Sunday, 30 August 2015

ಗದ್ದಿಗೆಯಲ್ಲಿ ಅರಳಿದ ಹೂವು!

ಸುವರ್ಣ ಗೆಡ್ಡೆ ಹೂ ಅರಳುವ ಮುನ್ನ

ಕಳೆದಬಾರಿ ಮೈಸೂರಿನ ಬಳಿ ಇರುವ ಗದ್ದಿಗೆಯಲ್ಲಿರುವ ಗೆಳೆಯರ ತೋಟವನ್ನು ನೋಡಲು ಹೋದಾಗ ಅನತಿ ದೂರದಿಂದಲೇ ಅದೆಂತದೋ ವಾಸನೆ ಬರಲಾರಂಭಿಸಿತ್ತು. ಯಾವುದೋ ಪ್ರಾಣಿ ಹತ್ತಿರದಲ್ಲೇ ಸತ್ತು ಬಿದ್ದಿರಬೇಕೆಂಬ ನಮ್ಮ ತರ್ಕ ಸುಳ್ಳಾಯಿತು. ತೋಟವನ್ನು ಪ್ರವೇಶಿಸುತ್ತಿದ್ದಂತೆಯೇ ಸ್ವಲ್ಪ ದೊಡ್ಡದೇ ಆದ ಕಂದುಗೆಂಪು ಮಿಶ್ರಿತ ಹೂವೊಂದು ಕಾಣಿಸಿತು. ಹತ್ತಿರ ಹೋದಂತೆಯೂ ಕೊಳೆತ ಮಾಂಸದ ದುರ್ವಾಸನೆ ಹೆಚ್ಚಾಯಿತು. ಗಮನಿಸಿದರೆ ಹೂವಿನಮೇಲೆ ಕೀಟಗಳು ಪರಾಗ ಸ್ಪರ್ಶ ಕ್ರಿಯೆಯಲ್ಲಿ ತೊಡಗಿವೆ! ಕೆಟ್ಟ ವಾಸನೆಯ ಈ ಹೂವು ಯಾವುದು ಎಂದು ವಿಚಾರಿಸಿದಾಗ ತಿಳಿದದ್ದು, ಅದು ಸುವರ್ಣ ಗೆಡ್ಡೆ ಹೂವೆಂದು. ಗಿಡವೆಲ್ಲಿ ಎಂದು ನೋಡಿದಾಗ ಸ್ವಲ್ಪ ಹತ್ತಿರದಲ್ಲೇ ಇದ್ದ ಪುಟ್ಟ ಮರದಂತೆ ಎಲೆ ಪಸರಿಸಿದ್ದ ಅದರ ಸಸ್ಯ ಕಾಣಬಂತು. ಆಗ ನೆನಪಾಗಿದ್ದು ನನ್ನ ಮಗಳು.
ಸುವರ್ಣ ಗೆಡ್ಡೆ ಸಸ್ಯ

