಬಂದಿರೋದು ಕೂಡ ಅದಕ್ಕೇನೆ’ ಎಂದೆ.

‘ಹೌದು, ಇಲ್ಲ ಅಂದರೆ ಒಂದು ಕಾಡುಬಳ್ಳೀನ ಹುಡುಕಿಕೊಂಡು ಪೇಟೆಯಿಂದ ಹಳ್ಳಿಗೆ ಯಾರು ಬರತಾರೆ ಹೇಳಿ’ ಎಂದು ಹೇಳಿ ಅವರು ನಕ್ಕರು. 
ನಾವು ನಾಲ್ಕು ಹೆಜ್ಜೆ ಬಂದಿರಲಿಕ್ಕಿಲ್ಲ, ಅವರು ತಟ್ಟನೆ ನನ್ನ ಕೈ ಹಿಡಿದುಕೊಂಡರು. ನಾನು ಗಾಬರಿಯಿಂದ ನಿಂತೆ. ಅವರು ನೆಲದತ್ತ ಬಗ್ಗಿ ಕೈ ತೋರಿಸಿದರು. ಒಂದು ಹಾವು ನಿಧಾನವಾಗಿ ತನ್ನ ದಾರಿ ಹಿಡಿದು ಸಾಗಿತ್ತು. ‘ಗಾಬರಿ ಬೇಡ. ಅದು ಮುಣ್ಣು ಮುಕ್ಕ... ಅದರ ದಾರೀಲಿ ನಾವು ಹೋಗತಿದೇವೆ. ಅದಕ್ಕೆ ದಾರಿ ಬಿಡಬೇಕಾದ್ದು ನಮ್ಮ ಕರ್ತವ್ಯ. ಏನಿದ್ರು ಕಾಡು ನಮ್ಮದಲ್ಲ, ನಾವು ಇಲ್ಲಿಗೆ ಹೊರಗಿನವರು’ ಎಂದರು ನಕ್ಕು. ನಾವು ಮುಂದೆ ಸಾಗಿದೆವು. ಹತ್ತು ಮಾರು. ಕಾಡು ತಲೆಯ ಮೇಲೆ ಕಪ್ಪು ಮೋಡವಾಗಿ ಕವಿದಿತ್ತು. ಬಿಸಿಲ ಝಳ ಇರಲಿಲ್ಲ. ಅವರು ತಟ್ಟನೆ ನಿಂತರು. ‘ಈಗ ನೋಡಿ’ ಎಂದರು ತಲೆ ಎತ್ತಿ. ನೋಡಿದೆ. ಹತ್ತಾರು ಹೆಬ್ಬಾವುಗಳು ಒಂದನ್ನೊಂದು ಹೆಣೆದುಕೊಂಡ ಹಾಗೆ ಒಂದು ಗಣಪೆ ಐದಾರು ಮರಗಳನ್ನ ತನ್ನ ತೆಕ್ಕೆಗೆ ತೆಗೆದುಕೊಂಡು ತೂಗು ಬಿದ್ದಿತ್ತು. ತೋಳು ತೊಡೆ ಗಾತ್ರದ ಇದರ ಮೇಲೆ ಮೇಲಿನಿಂದ ತೂರಿ ಬಂದ ಬಿಸಿಲು ಬಿದ್ದು ಇದು ಹೊಳೆಯುತ್ತಲಿತ್ತು. ಅಲ್ಲಲ್ಲಿ ಅಗಲವಾದ ಎಲೆಗಳು ಕಚ್ಚಿಕೊಂಡಿದ್ದವು. ಬಳ್ಳಿ ಟಿಸಿಲು ಟಿಸಿಲಾಗಿ ಒಡೆದು ಕೊಂಡು ಆ ಪ್ರದೇಶದಲ್ಲೆಲ್ಲ ಹಬ್ಬಿಕೊಂಡಿತ್ತು. ಈ ಗಣಪೆಯ ಬೆಳವಣಿಗೆಯಿಂದಾಗಿ ಮರಗಳು ಬೆಂಡಾಗಿ ನಿಂತಿದ್ದವು. ಈ ಬಳ್ಳಿಯ ಅಪ್ಪುಗೆ ತಮಗೆ ಹಿತಕರವಾದದ್ದು ಅನ್ನುವಂತೆ ಮರಗಳು ಅದರ ತೆಕ್ಕೆಯಲ್ಲಿ ಮೈಮರೆತಿದ್ದವು.


‘ಓ  ಇದು ಅದ್ಭುತವಾದ ಗಣಪೆ... ನೀವು ಇದನ್ನ ನೋಡಿ ಇರಿಸಿಕೊಂಡಿರುವುದು ಹೇಳಿ’ ಎಂದು ನನ್ನ ಮೆಚ್ಚುಗೆಯನ್ನ ಅವರಿಗೆ ತಿಳಿಸಿದೆ. ‘ಈ ಕಾಡಿನಲ್ಲಿ ಇರುವ ಎಲ್ಲ ಗಣಪೆಗಳ ಪರಿಚಯವೂ ನನಗಿದೆ’ ಎಂದರವರು. ಹಾಗೆಯೇ ಮಾತನ್ನ ಮುಂದುವರೆಸಿದರು. ‘ಯಾವ ಗಣಪೆ ಎಲ್ಲಿ ಹುಟ್ಟುತ್ತದೆ, ಎಲ್ಲಿ ಹಬ್ಬಿಕೊಂಡಿದೆ, ಎಲ್ಲಿ ಕೊನೆಯನ್ನ ಕಂಡಿದೆ ಅನ್ನುವುದನ್ನ ಅರಿತುಕೊಂಡಿದ್ದೇನೆ’ ಎಂದು ನಕ್ಕರು.

‘ಗಣಪೆ ಬಳ್ಳಿಯ ಈ ಇತಿಹಾಸ ಕುತೂಹಲಕರವಾಗಿದೆ ಹಾಗಾದರೆ’ ಎಂದೆ. ‘ನಿಮಗೆ ಆಸಕ್ತಿ ಇದೆ ಅಂತ ಹೇಳುತ್ತಿದ್ದೇನೆ. ಈ ಗಣಪೆಯ ಮೂಲ ಎಲ್ಲಿದೆ ಗೊತ್ತೆ?’ 
‘ಎಲ್ಲಿ?’

‘ಇದು ಬಲಕುಂದಿ ಗಣಪೆ. ಬಲಕುಂದಿ ದೇವಾಲಯದ ಹಿಂಬದಿಯ ಕಾಡಿನಲ್ಲಿ ಇದರ ಮೂಲ ಇದೆ. ಅದು ಇಲ್ಲಿಂದ ಸುಮಾರು ಎಂಟು ಮೈಲಿ ಇದೆ. ಅಲ್ಲಿ ಸಪೂರ ಆಕಾರದಲ್ಲಿ ಹುಟ್ಟಿಕೊಂಡ ಗಣಪೆ ಅಲ್ಲಿಂದ ಬಲಕುಂದಿ ದೇವರ ವನದ ಮೂಲಕ ಹಬ್ಬುತ್ತ ಹಬ್ಬುತ್ತ ಬಸ್ತಿ ಮನೆ, ದೇವಧರೆ ಗುಡ್ಡ, ಕೆಮ್ಮಣ್ಣು ಗುಂಡಿ, ಬಾಳೇ ಬೈಲು ಮೊದಲಾದೆಡೆಗಳಲ್ಲಿ ಮರಗಳ ಮೇಲೆ ಹಬ್ಬಿ, ಹತ್ತಿ ಇಳಿದು, ಮತ್ತೆ ಭೀಮನ ಮಡುವಿನ ಬಳಿ ಮರಗಳ ಮೇಲೆ ಹರಡಿಕೊಂಡು ಸುಮಾರು ಏಳು ಮೈಲಿ ದೂರದ ಕಾರ್ತಿಕದ ಮನೆಯ ಬಳಿ ಇಂತಹದ್ದೇ ದೊಡ್ಡ ರಾಶಿಯಾಗಿ ಹರಡಿ, ಆನಂದಪುರದ ಕಡೆ ತನ್ನ ಕುಡಿಯನ್ನ ಚಾಚಿದೆ. ನಡುನಡುವೆ ಇದು ಅಲ್ಲಲ್ಲಿ ಕಾಡು ಕಿಚ್ಚಿಗೆ ಮೈ ಸುಟ್ಟುಕೊಂಡಿದೆ, ಇದರ ಟೊಂಗೆಗಳನ್ನ ಜನ ಕಡಿದಿದ್ದಾರೆ, ಇದರ ಒಂದು ಟಿಸಿಲನ್ನ ಬಿಡಿಸಿಕೊಂಡು ಹೋಗಿದ್ದಾರೆ. ಆದರೂ ಗಣಪೆ ಸತ್ತಿಲ್ಲ, ಸುರುಟಿಲ್ಲ, ಬಾಡಿಲ್ಲ, ಬತ್ತಿಲ್ಲ. ಅದೆಷ್ಟು ವರ್ಷಗಳಿಂದ ಈ ಗಣಪೆ ಇಲ್ಲಿದೆಯೋ ಕಂಡವರಿಲ್ಲ’. ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ಸಹಜವಾಗಿ, ಆದರೆ ಅಭಿಮಾನ ಪ್ರೀತಿ ಗೌರವದಿಂದ ಅವರು ಹೇಳತೊಡಗಿದರು.
ಅವರು ಹೇಳುವುದನ್ನ ನಾನು ಕೇಳುತ್ತ ನಿಂತೆ. ನಡುನಡುವೆ ಮರದ ಮೇಲೆ ಹಬ್ಬಿದ ಗಣಪೆಯನ್ನ ನೋಡುತ್ತಲೇ ಇದ್ದೆ. ಅವರು ಒಂದು ಸಂದರ್ಭದಲ್ಲಿ ಮಾತು ನಿಲ್ಲಿಸಿದಾಗ ನಾನು ಕೇಳಿದೆ, ‘ಹೌದು, ಇದರಿಂದ ನಿಮಗೆ ಆದ ಪ್ರಯೋಜನವಾದರೂ ಏನು?’.