ಎಲಿಫೆಂಟ್ ಫುಟ್ ಯ್ಯಾಮ್, ವೈಟ್ ಸ್ಪಾಟ್ ಜೈಂಟ್ ಏರಮ್, ಗೋಲ್ಡನ್ ಯ್ಯಾಮ್ ಎಂದೆಲ್ಲ ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಸುವರ್ಣ ಗೆಡ್ಡೆಯನ್ನು 'ಅಮೋರ್‌ಫೋಫಲ್ಲುಸ್ ಪೈಯಾನಿಫಲಿಯಸ್' (Amorphophallus paeoniifolius) ಎಂಬ ಸಸ್ಯಶಾಸ್ತ್ರೀಯ ನಾಮಧೇಯದಿಂದ ಕರೆಯಲಾಗುತ್ತದೆ. ಏಕದಳ ಸಸ್ಯಗಳ ವರ್ಗಕ್ಕೆ ಸೇರಿದ ಗೆಡ್ಡೆಯು ಎರೇಸೀ (Araceae ) ಕುಟುಂಬಕ್ಕೆ ಸೇರಿದೆ. ದಕ್ಷಿಣ ಆಫ್ರಿಕಾ, ದಕ್ಷಿಣ ಹಾಗೂ ಆಗ್ನೇಯ ಏಶಿಯಾ ಹಾಗೂ ಶಾಂತಸಾಗರದ ದ್ವೀಪಗಳಲ್ಲಿ ಬೆಳೆಸಲ್ಪಡುವ ಗೆಡ್ಡೆಯು ಭಾರತ, ಫಿಲಿಪೀನ್ಸ್, ಮಲೇಶಿಯಾ,ಇಂಡೊನೇಷಿಯ, ಶ್ರೀಲಂಕಾ ಮೊದಲಾದ ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತಿದೆ.  ಶಿಲೀಂಧ್ರ ಹಾಗೂ ಲಾಡಿಹುಳುಗಳ ರೋಗಗಳನ್ನು ಹೊರತುಪಡಿಸಿದರೆ ಹೆಚ್ಚಿನ ರೋಗಬಾಧೆ ಇರುವುದಿಲ್ಲ. ತೇವದಿಂದ ಕೂಡಿದ ಉಷ್ಣಪ್ರದೇಶದ ಬೆಳೆ ಇದಾಗಿದ್ದು ಸುಲಭವಾಗಿ ನಮ್ಮ ಮನೆಗಳ ಕೈತೋಟಗಳಲ್ಲೂ ಬೆಳೆಸಬಹುದಾಗಿದೆ. ಭೂಮಿಯೊಳಗೆ ಹುದುಗಿ ಬೆಳೆವ ಗೆಡ್ಡೆಯು ಬಹುವಾರ್ಷಿಕ ಸಸ್ಯ. ಕಾಂಡದಂತೆ ಕಾಣುವ ತಿಳಿಹಸಿರು- ಬಿಳಿ ಮಚ್ಚೆಗಳಿಂದ ಕೂಡಿದ ಎಲೆಯ ತೊಟ್ಟು ಸಾಕಷ್ಟು ದಪ್ಪವಾಗಿರುತ್ತದೆ. ಪುಟ್ಟಮರದಂತೆ ಕಾಣುವ ಎಲೆಯು ೩ ಕವಲೊಡೆದು ಮತ್ತೆ ಕವಲಾಗಿ ಚೆದುರಿ ಸೊಂಪಾಗಿ ಬೆಳೆಯುತ್ತದೆ. ವಾರ್ಷಿಕವಾಗಿ ಹೂ ತಳೆಯುವುದಾದರೂ ಪ್ರತಿವರ್ಷವೂ ಹೂವರಳಿಸಬೇಕೆಂಬ ನಿಯಮವೇನಿಲ್ಲ. ತಾಳಗುಚ್ಛದ ಹೊದಿಕೆಯುಳ್ಳ ಹೂವು ತಿಳಿಗೆಂಪು ಬಿಳಿಯ ಲಂಗ ಹಾಕಿರುವಂತೆ ಕಾಣುತ್ತದೆ. ಮಧ್ಯೆ ಗಾಢ ಕೆಂಪಿನ ನೆರಿಗೆಯುಳ್ಳ ಗಾಳಿಹೋಗುತ್ತಿರುವ ಬಲೂನಿನಂತೆ ಕಾಣುವ ಹೂಗುಚ್ಛ ಕಂಡುಬರುತ್ತದೆ. ಈ ಹೂವು ಸಾಕಷ್ಟು ದೊಡ್ಡದು, ೨ ರಿಂದ ೩ ಅಡಿ ವ್ಯಾಸವುಳ್ಳದ್ದು. ವಿಶೇಷವೆಂದರೆ ಸುಮಾರು ೫ ದಿನಗಳ ಕಾಲ ಬಾಡದೆ ಉಳಿಯುವ ಈ ಹೂವು ಅರಳಿದ ಮೊದಲ ಕೆಲವು ಗಂಟೆಗಳ ಕಾಲ ಕೊಳೆತ ಮಾಂಸದ ದುರ್ವಾಸನೆ ಹೊರಡಿಸುತ್ತದೆ. ಈ ಗಂಧವು ಪರಾಗಸ್ಪರ್ಶಕ್ಕೆ ಮಾಂಸಾಹಾರೀ ಕೀಟಗಳನ್ನು ಹೂವಿನೆಡೆಗೆ ಸೆಳೆಯುವ ಸಾಧನ.
ಅರಳಿದ ಹೂ

ವರ್ಷಗಳ ಹಿಂದಿನ ಮಾತು. ತರಕಾರಿ ತರಲೆಂದು ಮಗಳ ಜೊತೆ ಹೋದಾಗ " ಏನಮ್ಮಾ ಇದು? ಸಗಣಿ ಥರ ಇದೆಯಲ್ಲ?" ಎಂದು ಕೇಳಿದ್ದಳು. "ಅದು ಸಗಣಿ ಅಲ್ಲ ಪುಟ್ಟಿ, ಅದೊಂದು ತರಕಾರಿ" ಎಂದಾಗ, " ಕೆಮ್ಮಣ್ಣು ಮೆತ್ತಿದ್ದಾರೇನಮ್ಮ?" ಎಂದು ಕಣ್ಣರಳಿಸಿ ಕೇಳಿದ ಮಗಳಿಗಾಗಿ ಅದೇ ತರಕಾರಿಯನ್ನು ಕೊಂಡು ಮನೆಗೆ ತೆರಳಿದ್ದೆ. ನಲ್ಲಿ ನೀರಿನ ಕೆಳಗೆ ಹಿಡಿದು ತಿಕ್ಕಿ, ಉಜ್ಜಿ ತೊಳೆದದ್ದೇ ಅದರ ಸಿಪ್ಪೆ ಇರುವುದೇ ಹಾಗೆಂದು ಮಗಳಿಗೆ ಮನವರಿಕೆಯಾಗಿತ್ತು. ಹೆಚ್ಚಲು ತೊಡಗಿದ ನನಗೆ ಕೈ ಕೆರೆತ ಶುರುವಾದಾಗ ಮಗಳೆಂದಳು, " ಹೋಗಮ್ಮಾ, ಎಂಥದ್ದು ಇದು? ನೋಡೋಕು ಕಜ್ಜಿ, ಹೆಚ್ಚಿದ್ರು ಕಜ್ಜಿ, ಇನ್ನು ತಿಂದರೆ ಏನಾಗುತ್ತೋ!?" ಇಷ್ಟೆಲ್ಲ ಹೇಳಿಸಿಕೊಂಡ ತರಕಾರಿಯೇ ಸುವರ್ಣ ಗೆಡ್ಡೆ. ಇತ್ತೀಚೆಗೆ ಗದ್ದಿಗೆಯಲ್ಲಿರುವ ಗೆಳೆಯರ ತೋಟದಲ್ಲಿ ಅರಳಿದ ಹೂವನ್ನು ನೋಡಿ , ಹೀಗೆಲ್ಲಾ ಇದ್ದರೂ ಇದನ್ನು ಆಹಾರದಲ್ಲಿ ಉಪಯೋಗಿಸಲು  ಕಾರಣವೇನು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು.
ಸುವರ್ಣ ಗೆಡ್ಡೆ