‘ಪ್ರಯೋಜನದ ಪ್ರಶ್ನೆ ಇಲ್ಲಿ ಬರೋದಿಲ್ಲ. ಉಪಯೋಗ ಏನು, ಉಪಕಾರ ಏನು ಅಂದರೆ ಏನು ಉತ್ತರ ಕೊಡೋದು. ನಮ್ಮನ್ನೆಲ್ಲ ಕಾಪಾಡೋ ಈ ಕಾಡಿನಲ್ಲಿ ಕೂತು ನಾವು ಇಂತಹಾ ಪ್ರಶ್ನೆ ಕೇಳಲೇಬಾರದು. ಮುಖ್ಯವಾಗಿ ನಾನು ಕಂಡುಕೊಂಡಿರೂ ಸತ್ಯ ದೊಡ್ಡದು. ಈ ಗಣಪೆ ಈ ಮಲೆಕಾಡಿನಲ್ಲಿ ಸುಮಾರು ಇಪ್ಪತ್ತು ಚದುರ ಮೈಲಿ ಹಬ್ಬಿಕೊಂಡಿದೆಯಲ್ಲ, ಅದರ ಹಿಂದೆ ಒಂದು ಉದ್ದೇಶ ಇದೆ ಅನಿಸುತ್ತದೆ ನನಗೆ’.

ನಾನು ಅಲ್ಲಿಯೇ ಬಿದ್ದ ಒಂದು ಮರದ ಬೊಡ್ಡೆಯ ಮೇಲೆ ಕುಳಿತುಕೊಳ್ಳುತ್ತ, ‘ಕಾಡುಬಳ್ಳಿ ಮನಸಾ ಇಚ್ಛೆ ಬೆಳೆಯುವುದರಲ್ಲೂ ಒಂದು ಉದ್ದೇಶವೇ? ಒಂದು ಗುರಿಯೇ?’ ಎಂದು ಕೇಳಿದೆ.
‘ಇರಬಹುದೇ ಅನ್ನುವ ಅನುಮಾನ ನನಗೆ... ಇದು ಕಾಡನ್ನ ಮಾತ್ರ ಹಬ್ಬಿಕೊಂಡಿಲ್ಲ. ಇಲ್ಲಿಯ ಕೆಲವು ಕುಟುಂಬಗಳನ್ನೂ ಒಂದಾಗಿ ಹಿಡಿದಿದೆ. ಈ ವಿಷಯ ಈ ಕುಟುಂಬಗಳಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಇದು ಸತ್ಯ’.
‘ಇದು ಒಂದು ವಿಚಿತ್ರ ಅನಿಸುತ್ತದೆ ನನಗೆ’.

‘ನನಗೆ ಹಾಗೆ ಅನಿಸೋದಿಲ್ಲ. ಈಗ ಕೆಲವು ವರ್ಷಗಳಿಂದ ಈ ಗಣಪೇನ ಅಭ್ಯಾಸ ಮಾಡತಿರೋ ನಾನು ಕಂಡುಕೊಂಡ ಸತ್ಯ ಇದು. ಇದರ ಆಕಾರ–ಗಾತ್ರ, ಇದು ಬೆಳೆಯುವ ರೀತಿ, ಎಲ್ಲವನ್ನ ನೋಡಿದಾಗ ನನಗೆ ಹೀಗೆ ಇರಬಹುದೆ ಅನಿಸುತ್ತಿತ್ತು. ಯಾವಾಗ ನಾನು ಇದರ ಶೋಧನೆಗೆ ತೊಡಗಿದೆನೋ ಆಗ ನನ್ನ ಊಹೆ ಸರಿ ಅನಿಸುತ್ತಿದೆ’.
ನಾನು ಮಾತನಾಡಲಿಲ್ಲ. ಆದರೆ ಅದೇನು ಊಹೆ ಎಂಬಂತೆ ಅವರ ಮುಖ ನೋಡಿದೆ. ಅವರು ನನ್ನ ಮನಸ್ಸಿನಲ್ಲಿ ಇರುವುದನ್ನ ಗ್ರಹಿಸಿದ ಹಾಗೆ ಮಾತಿಗೆ ತೊಡಗಿದರು.