ಸುವರ್ಣ ಗೆಡ್ಡೆಯೊಂದು ಪೋಷಕಾಂಶಗಳ ಆಗರ. ಶರ್ಕರ ಪಿಷ್ಟಗಳು, ಪ್ರೋಟೀನ್, ಕೊಬ್ಬಿನಂಶ ಇರುವುದಲ್ಲದೆ ಪೊಟಾಷಿಯಂ, ಕ್ಯಾಲ್ಶಿಯಮ್, ರಂಜಕ, ಕಬ್ಬಿಣ ಮೊದಲಾದ ಖನಿಜಾಂಶಗಳು ಹೇರಳವಾಗಿವೆ. ನಾರಿನಂಶವೂ ಸೇರಿದ್ದು ಜೀರ್ಣಿಸಲು ಸಹಕಾರಿಯಾಗಿದೆ. ಹೋಳುಗಳಾಗಿ ಹೆಚ್ಚಿದಾಗ ಕೈ ಕೆರೆತ, ತಿಂದಾಗ ಬಾಯಿ, ಗಂಟಲಲ್ಲಿ ಕೆರೆತ ಉಂಟಾಗಬಹುದು. ಅದಕ್ಕೆ ಕಾರಣ ಅದರಲ್ಲಿರುವ ಕ್ಯಾಲ್ಶಿಯಮ್ ಆಕ್ಸಲೆಟ್ನ ಹರಳುಗಳು. ಉಪಯೋಗಿಸುವ ಮೊದಲು ಚೆನ್ನಾಗಿ ಶುದ್ಧ ನೀರಿನಿಂದ ತೊಳೆದು, ಅರಿಶಿನದ ನೀರಿನಲ್ಲಿ ನೆನೆಸಿಟ್ಟು ತೊಳೆದಲ್ಲಿ ತೊಂದರೆಯನ್ನು ನಿವಾರಿಸಬಹುದು. ಫ್ಲವಾನಾಯ್ಡ್ಗಳು (flavonoids),ಟ್ಯಾನಿನ್ಗಳು (tannins), ಪ್ರೋಟೀನಿನಂತಹ ಅಂಶಗಳನ್ನು ಹೊಂದಿರುವುದರಿಂದ ಸುವರ್ಣ ಗೆಡ್ಡೆಗೆ ಅನೇಕ ಔಷಧೀಯ ಗುಣಗಳಿವೆ. ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲಿ ಸುವರ್ಣ ಗೆಡ್ಡೆಯನ್ನು ಮೊಳೆರೋಗ, ಕಿಬ್ಬೊಟ್ಟೆಯ ತೊಂದರೆಗಳು, ದೇಹದಲ್ಲಿನ ಗೆಡ್ಡೆಗಳು, ಆಸ್ತಮ, ಸಂಧಿವಾತ, ಉರಿಯೂತ, ಮಲಬದ್ಧತೆ ಮುಂತಾದ ರೋಗಗಳ ನಿವಾರಣೆಯಲ್ಲಿ, ನೋವು ನಿವಾರಕವಾಗಿ, ಸೆಳವು ನಿರೋಧಕವಾಗಿ, ಲಾಡಿಹುಳಗಳ ನಿವಾರಣೆಗಾಗಿ, ಖಿನ್ನತೆಯ ನಿವಾರಣೆಯಲ್ಲಿ, ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಕುರಿತು ಸಂಶೋಧನೆಗಳು ನಡೆಯುತ್ತಲೇ ಇವೆ.
ಕೂಟು

ಹೀಗೆಲ್ಲ ಇರುವ ಸುವರ್ಣಗೆಡ್ಡೆಯನ್ನು ವಿವಿಧ ರೀತಿಯ ಅಡುಗೆ ಪದಾರ್ಥಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಪಲ್ಯ, ಗೊಜ್ಜು, ಸಾಂಬಾರ್, ಚಿಪ್ಸ್ ನಂತಹ ರುಚಿಕರ ತಿನಿಸುಗಳನ್ನು ತಯಾರಿಸಲಾಗುತ್ತದೆ. ಸುವರ್ಣಗೆಡ್ಡೆಯನ್ನು ಬಳಸಿ ಮಾಡುವ ಪಾಕವಿಧಾನವೊಂದು ಹೀಗಿದೆ.

ಸುವರ್ಣಗೆಡ್ಡೆಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ೨ ಬಟ್ಟಲುಗಳಷ್ಟು ಸಣ್ಣ ಹೋಳುಗಳಾಗಿ ಮಾಡಿ ಒಂದು ಪಾತ್ರೆಯಲ್ಲಿ ೧ ಬಟ್ಟಲು ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ೧ ಚಮಚ ಅರಿಶಿನ ಹಾಕಿ ಬೇಯಲು ಇಡಬೇಕು. ಅರ್ಧ ಬೆಂದ ಹೋಳುಗಳಿಗೆ ಹುಣಸೆರಸ ಸೇರಿಸಿ ಮೆತ್ತಗಾಗುವವರೆಗೂ ಚೆನ್ನಾಗಿ ಬೇಯಿಸಬೇಕು. ಒಂದು ಚಮಚ ಕೊತ್ತಂಬರಿ ಬೀಜ, ೨ ಚಮಚ ಕಡಲೆ ಬೇಳೆ, ೪ ಬ್ಯಾಡಗಿ ಮೆಣಸಿನ ಕಾಯಿ, ೧ ಚಮಚ ಅಕ್ಕಿ - ಇವುಗಳ ಮಿಶ್ರಣವನ್ನು ಹೊಂಬಣ್ಣ ಬರುವವರೆಗೂ ಹುರಿದು, ತೆಂಗಿನ ತುರಿ ಸೇರಿಸಿ ಬೆಚ್ಚಗೆ ಮಾಡಿ ನಯವಾಗಿ ತಿರುವಿಕೊಂಡು, ಬೆಂದ ಹೋಳುಗಳಿಗೆ ಸೇರಿಸಬೇಕು. ಮೊದಲೇ ಬೇಯಿಸಿಟ್ಟುಕೊಂಡ ಅರ್ಧ ಬಟ್ಟಲಿನಷ್ಟು ತೊಗರಿಬೇಳೆಯನ್ನು, ಅರ್ಧ ಬಟ್ಟಲು ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಸಾಸಿವೆ, ಇಂಗು, ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಹಾಕಿದಲ್ಲಿ ಬಿಸಿ ಬಿಸಿ ರುಚಿಯಾದ ಸುವರ್ಣಗೆಡ್ಡೆಯ ಕೂಟು ಸವಿಯಲು ತಯಾರು. ತಿನ್ನುವ ಮೊದಲು ಅದರ ಗುಣಗಳನ್ನು ನೆನಪಿಟ್ಟುಕೊಳ್ಳಿ!