‘ಬಲಕುಂದಿ ದೇವಾಲಯದ ಹಿಂಬದಿ ಕಾಡಿನಲ್ಲಿ ಈ ಗಣಪೆ ಮೂಲ ಇದೆ ಅಂತ ಹೇಳಿದೆನಲ್ಲ. ಅಲ್ಲೊಂದು ಹಳೆಯ ಮನೆಯಿದೆ. ಮನೆ ಹಳೆಯದಲ್ಲ, ಅಲ್ಲಿರುವ ಜನ ಈ ಪ್ರದೇಶಕ್ಕೆ ಹಳಬರು. ಅವರನ್ನ ಇಲ್ಲಿಯವರು ಕರೆಯೋದೇ ಹಳಬರು ಅಂತ. ಹಳಬರ ಕೇಶವಯ್ಯ, ಹಳಬರ ಶ್ಯಾಮ, ಹಳಬರ ರಾಮಣ್ಣ ಅಂತ ಅವರ ಹೆಸರು... ಇವರೆಲ್ಲ ನಮ್ಮ ನಿಮ್ಮ ಹಾಗೇ 40, 45, 59 ವರ್ಷದವರು ಆದರೂ ಹಳಬರು! ಇನ್ನು ದೇವಧರೆ ಗುಡ್ಡ, ಬಾಳೇ ಬೈಲು ಅಂತ ಹೇಳಿದೆನಲ್ಲ– ಅದು ಅಲ್ಲಿಂದ ಸುಮಾರು ಮೂರು ಮೈಲಿ ದೂರ ಇರೋ ಪ್ರದೇಶ...

ಅಲ್ಲೂ ಇದೆ ಇದೇ ಗಣಪೆ. ಅಲ್ಲೊಂದು ಮನೆ ಇದೆ ಹಳೇಬೀಡವರ ಮನೆ ಅಂತ. ಬೀಡು ಅಂದರೆ ಮನೇನೆ... ಆದರೂ ಅಲ್ಲಿರೋದು ಹಳೇಬೀಡು ಶೇಷಗಿರಿರಾಯರ ಮನೆ. ಪಕ್ಕದಲ್ಲಿ ಹಳೇಬೀಡು ಸೋಮಶೇಖರ ರಾಯರ ಮನೆ. ಮುಂದೆ ಈ ಗಣಪೆ ಅಲ್ಲಿ ಮರಹತ್ತಿ ಮರದಾಟಿ, ಹಬ್ಬುತ್ತ ಹಬ್ಬುತ್ತ ಆನಂದಪುರದ ಕಡೆ ಹೊರಳುತ್ತಲ್ಲ ಅಲ್ಲಿ ಮೂರನೆಯದಾದ ಒಂದು ಮನೆಯಿದೆ. ಎಡಕುಂದೆ ಮನೆ ಅಂತ ಅದರ ಹೆಸರು. ಅಲ್ಲಿ ಎಡಕುಂದೆ ಮಂಜಪ್ಪ, ಎಡಕುಂದೆ ಸಣ್ಣಪ್ಪ, ಎಡಕುಂದೆ ಫಣಿಯಪ್ಪ ಅಂತ ಮೂರು ನಾಲ್ಕು ಕುಟುಂಬಗಳು ಇವೆ’.

‘ಅಲ್ಲ, ಹೀಗೆ ಎಲ್ಲ ಕಡೆ ಮಲೆಸೀಮೆನಲ್ಲಿ ಒಂದಲ್ಲಾ ಒಂದು ಕುಟುಂಬ ಇರೋದು ಸಹಜ ಮತ್ತು ಸಾಮಾನ್ಯ. ಅವನ್ನೆಲ್ಲ ನೀವು ಹೀಗೆ ಒಂದಕ್ಕೊಂದು ಗಂಟುಹಾಕುತ್ತ ಹೋದರೆ ಹೇಗೆ?’ ಎಂದು ನಾನು ತಕರಾರು ತೆಗೆದೆ. ನನ್ನ ತಕರಾರಿನಲ್ಲಿ ಸತ್ಯವಿದೆ ಅನ್ನುವುದು ನನಗೆ ಖಚಿತವಾಗಿತ್ತು. ಮಲೆನಾಡಿನಲ್ಲಿ ಸಾವಿರಾರು ವರ್ಷಗಳಿಂದ ಮನುಷ್ಯ ಬದುಕಿದ್ದಾನೆ. ಈ ಬದುಕಿನಲ್ಲಿ ಒಂದು ಹೊಂದಾಣಿಕೆ, ಕೊಟ್ಟು ಕೊಡುವಿಕೆ ಇತ್ಯಾದಿ ನಡೆದಿರಬಹುದು. ಇದನ್ನ ಯಾವುದೋ ಸಂಬಂಧಕ್ಕೆ ಗಂಟು ಹಾಕುವದು ಎಷ್ಟು ಸರಿ ಅನಿಸಿತು ನನಗೆ.
‘ನಾನೂ ಅದನ್ನೇ ಹೇಳುವುದು’ ಅಂದರು ಅವರು.
‘ನಾನು ಗಮನಿಸಿದ ಒಂದು ವಿಷಯವನ್ನ ಹೇಳಿ ಬಿಡತೇನೆ. ಹಳಬರ ಕೇಶವಯ್ಯನ ಮನೆಯಿಂದ ಒಂದು ಹೆಣ್ಣನ್ನ ಹಳೇಬೀಡು ಶೇಷಗಿರಿ ರಾಯರ ಮನೆಗೆ ತಂದಿದಾರೆ. ಹಾಗೇನೆ ಎಡಕುಂದೆ ಮಂಜಪ್ಪನ ಮನೆಯಿಂದ ಹಳೇಬೀಡು ಸೋಮಶೇಖರ ರಾಯರ ಮನೆಗೆ ಒಂದು ಹೆಣ್ಣನ್ನ ಕೊಟ್ಟಿದಾರೆ, ಮತ್ತೆ ಇದೇ ಮನೆಯಿಂದ ಹಳೇಬೀಡು ರಂಗಪ್ಪನ ಮನೆಗೆ ಒಂದು ಹೆಣನ್ನ ಕೊಟ್ಟಿದಾರೆ.

ಈ ಕೊಟ್ಟು ತರೋ ಸಂಬಂಧ ಈ ಮನೆತನಗಳಲ್ಲಿ ಬಹಳ ತಲೆಮಾರಿನಿಂದ ನಡೆದುಕೊಂಡು ಬಂದಿರೋದು ನನ್ನ ಗಮನಕ್ಕೆ ಬಂದಿದೆ. ಜೊತೆಗೆ ಈ ಮನೆತನಗಳ ನಡುವೆ ಒಂದು ಒಳ್ಳೆಯ ಸಂಬಂಧ ಕೂಡ ಇದೆ. ಒಂದೇ ಜಾತಿಯ ಮರ ಈ ಮಲೆನಾಡಿನಲ್ಲಿ ಎಲ್ಲ ಕಡೆ ನೂರಾರು ಇವೆ. ಇದರಲ್ಲಿ ಅಚ್ಚರಿ ಇಲ್ಲ. ಆದರೆ ಗಣಪೆ ಬಳ್ಳಿ ಹಬ್ಬಿರೋ ಕಡೆ... ಆ ಬಳ್ಳಿ ಜೊತೇಲಿ ಈ ಸಂಬಂಧದ ಅಚ್ಚರಿ ಕೂಡ ಎಲ್ಲ ಕಡೆ ನಮ್ಮ ಕಣ್ಣಿಗೆ ಬೀಳುತ್ತೆ... ಈ ಕೌತುಕ ಏನಿರಬಹುದು ಯೋಚನೆ ಮಾಡಿ’ ಎಂದು ಮಾತು ಮುಗಿಸಿದರು ಅವರು.
‘ಅಲ್ಲ ನಿಮ್ಮ ಈ ಮಲೆನಾಡು ನಿಮಗೂ ಒಂದು ಕೌತುಕವಾಗಿದೆ ಅಂತೀರಾ?’ – ಎಂದು ಒಂದು ಘಾಸಿಗೊಳಿಸುವ ಪ್ರಶ್ನೆ ಕೇಳಿದೆ. ‘ಹೌದು ಇದು ಕೌತುಕವೇ... ಈ ಮಲೆನಾಡಿನಲ್ಲಿರೋ ಅಚ್ಚರಿಗಳಲ್ಲಿ ಒಂದು ಕಾಸಿನಷ್ಟನ್ನೂ ನಾವು ಅರ್ಥ ಮಾಡಿಕೊಂಡಿಲ್ಲ. ಇಲ್ಲಿ ಮರ, ಗಿಡ, ಪೊದೆ, ಕುರುಚಲು, ಹುಲ್ಲು, ಹಕ್ಕಿ ಪಕ್ಕಿ, ಜೀವಜಂತು, ಹಳ್ಳ, ನೀರು– ಹೀಗೆ ಯಾವುದೆಲ್ಲ ಇದೆ, ಅದರ ಮೂಲವೂ ನಮ್ಮ ಕೈಗೆ ಸಿಕ್ಕಿಲ್ಲ. ಈ ಕಾಡನ್ನ ಕಡಿದು ನಾಶ ಮಾಡೋದನ್ನ ನಾವು ಕಲಿತಿದ್ದೇವೆ. ಆದರೆ ಇದನ್ನ ಅರ್ಥ ಮಾಡಿಕೊಳ್ಳೋ ಯೋಗ್ಯತೆ ನಮಗೆ ಬಂದಿಲ್ಲ ಅನ್ನೋದಕ್ಕೆ ಈ ಗಣಪೆ ಒಂದು ಉದಾಹರಣೆ’ ಎಂದರು ಅವರು.