Tuesday, 25 August 2015

Black buck Census helps youth realize the dynamics of grassland ecology

Pictures by: B S Guruprasad

                       Iconic picture for  the Black buck Count  
Black buck is one of the species of wildlife that is thriving well outside protected areas. The mythical and religious significance it has in many cultures across the country has enabled the species pull on into this century. Historic accounts of the scale of hunting of this species left behind by the Moguls and the British hunters are astonishing. Soon after independence hunting was totally banned and many reserves were created to preserve our wildlife.  To begin with we had a habitat approach and focused upon the conservation of mega fauna. Reserves with exclusive protection were set up for them and believed that all other species under its domain would survive. Hoverer, certain species simply didn’t find their home here or they even radiated out of the protected areas. But widely distributed species like Black buck remained outside the parks in small pockets struggling against odds of being in non protected areas.

A hind of Female bucks  
All through our childhood Ranebennur was the only known black buck habitat in Karnataka. Probably lack of wildlife enthusiasts and field studies had not revealed their distributions. In the early nineties amateur naturalists of Tumkur who worked under the banner of Wildlife Aware Nature Club reported a hind of these antelopes in the grazing lands of Mydanahalli. Their further field studies under taken by the then Deputy conservator of Forests UV Singh and Ameen Ahemad revealed the thriving population of Black bucks and based on their report the Govt. of Karnataka declared these grassland a community reserve. Ever since the discovery of this grassland habitat, WANC has stood behind the reserve as guarding sentinels. They have provided advocacy for conservation in every capacity ranging from being scientific advisers to mediators who do counselling to the stake holders.

                      A Muppet of a Bull                                             Manu.K
The work force of WANC has constantly kept up with the demanding times and tries to upgrade their volunteers. They are able to pool in life science students from Tumkur and carry out the status survey of the species. Their recommendations are sound and valid but yet to be taken up by the government.  Their studies did reveal like elsewhere plantation of alien species was the worst enemy for the black bucks. Prasanna D R, an ardent member of the club took up the studies of the Black bucks of Mydanahalli as his subject of doctoral theses.  Ever since his research work began, the census has almost become an annual feature.

                  A village enthralled in its own celebrations             Manu.K
Last fortnight about seventy students and thirty forest staff gathered at Mydanahalli to conduct the count. It was a Saturday in the festive season. The village of Puruvara was all immersed in festive gay. The prevailing drought had not put off the villagers from celebrating the festive of pomp. There were loud music and processions in the hot sun and the road leading to Mydanahalli was blocked due to the erection of a Drama pendhal.

 The students gathered by evening and the organizers had arranged three sessions making the event an intense workshop on people’s role in Wildlife conservation. TVN Murthy, the founder Secretary of WANC who is also the Honorary Wildlife Warden of Tumkur Distrrict presented the colorful saga of the club since its inception. He narrated all the good work they carried out in their district from field surveys to campaigns and perusing Public Interest Litigation. He left behind a mark of Wildlife Patriotism on the young minds and invited them all to join in their efforts to serve Nature.
                               The late evening session                                      
Later on Ameen Ahemad took up the Dias and mesmerized the youth through his historical diggings. His anecdotes based on the dairies and biographies of travellers and resident British officers were illustrative in itself.  His slides of pictures and paintings of the Tumkur area of the raj era captivated the young minds. They were astonished to take the fact that the entire area was grassland and home for black bucks and their predators like hunting cheetah and Grey wolves.
Fall-in order at dawn......
Finally, Dr. Prasanna D R converged the discussion into the issue of Black bucks. He gave an over view of the species, its physical features, identifying tips and its status. His slides illustrated the variations in the colouration of the species, demography and lifestyle of blackbucks.  Line transects method of counting the population was also narrated so well that the students would be able to count them with ease. The forest officials’ right from the DCF to foot soldiers were all present for the smooth sailing of the program. 
             The early morning Address        Manu.K                

After Dinner the forest watchers were briefed about the different transects and how to go about them.  Prasanna sat burning the midnight oil in dividing the teams of the congregation of youth. There were 26 teams in all and there was a logical mix up of forest officials in most of them. Members of WANC and other invites with Naturalist background led the groups where there was no forest official.
Final tips before the start of  the Annual Black buck Count,

The teams were all up and active before sun rise. After a final briefing the teams were all taken in jeeps and cars to be dropped in their respective destinations. The teams had to start sharp at seven in the morning and walk back in their designated paths back to the base.  In about three hours the census was over.  The process of tabulation was on and would be out in a day or two.
The tabulation team



It was indeed a great effort of the WANC team to utilize the rare opportunity of a routine exercise into a wonderful time of  learning and understanding for the youth. Unless the youth are exposed to the wonders of their land and legacy the youth may not value their heritage. Being through the census the youngsters were exposed to numerous things which their colleges would not have  exposed them to.