ಅದೇ ಗಣಪೆಯ ಕೆಳಗೆ ಇನ್ನೂ ತುಸು ಹೊತ್ತು ಕುಳಿತು ನಾವು ಅಲ್ಲಿಂದ ಹೊರಟೆವು. ಕೊನೆಯ ಬಾರಿ ಅನ್ನುವ ಹಾಗೆ ನಾನು ತಲೆ ಎತ್ತಿ ಗಣಪೆಯನ್ನ ನೋಡಿದಾಗ ಅದು ಎಂದಿನಂತೆ ಬಿಸಿಲಿಗೆ ಮೈಯೊಡ್ಡಿ ಮರಗಳ ಮೇಲೆ ಪವಡಿಸಿಕೊಂಡಿತ್ತು. ಅದರ ದಷ್ಟಪುಷ್ಟ ಬಾಹುಗಳು ಅಕ್ಕಪಕ್ಕದ ಮರಗಳನ್ನ ತಬ್ಬಿ ಹಿಡಿದಿದ್ದವು.
ನನ್ನ ಸ್ನೇಹಿತರು ಆಡಿದ, ತೋರಿಸಿದ ಎಲ್ಲವನ್ನ ತಲೆಯಲ್ಲಿ ತುಂಬಿಕೊಂಡು ನಾನು ನನ್ನ ಸ್ನೇಹಿತರನ್ನ ಬೀಳ್ಕೊಟ್ಟು ಪಟ್ಟಣದತ್ತ ಹೆಜ್ಜೆ ಇರಿಸಿದೆ.

Saturday, 11 June 2016

United as friends of nature, and each other

Experiencing a carefree life
“KARKALA! KARKALA last stop!” a voice passes by and wakes me up. With huge back pack on my shoulders, I climb down the bus just to wait for another bus to Hebri.  Travelling for nearly an hour through a green landscapes we reach Hebri. This is precisely where I looked and smiled at every other person in the team and took the count through my eyes (I realize that it was a team of 7) while we climbed up rickshaws to reach the unknown destination. 

Even on landing at Karkala we were new to each other           
The board from a distance said “SITA NADI HERPETO CAMP” as we approached it. Yes. That was our camp site.  We entered the gate and passed through the thickly wooded forest upon a bumpy pathway made of stone slabs Just a glance would define the ambience of an evergreen forest. The trees stood tall, green and fresh. There were plenty calls of plenty of birds, crickets and squirrels engaged in their daily chores creating a brew of musical notes. Not to forget, they were not just squirrels, but Malabar giant squirrels and the insects were cicadas’.
The beautiful campsite

After unloading our luggage, we were asked to stay in the tents. Tents! I never knew that they could be so sophisticated- with an attached bathroom, beds complimented with a pillow and a blanket each. After settling down peacefully for a few minutes with two friends, we took a walk to tour the campsite. Just as we walked down, finding and clicking pictures of some amazingly colored fungi, we found heaven! Yes it was the bank of Sita nadi.  River Sita was silent, elegant and yet vivacious. She had nourished the life around her profusely. Undoubtedly she attracted all but to me she was not just a mere attraction. It was something beyond comprehension.  The schools of fish in her became my friends (though they rigidly denied initially) in no time. Tickled our legs and gave the best Pedicure we could have ever had.

After a big fat sensible yet prolonged introductory session, we decided to trek within the campsite.  And we start. Eyes keen to find something or the other but the mind was preoccupied with the presence of the trekker enemies, the leaches. My first experience with them horrified me to the fullest.
A clump of these mushrooms grown near the kitchen
 became a everyday curiosity
Ask me why!! It first attacked my mouth!!!!!!!! And then on I got greatly used to them. Just as we began, we found a little but wonderful creature, a snake. What a beginning to our search expedition! As we followed the stream, the river offered a safe place for us to spend some time. We played our hearts out. Got wet and walked back once it started to drizzle. The night sessions were precisely serious ones. Sensitive discussions, Manu Sir’s inspiring talks and we sat back to watch some events in Sir David Attenborough’s life…a talk show recorded when he had just turned ninety last fortnight.


Exploring we got exhausted
Day 2 stared off stupendously on the banks of the River Sita, calm, clear and serene. And the plan for the day was to trek to the beautiful peak of Barkana during the late morning. This trek was a short one but full of surprises. The variety of flora took our breaths away. And the magnanimous peaks flushed with green tall trees looked magnificent. The valleys of Agumbe are evidently a home for umpteen numbers of species. Manu sir, meanwhile, made sure that he educated us through out. He kept on answering all our doubts and queries. He is now my newly found encyclopedia.  And the best part of the trek was to find something really tasty, a Jack fruit. And the most satisfying part was to find a Lion tailed Macaque, endemic to Western Ghats hanging on to the trees far away. Yes we did find one. Back to the camp site, and we rested for a couple of hours. Then there’s a knock on the door declaring the tea time. Tea with bajjis made of chilies, the tastiest I have ever had, brought us back to life after a tiring day. Sitting back and relaxing we watched amazingly educative documentaries. The day enthralled us as we discussed the life cycle of a marine turtle that perambulates the globe criss-crossing the mighty oceans all alone. Power cuts became an issue but we ended up eating the Jackfruit meanwhile.
Where the river meets the sea
I had never ever enjoyed the darkness of the night 
And now the best part of the longest day. The most awaited night trek. Following the stream of one of the tributaries of River sita, we ended up finding one of the weirdest water creatures; a Whip-Scorpion. I literally struggled to move forward wading along the knee deep water of the stream, because of my rubber chappals. Many times the slippers got stuck in the water and refused to come up along with my feet. Manu sir managed to catch a huge Frog. We took a lot of pictures with that jumping jack and finally ended our night trek. It was already past midnight, drenched in sweat, we called it a day.

Day 3. All our plans went in vain because of the nonstop rain through the early hours. Never mind, the day had lots for us in its pockets. Breakfast with long debates in order to decide the place to visit resulted in a unanimous decision to  trek to the beautiful Kudalutirtha falls. We had to travel a rough road for an hour and a half to get the trekking path.  

A tree frog amidst the leaf litter 

We crammed upon each other in the most uncomfortable positions in an OMNI. We liberally stopped the vehicle and got down for some nature lessons. Since the place was was taken over by the Wildlife division, many amenities were being made for the tourists. The major investment was going on for the cement road which was being built yet. The slopes were cut and the gradient reduced and the curves were all being straightened. Probably this period was the worst for the forest soil and the wildlife. There were many families of workers camping in the neighboring fields who came from the northern district of Karnataka. 

We spotted a long slow animal on the road. It was a Cat Snake. And immediately we got out having a glimpse of it; and before we realized what’s going on...Manu Sir had turned a Snake Charmer!  Semi poisonous by nature this tree snake found its comfort zone with us in no time. Allowing it back to get away, we moved on to reach the starting point of our trek.

This trek was fun. While climbing up on small slippery rocks, occasional slipping and falling was indispensible. 
The author with her precious find
As time passed we had to walk slow and take long gasps. And the leaches never left us alone.  The feeble sound of the gushing water got intense as we reached the destination. And look what’s waiting for you!  A Slender, majestic and the most beautiful water was now thick and forceful at the onset of the monsoon. The Kudalutirtha! 
I know to make a frog comfortable in my hand
Getting drenched, splashing water on each other, learning how to float became obvious events. The water was biting cold and as the sun rose up we felt better. By the time we came out of the water the sun was high and warm enough to dry us neat in no time.

Trekking back took no time at all. Lunch was waiting for us at the campsite and we wasted no time.  After a quick nap, we gathered back to watch documentaries. This time it was heart wrenching. We see no animals; we learn nothing about animals but about humans. THE HUMAN, a documentary managed to pull our eyes away to the different dimensions of a society.  Yet another day comes to an end on a serious note.
The memorable journey is not only about where we travel.......

Day 4….the last day. The feeling of it irritated me to the maximum. I knew I was going to miss it all; Sita nadi, my tent, my new friends, my tea with bajjis, my birds and fish. And my obsession, without which my day never came to an end, the world’s best buttermilk the cook constantly churned out along with every single meal. Everything. With a heavy heart all of us got ready to say a good bye to the campsite.  After the last breakfast ,  the time had arrived .  We had to leave. Wait! This is not the end. We left the campsite but reached the town by the sea side, much appreciated for its beech. As we moved north of the township of Kundapura, Fresh water flowing westwards down the Ghats mated with the Sea. It was an unforgettable site. Nature surprised us every second. What a beauty! In some places there were orderly pools of still water in squares. There were several machines slowly giving movement to the water. I heard that it was Prawn culture. This is now a multi billion dollar business now.
A day out in the sea was the most enthralling experience
After a playing till exhaustion in the salty water we had to leave to catch our buses some forty kilometers away. Half of us had to travel back to Mysore and the rest to Bangalore on different night buses. By the following morning we were back at home sipping hot coffee. All of us are now in different places, with different people and in a different atmosphere. Yet, we all are united by the love for Nature- united forever by the divine beauty, united as friends of nature and each other.