May the efforts of WANC and the forest department bring in lot of laurels along with the consciousness of conservation and the plight of wildlife of this country. 

  

Sunday, 16 August 2015

ಕಣಜದ ಬೆನ್ನೇರಿ ಬೆಳೆದ ಜ್ಞಾನದ ಕಣಜ : ನಾಗೇಶ ಹೆಗಡೆ

ಡಾ. ರಾಘವೇಂದ್ರ ಗದಗಕರ್
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್ಸಿ) ಬಂದರೆ ಅಲ್ಲಿನ ಪರಿಸರ ವಿಜ್ಞಾನ ಕೇಂದ್ರದಲ್ಲಿ ಜೇನುಪೆಟ್ಟಿಗೆಗಳಂಥ ಸಾಲು ಸಾಲು ಆಕೃತಿಗಳು ಕಾಣುತ್ತವೆ. ಕೆಲವು ಪಾರದರ್ಶಕ, ಕೆಲವಕ್ಕೆ ಕಿಟಕಿಗಳಿವೆ. ಇನ್ನು ಕೆಲವು ಪೆಟ್ಟಿಗೆಗಳಲ್ಲಿ ಬೆಳಕು ಮಿನುಗುತ್ತಿರುತ್ತದೆ. ಮತ್ತೆ ಕೆಲವು ಪೆಟ್ಟಿಗೆಗಳು ಗಣಕದ ಸಾಧನಗಳಿಗೆ ಜೋಡಣೆಗೊಂಡಿವೆ.

ಪೆಟ್ಟಿಗೆಗಳಲ್ಲಿ ಜೇನಲ್ಲ, ಕಣಜದ ಕೀಟಗಳು ಮನೆ ಮಾಡಿಕೊಂಡಿವೆ. ಅವು ಗೂಡುಗಳಲ್ಲಿ ಓಡಾಡಿಕೊಂಡೇ ನಾನಾ ದೇಶಗಳ ಖ್ಯಾತ ವಿಜ್ಞಾನಿಗಳನ್ನು ತಮ್ಮತ್ತ ಸೆಳೆಯುತ್ತಿವೆ. ಕಳೆದ 35 ವರ್ಷಗಳಲ್ಲಿ ಸಾವಿರಾರು ಸಂಶೋಧನ ಪ್ರಬಂಧ ಗಳಿಗೆ ಜನ್ಮ ಕೊಟ್ಟಿವೆ. ವಿಜ್ಞಾನದ ವಿದ್ಯಾರ್ಥಿಗಳಿಗೆ 35ಕ್ಕೂ ಹೆಚ್ಚು ಪಿಎಚ್‌.ಡಿ.ಗಳನ್ನು ಸಂಪಾದಿಸಿಕೊಟ್ಟಿವೆ. ಸಾಮಾಜಿಕ ಜೀವವಿಜ್ಞಾನದ ಎಲ್ಲ ಪಠ್ಯಪುಸ್ತಕಗಳಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅವುಗಳನ್ನು ಇಲ್ಲಿ ಸ್ಥಾಪಿಸಿದ ಡಾ. ರಾಘವೇಂದ್ರ ಗದಗಕರ್ ಅವರಿಗೆ ಜಾಗತಿಕ ಮನ್ನಣೆಯನ್ನು ದೊರಕಿಸಿಕೊಟ್ಟಿವೆ. ಮೊನ್ನೆ ಮೊನ್ನೆ ಅವರಿಗೆ ಜರ್ಮನಿಯ ಸರ್ವಶ್ರೇಷ್ಠ ಪ್ರತಿಭಾ ಪ್ರಶಸ್ತಿಯನ್ನು ನೀಡಲಾಯಿತು.

ಭಾರತೀಯ ವಿಜ್ಞಾನ ರಂಗದ ಅತ್ಯುನ್ನತ ಪ್ರಶಸ್ತಿಗಳನ್ನೆಲ್ಲ ಪಡೆದಿರುವ ಗದಗಕರ್ ಅಮೆರಿಕ, ಜರ್ಮನಿ, ದಕ್ಷಿಣ ಆಫ್ರಿಕಾ ಹಾಗೂ ಥರ್ಡ್ವರ್ಲ್ಡ್ ವಿಜ್ಞಾನ ಅಕಾಡೆಮಿಯಿಂದಲೂ ಸನ್ಮಾನಿತರಾಗಿ ದ್ದಾರೆ. ಭಾರತೀಯ ವಿಜ್ಞಾನ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿದ್ದು, ಅವರದೇ ನೇತೃತ್ವದಲ್ಲಿ ಬರುವ ಜನವರಿಯಲ್ಲಿ ಮೈಸೂರಿನಲ್ಲಿ ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ (ಸಮ್ಮೇಳನ) ನಡೆಯಲಿದೆ. ಕಣಜದಂಥ ಯಃಕಶ್ಚಿತ್ಕೀಟದ ಬೆನ್ನೇರಿ, ತನ್ನ ಕಿಟಕಿಯಲ್ಲೇ ಕೂತ ಜ್ಞಾನದ ಕಣಜವನ್ನು ಜಗತ್ತಿಗೆ ತೋರಿಸಿ ಮಟ್ಟಕ್ಕೆ ಏರಿದ ಅಪರೂಪದ ಕನ್ನಡಿಗ ಅವರು.