- Nikitha Jagadish
  Student in Engineering,
   Mysore



Friday, 10 June 2016

A Camp in the woods to rejuvenate young minds

Away from the textbooks and routine assignments
After a hectic year of studying in a professional course, the heart yearns for a change, a getaway from everything – and I knew that this camp would provide that and much more. After much convincing and extensive negotiation with Manu sir and friends, we set out on the 3rd of June to the picturesque Western Ghats where we wished to trace the path taken by the river Sita. 
The author, out of her white coat- in an attire for June 5th
On reaching Karkala the next morning, we left for Hebri changing buses after which we took an auto rickshaw to our destination, the Sita Nadi Herpeto Camp. This base camp is a designated sanctuary for reptiles and frogs. The Malabar giant squirrel, Lion tailed macaque and the flying squirrels which are endemic to the Western Ghats also thrive here. Located deep inside the Ghats, it seems to be a place not of this world, something all of us sought. Like any typical rain-forest, it’s a home for a rich and diverse flora and fauna. Some of my friends being first-timers instantly fell in love with the place (I had already through previous encounters).
Deep in the jungle, in search of oneself
After freshening up, we had an ice-breaking session wherein we introduced ourselves formally and spoke about our experiences about what made us who we are now. It was interesting to hear others’ stories, which in many cases changed my perception of the person.

In the evening, we watched the documentary ‘Surviving Progress’ by Mathieu Roy and Harold Crooks.

The 5th of June began at 6:00 in the morning with a bird-watch. We could hear the transition from the nocturnal croaking of frogs to the trilling of birds as day broke. The Grey-Headed Fishing Eagle and Stork-Billed Kingfisher were spotted. Having had our breakfast afterwards we trekked to Barkana Viewpoint. It was a breath taking view. On the way back, we were lucky to spot family of Lion Tailed Macaque. It is an endemic species to Western Ghats and an endangered primate thus making it a rare chance to come face to face. Its colouring and very silent nature makes it very hard to spot in the thick foliage of the tropical rain forests. Having spotted it finally made World Environment Day meaningful.
At the foot of a forest bi-centennial
In the evening, we were confined to the pergola since it was raining. We watched a couple of documentaries, one of which being ‘Voyage of the Lonely Turtle’ which informed us about the life of a Loggerhead Turtle. We learnt that it spends half of it life alone in the Pacific and then travels towards the beaches of the Indian Ocean to produce its off springs. The film also focused on various other marine creatures it passed by. It was surprising to know that the turtle could actually remember and almost exactly retrace the footsteps taken by its mother. We also watched another documentary called ‘Human’ which was interrupted by frequent power cuts. The film began with a very touching experience of a person, where he described what love is. Through its course, the film featured various people answering simplest questions that were hardest to answer. Both the films gave us an insight about various aspects of our lives.
Some find in the night expedition

After this, we went out on a night trek in the water, along a tributary of Sitanadi. Trekking in the dark was exciting. As we were wading along the stream in the chill waters we explored for fish, frogs and snakes. The easiest to find were the frogs.When the water got deep we had to get on to the bank and by pass the stream by a few yards and it was all bushy and ground was wet and slippery. At about one in the morning we sat at the source of the tributary and discussed about the formation of the soil, the continental drift and its evidences.
Narendra with his tree frog
The team at Kudalu falls
The next day’s bird watch session and a long trek to Onake Obbe falls were called off due to heavy rains that persisted all night through. However, once the clouds opened up we had a shorter trek to Kudlu Teertha. The view was blissful!We enjoyed playing in the water for a few hours happily. During our journey, we found a Cat Snake crossing the road. We caught it and examined it for a while and took a couple of photographs before we resumed our ride.
A cat snake on the road

In the evening, we watched another documentary on Sir David Attenborough by the BBC. It was an interview with the legendary naturalist and broadcaster and his companions on account of his 90th birthday. After a tiring day, we packed up our stuff to leave for Kundapura the next morning.
A bi-colored frog in hand
On the 7th of June, we began our journey towards our destination after breakfast at 10 in the morning. Kundapura, a coastal area is located 52kms away from the base camp. The blue expanse of sea with fierce waves and the cloudy sky were practically announcing the setting in of monsoon. We played at the beach and in the waters for a long time after lunch.

With heavy hearts, tired bodies and stronger minds we then prepared to leave. We waved each other goodbyes after having our final meal together and left for our homes.




After an exhausting session in the rough sea
-Text by Chitkala Sharma, 
           Graduating in Speech and Hearing