ಹಾಗೆ ನೋಡಿದರೆ ರಾಘವೇಂದ್ರರು ಸಂಶೋಧಕರಾಗಿ ರೂಪುಗೊಂಡಿದ್ದು ಕಣಜಕ್ಕಿಂತ ಸಾವಿರಾರು ಪಟ್ಟು ಸೂಕ್ಷ್ಮವಾದ ಕಣಜೀವ ವಿಜ್ಞಾನದಲ್ಲಿ. ಕ್ಷಯದಂಥ ಕಾಯಿಲೆಗಳಿಗೆ ಕಾರಣ ವಾಗುವ ಸೂಕ್ಷ್ಮಾಣುಗಳ ಒಳಹೊಕ್ಕು ಅವನ್ನೇ ಸಾಯಿಸಬಲ್ಲ ವೈರಸ್ಗಳ ಅಧ್ಯಯನ ಮಾಡಿದ ಇವರಿಗೆ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಎಚ್‌.ಡಿ. ಆಗತಾನೆ (1979) ಲಭಿಸಿತ್ತು. ಹೆಚ್ಚಿನ ಸಂಶೋಧನೆಗೆ ಅಮೆರಿಕಕ್ಕೆ ಹೋಗುವ ಅವಕಾಶ ಬಾಗಿಲಿಗೆ ಬಂದಿತ್ತು. ಆದರೆ ಹಠಾತ್ತಾಗಿ ಅಲ್ಲೊಂದು ತಿರುವು ಕಂಡಿತು. ಅದೇ ಲ್ಯಾಬಿನಲ್ಲಿ ಇನ್ನೊಬ್ಬನ ಮೇಜಿನ ಮೇಲಿದ್ದಕರೆಂಟ್ ಸೈನ್ಸ್ಎಂಬ ಪತ್ರಿಕೆ ಕಣ್ಣಿಗೆ ಬಿತ್ತು. ಅದನ್ನು ಹೀಗೇ ತಿರುವಿ ಹಾಕುತ್ತಿದ್ದಾಗ, ಕಣಜದ ಹುಳುಗಳ ವರ್ತನೆಯ ಬಗ್ಗೆ ಡಾ. ಮಾಧವ ಗಾಡ್ಗೀಳರು ಬರೆದ ಚಿಕ್ಕ ಟಿಪ್ಪಣಿಯೊಂದು ಕಾಣಿಸಿತು. ರಾಘವೇಂದ್ರರ ನೆನಪು ಹತ್ತು ವರ್ಷಗಳ ಹಿಂದಕ್ಕೆ ಹೋಯಿತು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಪದವಿ ಕ್ಲಾಸಿನಲ್ಲಿ ವಿಜ್ಞಾನದ ನೀರಸ ಪಾಠಗಳನ್ನು ಕೇಳುವಾಗಲೆಲ್ಲ ರಾಘವೇಂದ್ರನ ದೃಷ್ಟಿ ಕಿಟಕಿಯ ಕಡೆಗೇ ಇರುತ್ತಿತ್ತು. ಕಣಜದ ನೊಣಗಳ ಅದೆಷ್ಟೊ ಹೊಸ, ಹಳೇ ಗೂಡುಗಳು ಅಲ್ಲಿದ್ದವು. ಹೊಸ ಗೂಡುಗಳು ಹಳತಾದಂತೆ ದಿನವೂ ಹೊಸ ಗಾತ್ರ, ಹೊಸ ರೂಪ ತಳೆಯು ತ್ತಿದ್ದವು. ಪದವಿ ಮುಗಿಸಿ, ಜೀವವಿಜ್ಞಾನದಲ್ಲಿ ಎಮ್ಎಸ್ಸಿ ಓದ ಲೆಂದು ಬೇರೆ ಕ್ಲಾಸಿನಲ್ಲಿ ಕೂತಿದ್ದರೆ ಅಲ್ಲೂ ಕಣಜದ ಗೂಡುಗಳೇ ಕಾಣಿಸುತ್ತಿದ್ದವು. ಸಣ್ಣ ಕೀಟಗಳ ಅಸಾಮಾನ್ಯ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿಶ್ವಮಾನ್ಯರೆನಿಸಿದ ..ವಿಲ್ಸನ್ ಬರೆದ ಪುಸ್ತಕಗಳನ್ನೆಲ್ಲ ಓದಿದರು. ಕಾನ್ರಾಡ್ ಲಾರೆಂಝ್, ಡಾರ್ವಿನ್, ರಿಚರ್ಡ್ ಡಾವ್ಕಿನ್ಸ್ ಮುಂತಾದವರ ಕೃತಿಗಳನ್ನು ಓದುತ್ತ ತಾನೇ ಸ್ವತಃ ಪುಸ್ತಕದ ಹುಳುವಾದರು. ಮುಂದೆ ಪಿಎಚ್‌.ಡಿ.ಗಾಗಿ ಸೂಕ್ಷ್ಮ ಲೋಕಕ್ಕಿಳಿದರೂ ಕಣಜ ವೀಕ್ಷಣೆ ಅವರ ಹವ್ಯಾಸವಾಯಿತು.

ಈಗ ಅಕಸ್ಮಾತ್ತಾಗಿ ಅದೇ ಕಣಜಗಳ ಕುರಿತ ಗಾಡ್ಗೀಳರ ಟಿಪ್ಪಣಿಯನ್ನು ಓದಿದವರೇ ಡಾ. ಗದಗಕರ್ ಪಕ್ಕದ ಪರಿಸರ ವಿಜ್ಞಾನ ವಿಭಾಗದಲ್ಲಿದ್ದ ಗಾಡ್ಗೀಳರ ಬಳಿ ಧಾವಿಸಿ ತಮ್ಮ ಆಸಕ್ತಿಯನ್ನೆಲ್ಲ ವಿವರಿಸಿದರು. ಗಾಡ್ಗೀಳ್ ಮತ್ತು ..ವಿಲ್ಸನ್ ಇಬ್ಬರಿಗೂ ಸ್ಟ್ಯಾನ್ಫೋರ್ಡ್ ವಿ.ವಿ.ಯಲ್ಲೇ ಗೆಳೆತನವಿತ್ತು. ರಾಘವೇಂದ್ರರ ಉತ್ಸಾಹ ಎಷ್ಟಿತ್ತೆಂದರೆ ಗಾಡ್ಗೀಳರು ತಮ್ಮ ಸ್ಕೂಟರ್ ಮೇಲೆ ಅವರನ್ನು ಕೂರಿಸಿಕೊಂಡು ಸೆಂಟ್ರಲ್ ಕಾಲೇಜಿನ ಕಿಟಕಿಗಳ ಬಳಿ ಬಂದರು. ಇವರ ಬರುವಿಕೆಗೇ ಕಾದಂತಿದ್ದ ಕಣಜದ ಕೀಟಗಳು ಇವರಿಗಾಗಿ ಅಧ್ಯಯನದ ಹೊಸ ಕಿಟಕಿ ಗಳನ್ನು ತೆರೆದವು. ಅಮೆರಿಕಕ್ಕೆ ಹೋಗಲೆಂದು ಪೆಟ್ಟಿಗೆ ಕಟ್ಟಿ ನಿಂತ ಡಾ. ರಾಘವೇಂದ್ರ ಗದಗಕರ್ ಕಣಜಗಳ ಅಧ್ಯಯನಕ್ಕೆ ಪೆಟ್ಟಿಗೆ ಗಳನ್ನು ನಿರ್ಮಿಸುತ್ತ ಐಐಎಸ್ಸಿಯಲ್ಲೇ ಕೂತರು. ಕೂತಲ್ಲೇ ಏರುತ್ತ ಹೋದರು.

ಅತ್ತ ಇರುವೆಗಳೂ ಅಲ್ಲದ, ಇತ್ತ ಜೇನ್ನೊಣಗಳೂ ಅಲ್ಲದ ಕಣಜಗಳಲ್ಲಿ ನಾನಾ ವರ್ಗಗಳಿವೆ. ಅವುಗಳಲ್ಲಿ ರಾಘವೇಂದ್ರ ಅವರಿಗೆ ತೀರ ಪ್ರಿಯವಾದವುರೋಪಲಿಡಿಯಾ ಮಾರ್ಜಿನೇಟಾನೂರಾರು ಸದಸ್ಯರಿರುವ ಇವುಗಳ ಕುಟುಂಬದಲ್ಲೂ ಜೇನಿನಂತೆ ರಾಣಿ, ಗಾರೆ ಕೆಲಸದವಳು, ಕಾವಲುಗಾರ್ತಿಯರು, ದಾದಿಯರು, ಆಹಾರ ಸಂಪಾದಕಿ, ಮೈಗಳ್ಳ ಗಂಡು ಎಲ್ಲ ಇರುತ್ತವೆ. ಕನ್ನಡದ ಬಾವುಟದಂತೆ ಕೆಂಪು ಹಳದಿಯ ಪಟ್ಟೆ ಹೊದೆದು ಎಲ್ಲ ಹುಳುಗಳೂ ಒಂದೇ ಥರಾ ಕಾಣುತ್ತವೆ. ಗುರುತಿಸುವುದು ಹೇಗೆ? ಅಲ್ಲಿಂದ ಇವರ ಸಂಶೋಧನೆ ಪ್ರಾರಂಭವಾಗುತ್ತದೆ. ಒಂದೊಂದು ಕೀಟಕ್ಕೂ ಗುರುತಿನ ಬಣ್ಣ ಬಳಿಯಬೇಕು. ಅದಕ್ಕೆ ಬೇಕಾದ ವಿಶಿಷ್ಟ ಬಣ್ಣವನ್ನು ಅಮೆರಿಕದಿಂದ ತರಿಸಿಕೊಂಡು ಒಂದೊಂದು ಕೀಟದ ಚಟುವಟಿಕೆಯನ್ನೂ ಹಗಲಿಡೀ ಗ್ರಹಿಸುತ್ತ ಇವರು ಒಂದರ ಮೇಲೊಂದರಂತೆ ಅದ್ಭುತ ವಿಚಾರಗಳನ್ನು ಪತ್ತೆ ಮಾಡುತ್ತಾರೆ.

ರಾಣಿಯ ಪಟ್ಟ ಹೇಗೆ ಆಗಾಗ ಬದಲಾಗುತ್ತದೆ, ಹೊಸ ರಾಣಿಯಾಗುವವಳು ಹೇಗೆ ಅಧಿಕಾರ ಚಲಾಯಿಸುತ್ತಾಳೆ, ಮಧ್ಯೆ ಮಧ್ಯೆ ಹೊಸ ಗಂಡನ್ನು ಕೂಡುವುದರಿಂದ ಇಡೀ ಗೂಡಿಗೆ ಹೇಗೆ ಲಾಭವಾಗುತ್ತದೆ, ಮೇಲುವರ್ಗದ ಜೀವಿಗಳಲ್ಲಿ ಸ್ವಾರ್ಥ, ತ್ಯಾಗ, ಸಹಕಾರ, ಬಡಿದಾಟವೇ ಮುಂತಾದ ವರ್ತನೆಗಳಿಗೆ ಕಣಜಗಳು ಹೇಗೆ ಮೇಲ್ಪಂಕ್ತಿ ಆಗುತ್ತವೆ ಎಂಬುದನ್ನೆಲ್ಲ ವಿಜ್ಞಾನ ಲೋಕಕ್ಕೆ ತಿಳಿಸುತ್ತ, ಹೊಸ ಸಿದ್ಧಾಂತಗಳನ್ನು ಮಂಡಿಸುತ್ತ, ದೇಶ ವಿದೇಶಗಳಲ್ಲಿ ಖ್ಯಾತರಾಗುತ್ತ ಹೋಗುತ್ತಾರೆ. ಕೀಟಗಳ ಅಧ್ಯಯನ ವಿಧಾನದಲ್ಲೂ ಹೊಸ ಹೊಸ ಸರಳ ಸಾಧನಗಳನ್ನು ರೂಪಿಸುತ್ತ ತಮ್ಮ ಇಡೀ ತಂಡವನ್ನು ವಿಕಾಸದ ಮಾರ್ಗದಲ್ಲಿ ಕೊಂಡೊಯ್ಯು ತ್ತಾರೆ. ಇವರು ಬರೆದ ಪುಸ್ತಕ ಚೀನಿ, ಕೊರಿಯನ್ ಭಾಷೆಗೂ ತರ್ಜುಮೆಯಾಗುತ್ತದೆ.

ಕನ್ನಡ ಕುಟುಂಬದಿಂದಲೇ ಬಂದಿದ್ದರೂ ಸೈನ್ಯಾಧಿಕಾರಿಯ ಮಗನಾಗಿ ಕಾನಪುರದಲ್ಲಿ ಜನಿಸಿ, ವಿವಿಧ ರಾಜ್ಯಗಳಲ್ಲಿ ಬೆಳೆಯುತ್ತ, ಹದಿವಯಸ್ಸಿನಲ್ಲಿ ಬೆಂಗಳೂರಿಗೆ ಬಂದು, ಪರಭಾಷೆಯಲ್ಲೇ ಹೈಸ್ಕೂಲು ಕಾಲೇಜು ಓದುತ್ತ ಕನ್ನಡ ಓದು ಬರಹವನ್ನು ಸ್ವಂತ ಆಸಕ್ತಿಯಿಂದ ಕಲಿತವರು ಇವರು. ಕಾಲೇಜಿನಲ್ಲಿ ಕತೆಗಾರ ರಾಘವೇಂದ್ರರ ಖಾಸನೀಸರ ಖಾಸಾ ದೋಸ್ತರಾಗಿದ್ದರು. ಸೆಂಟ್ರಲ್ ಕಾಲೇಜಿನಲ್ಲೇ ಸ್ನೇಹಿತೆಯಾಗಿದ್ದ ಪತ್ನಿ ವಿಜಯಗೀತಾ ಕೂಡ ಐಐಎಸ್ಸಿಯಲ್ಲಿ ವಿಜ್ಞಾನಿಯಾಗಿದ್ದವರು; ಮಗ ವಿಕ್ರಮ್ ಕಾರ್ನೆಲ್ ವಿ.ವಿ.ಯಲ್ಲಿ ವಿಜ್ಞಾನಿಯಾಗಿ ರೂಪುಗೊಳ್ಳುತ್ತಿದ್ದಾನೆ.

ವಿಜ್ಞಾನದಾಚಿನ ಅಪರಿಮಿತ ವಿಷಯಗಳಲ್ಲೂ ಆಸಕ್ತಿ ಇಟ್ಟುಕೊಂಡು ಪುಸ್ತಕದ ಹುಳುವೆನಿಸಿದ ಇವರಿಗೆ ಈಗಿನ ವಿಜ್ಞಾನಿಗಳನ್ನು ಅವರವರ ಪೊಟರೆಗಳಿಂದ ಈಚೆ ಎಳೆಯ ಬೇಕೆಂಬ ಆಸೆ. ಅದಕ್ಕೆಂದೇ ಐಐಎಸ್ಸಿಯಲ್ಲಿಸಮಕಾಲೀನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಅಲ್ಲಿ ಸಾಹಿತ್ಯ, ತತ್ವಶಾಸ್ತ್ರ, ಕಲೆ, ತರ್ಕಶಾಸ್ತ್ರವೇ ಮುಂತಾದ ವಿಜ್ಞಾನೇತರ ವಿಷಯ ತಜ್ಞರಿಂದ ಉಪನ್ಯಾಸ ಏರ್ಪಡಿಸುತ್ತಾರೆ. ದಶಕಗಳಿಂದ ಅದರ ಸಂಸ್ಥಾಪಕ ಅಧ್ಯಕ್ಷರಾಗಿರುವ ಇವರು ಪ್ರೊ. ಯು.ಆರ್.ಅನಂತಮೂರ್ತಿಯವರನ್ನೂ ಸಂದರ್ಶಕ ಪ್ರಾಧ್ಯಾಪಕರೆಂದು ಕರೆಸಿಕೊಂಡು ಒಡನಾಡಿದವರು.


ವಿಜ್ಞಾನಿ ಆಗಬೇಕೆಂದಿದ್ದರೆ ಸಾಧಾರಣ ಕ್ಲಾಸ್ರೂಮುಗಳೂ ಸರಳ ಸಲಕರಣೆಗಳೂ ಅವಕಾಶಗಳ ಮಹಾಬಾಗಿಲನ್ನೇ ತೆರೆಯಲು ಸಾಧ್ಯವೆಂದು ತೆರೆದು ತೋರಿಸಿದವರು ಇವರು.
 Courtesy: http://www.prajavani.net/article/